This is the title of the web page
This is the title of the web page

Please assign a menu to the primary menu location under menu

State

ಉದ್ಯೋಗ ಮೇಳ


ಗದಗ ಡಿಸೆಂಬರ್ ೩: ಜಿಲ್ಲಾ ಕೌಶಲ್ಯ ಮಿಷನ್‌ದಿಂದ ಡಿಸೆಂಬರ್ ೯ ರಂದು ಶುಕ್ರವಾರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೩ ಘಂಟೆಯವರೆಗೆ ಗಜೇಂದ್ರಗಡ ತಾಲೂಕಿನ ಶ್ರೀ ಅನ್ನದಾನೇಶ್ವರ ಖಾಸಗಿ ಐ.ಟಿ.ಐ., ಕಾಲೇಜು, ಗಜೇಂದ್ರಗಡದಲ್ಲಿ ಉದ್ಯೋಗ ಮೇಳ (ನೇರ ಸಂದರ್ಶನ) ಹಮ್ಮಿಕೊಳ್ಳಲಾಗಿದೆ.
ಮೇಳದಲ್ಲಿ ೧೦ ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗವಹಿಸಲಿವೆ. ೧೮ ರಿಂದ ೩೫ ವರ್ಷದೊಳಗಿನ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ, ಯಾವುದೇ ಪದವಿ ಪಾಸಾದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಆಸಕ್ತ ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆಯ ಮೂಲ ಪ್ರಮಾಣಪತ್ರಗಳು, ಆಧಾರಕಾರ್ಡ ಪ್ರತಿ (ಕಡ್ಡಾಯ), ಬಯೋಡಾಟಾ ೨ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯ ಮಿಷನ್, ಗದಗ ದೂರವಾಣಿ ಸಂಖ್ಯೆ : ೦೮೩೭೨-೨೯೫೫೮೩, ೯೩೮೦೯೮೫೧೨೩, ೯೯೦೧೯೦೨೩೨೭, ೯೯೮೬೭೫೩೧೬೫, ೯೭೩೧೩೨೩೯೧೨ ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply