ಬೆಳಗಾವಿ: ವಿಕಲಚೇತನರಿಗಾಗಿ ಏಳು ಈ ಮೇಳದಲ್ಲಿ ಭಾಗವಹಿಸಲಿವೆ. 25 ರಂದು ಬೆಳಿಗ್ಗೆ 9 ರಿಂದ ಮದ್ಯಾಹ್ನ 3ರ ವರೆಗೆ ಬೆಳಗಾವಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಾಗಿದೆ ಎಂದು ಸಮರ್ಥನಮ್ ಅಂಗವಿಕಲರ ಸಂಸ್ಥೆಯ ಸಂಸ್ಥಾಪಕ ಮಹಾಂತೇಶ್ ಕಿವಡಸನ್ನವರ್ ಹೇಳಿದರು.
ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡಿದರು. ವಿಕಲ ಚೇತನರಿಗೆ ಉದ್ಯೋಗವಕಾಶ ನೀಡುವ ಉದ್ದೇಶದಿಂದ ನಗರದ ಅಲ್ವಾನ್ ಗಲ್ಲಿ ಹಾಗು ಶಹಪೂರದಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ಪಿಯುಸಿ, ಡಿಪ್ಲೊಮಾ, ಬೀ.ಇ, ಅಥವಾ ಯಾವುದೇ ಪದವಿ ಪಡೆದ ವಿಕಲಚೇತನರು ಭಾಗಿಯಾಗಿ, ತಮ್ಮ ಕನಸಿನ ಕಂಪನಿಗಳಲ್ಲಿ ಉದ್ಯೋಗ ಪಡೆಯಬೇಕೆಂದು ವಿನಂತಿಸಿದರು.
ವಾಲ್ಕ್, ಶ್ರವಣದೋಷ, ಅರೆ ಅಂದತ್ವ ಇರುವ ಉದ್ಯೋಗ ಆಕಾoಕ್ಷಿಗಳಿಗೆ ಆದ್ಯತೆ ನೀಡಲಾಗಿದ್ದು,. ಸುಮಾರು 8 – 10 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಳೆದ 25 ವರ್ಷಗಳಿಂದ ಸಮರ್ತನಮ್ ಅಂಗವಿಕಲ ಸಂಸ್ಥೆಯು ಅಂಧರು, ಅಂಗವಿಕಲರು, ಆರ್ಥಿಕವಾಗಿ ಹಿಂದುಳಿದವರು ಇಂತವರ ಅಭಿವೃದ್ದಿಗಾಗಿ ಸೇವೆ ಸಲ್ಲಿಸುತ್ತಾ ಬಂದಿದೆ, ಅದಕ್ಕಾಗಿಯೇ ನಮ್ಮ ಸಂಸ್ಥೆಗೆ ರಾಷ್ಟ್ರಪ್ರಶಸ್ತಿ ಕೂಡಾ ದೊರಕಿದೆ ಎಂದು ಈ ಸಂಧರ್ಭದಲ್ಲಿ ಅವರು ತಿಳಿಸಿದರು.
ಬೆಳಗಾವಿಯ ಶಾಖಾ ಮುಖ್ಯಸ್ಥರಾದ ಅರುಣಕುಮಾರ ಎಂ ಜಿ. ಅವರು ಮಾತನಾಡಿ, ಕಳೆದ ಎರಡು ವರ್ಷದ ಕೋವಿಡ ಸಮಯದಲ್ಲಿ ಬೆಳಗಾವಿಯ ಬೀಮ್ಸ್ ಆಸ್ಪತೆಗೆ, ಸಿಬ್ಬಂದಿಗೆ, ಆಶಾ ಕಾರ್ಯರ್ತೆಯರಿಗೆ, ಪೊಲೀಸ್ ಸಿಬ್ಬಂದಿಗೆ ಹೀಗೆ ಎಲ್ಲಾ ಕರೋನಾ ವಾರಿಯರ್ಸ್ ಗೆ ನಮ್ಮ ಸಂಸ್ಥೆ ವತಿಯಿಂದ ಸುಮಾರು 60 ಲಕ್ಷದ ಸಲಕರಣೆ ವಸ್ತು, ಕಿಟ್ಟಗಳನ್ನು ವದಗಿಸಿದ್ದೇವೆ.
ಬೆಳಗಾವಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಸುಮಾರು 20ಸಾವಿರ ಜನರಿಗೆ ಸಂಸ್ಥೆಯಿಂದ ಲಸಿಕೆ ನೀಡಲಾಗಿದೆ. ನಗರದ ಆಯ್ದ 5 ಆಸ್ಪತ್ರೆಗಳಿಗೆ 40 ಲಕ್ಷದ icu ಬೆಡ್ ಗಳನ್ನ, ಪರ್ನಿಚರ್ಗಳನ್ನೂ ನೀಡಲಾಗಿದೆ.. ಪ್ರಸ್ತುತವಾಗಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಅಂಗವಿಕಲ ಅಭ್ಯರ್ಥಿಗಳ ನಿರುದ್ಯೋಗ ನಿವಾರಣೆ ಮಾಡಲು ಸಂಸ್ಥೆಯಿಂದ ಈ ಉದ್ಯೋಗ ಮೇಳವನ್ನು ಆಯೋಜಸಲಾಗಿದೆ ಅದಕ್ಕೆ ಎಲ್ಲರ ಸಹಕಾರವಿರಲಿ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾರ್ಯದರ್ಶಿ ಗಿರೀಶ್ ಸವಾಸೇರಿ, ಸದಸ್ಯರಾದ ಕೃಷ್ಣಾ ಲಮಾಣಿ, ಪಂಡಿತ,ಸಂಚಲಕಿಯಾದ ದೀಪಾ ಹಾಗೂ ಸಂಸ್ಥೆಯ ಹಲವಾರು ಜನರು ಉಪಸ್ಥಿತರಿದ್ದರು.