This is the title of the web page
This is the title of the web page

Please assign a menu to the primary menu location under menu

Local News

JOB ALERT: ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ


ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕಾರಣಾಂತರಗಳಿAದ ಖಾಲಿಯಾದ ಗ್ರಾಮ ಪಂಚಾಯತ ಗ್ರಂಥಾಲಯಗಳಿಗೆ ಗ್ರಂಥಾಲಯ ಮೇಲ್ವಿಚಾರಕರನ್ನು ಗೌರವ ಸಂಭಾವನೆಯ ಆಧಾರದ ಮೇಲೆ ನೇಮಕಾತಿಗಾಗಿ ನಿಗದಿಪಡಿಸಿದ ಮೀಸಲಾತಿಗೆ ಅನುಗುಣವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗ್ರಾಮ ಮತ್ತು ಮೀಸಲಾತಿ: ಅಂಕಲಿ( ಚಿಕ್ಕೋಡಿ) – ಪರಿಶಿಷ್ಟ ಜಾತಿ ಅಭ್ಯರ್ಥಿ, ಗ್ರಾಮೀಣ ಅಭ್ಯರ್ಥಿ, ಹಲಗಾ ಮತ್ತು ಸುಳೇಭಾವಿ (ಬೆಳಗಾವಿ) – ಸಾಮಾನ್ಯ ಅಭ್ಯರ್ಥಿ, ಯೋಜನಾ ಅಭ್ಯರ್ಥಿ ಮತ್ತು ಪರಿಶಿಷ್ಟ ಜಾತಿ ಅಭ್ಯರ್ಥಿ, ಹಲ್ಯಾಳ, ನಾಗನೂರ.ಪಿ.ಕೆ., ಹೊಸವಂಟಮೂರಿ (ಬೆಳಗಾವಿ)- ಪರಿಶಿಷ್ಟ ಜಾತಿ ಅಭ್ಯರ್ಥಿ, ಸಪ್ತಸಾಗರ ಮತ್ತು ಮಂಗಸೂಳಿ (ಅಥಣಿ) – 2 ‘ಬಿ’, ಮಹಿಳಾ ಅಭ್ಯರ್ಥಿ, ಸಾಮಾನ್ಯ ಅಭ್ಯರ್ಥಿ, ಪರಿಶಿಷ್ಟ ಪಂಗಡ ಅಭ್ಯರ್ಥಿ, ಮಹಿಳಾ ಅಭ್ಯರ್ಥಿ ಮತ್ತು ಸಾಮಾನ್ಯ ಅಭ್ಯರ್ಥಿ, ಮಾಜಿ ಸೈನಿಕ ಅಭ್ಯರ್ಥಿ , ಹೆಬ್ಬಾಳ ಮತ್ತು ಹೊಸೂರ(ಹುಕ್ಕೇರಿ) – ಸಾಮಾನ್ಯ ಅಭ್ಯರ್ಥಿ, ಮಹಿಳಾ ಅಭ್ಯರ್ಥಿ, 2 ‘ಎ’, ಗ್ರಾಮೀಣ ಅಭ್ಯರ್ಥಿ, ಅಂಗವಿಕಲ ಅಭ್ಯರ್ಥಿ, ಕರಂಬಳ(ಖಾನಾಪೂರ) – ಪರಿಶಿಷ್ಟ ಜಾತಿ ಅಭ್ಯರ್ಥಿ, ಮಹಿಳಾ ಅಭ್ಯರ್ಥಿ, ಚುಳಕಿ( ಸವದತ್ತಿ) – ಪರಿಶಿಷ್ಟ ಜಾತಿ ಅಭ್ಯರ್ಥಿ, ಅಂಗವಿಕಲ ಅಭ್ಯರ್ಥಿ.

ಷರತ್ತುಗಳು : ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಂಕ ಹಾಗೂ ಶೇಕಡಾವಾರು ಅಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಸ್ಥಳೀಯ ಗ್ರಾಮ ಪಂಚಾಯತ ವ್ಯಾಪ್ತಿಗೆ ಸೇರಿರಬೇಕು. ಕಡ್ಡಾಯವಾಗಿ ತಹಶೀಲ್ದಾರರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ ಲಗತ್ತಿಸಿರಬೇಕು. ನಿಗದಿಪಡಿಸಿದ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸತಕ್ಕದ್ದು. ಮುಂದುವರಿಕೆ ಶಿಕ್ಷಣದ ಅಡಿಯಲ್ಲಿ ಪ್ರೇರಕ/ಉಪ ಪ್ರೇರಕರು ಮತ್ತು ಸಂಯೋಜಕರೆAದು ಸೇವೆ ಸಲ್ಲಿಸಿದ್ದಲ್ಲಿ ಅಂತಹವರಿಗೆ ಪ್ರಾಧಾನ್ಯತೆ ನೀಡಲಾಗುವುದು (ಜಿಲ್ಲಾ &ತಾಲೂಕಾ ಸಂಯೋಜಕರಿAದ ಪಡೆದ ಪ್ರಮಾಣ ಪತ್ರಗಳನ್ನು ಮಾತ್ರ ಪರಿಗಣಿಸಲಾಗುವುದು

`https://zpbelagavi.kar.nic.in’’ಜಿಲ್ಲಾ ಪಂಚಾಯತ್ ಅಂತರ್ಜಾಲದ (Online Application)) ಮೂಲಕ ಅರ್ಜಿಗಳನ್ನು ಫೆಬ್ರವರಿ 19 (ಸಂಜೆ 5.30ಗಂಟೆ) ಒಳಗಾಗಿ ನಿಗದಿಪಡಿಸಿದ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಸಾಮಾನ್ಯ ವರ್ಗ 36 ವರ್ಷಗಳು, 2ಎ, 2ಬಿ, 3ಎ, 3ಬಿ 38 ವರ್ಷಗಳು, ಪ.ಜಾ/ಪ.ಪಂ.ಪ್ರ-1 40 ವರ್ಷಗಳು ಗರಿಷ್ಠ ವಯೋಮಿತಿ ಹೊಂದಿರಬೇಕು. ಅರ್ಜಿ ನಮೂನೆ ಹಾಗೂ ಅಧಿಸೂಚನೆ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ. ಹಾಗೂ ಅರ್ಜಿಗಳನ್ನು ಸಲ್ಲಿಸಲು ಹೆಚ್ಚಿನ ಮಾಹಿತಿಗಾಗಿ “ಉಪ ನಿರ್ದೇಶಕರ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಬೆಳಗಾವಿ”(ದೂರವಾಣಿ ಸಂಖ್ಯೆ: (0831)2424231) ಸಂಪರ್ಕಿಸಿಬಹುದು. ಈ ಮೇಲ್ವಿಚಾರಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.12,000/-ರಂತೆ ಗೌರವ ಸಂಭಾವನೆ ಇರುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply