ಬೆಂಗಳೂರು: ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ತರಬೇತಿಯು ಅತಿ ಅವಶ್ಯವಾಗಿದೆ. ತರಬೇತಿ ಪಡೆದರೆ ಮಾತ್ರ ಉನ್ನತವಾಗಿ ಬೆಳೆಯಲು ಸಾಧ್ಯ ಎಂದು ಮುಖ್ಯ ಅತಿಥಿ ಜಂಟಿ ಕಾರ್ಮಿಕ ಆಯುಕ್ತ ಎಂ.ಎಸ್. ಚಿದಾನಂದ್ ಹೇಳಿದರು.
ನಗರದ ಬಾಗಲಗುಂಟೆಯ ಮಂಜುನಾಥ ನಗರದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ, ಬೆಂಗಳೂರು ವತಿಯಿಂದ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಸಿಬ್ಬಂದಿಗಳಿಗೆ ಇಂದು ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿ ಹಕ್ಕು ಅಧಿನಿಯಮ, ನ್ಯಾಯಾಲಯದ ಪ್ರಕರಣಗಳು, ಮುಂತಾದ ಸರ್ಕಾರಿ ವಿಧಿವಿಧಾನಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು ಅದರಂತೆ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕೆಂದು ಹೇಳಿದರು.
ಇನ್ನೊರ್ವ ಅತಿಥಿ ಸಹಾಯಕ ಕಾರ್ಮಿಕ ಆಯುಕ್ತ ದೇವರಾಜ್, ಮಾತನಾಡಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಸಿಬ್ಬಂದಿಗಳಿಗೆ ಪದೋನ್ನತಿ ಹೊಂದಿರುವುದಕ್ಕೆ ಮೊದಲು ಅಭಿನಂದನೆಗಳನ್ನು ಸಲ್ಲಿಸಿದರು. ತರಬೇತಿ ಕಾರ್ಯಾಗಾರಗಳಿಂದ ಗೊತ್ತಿರದ ವಿಷಯಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಶೃದ್ಧೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಮಾರ್ಗದರ್ಶನ ನೀಡಿದರು.
ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ರಿಜಿಸ್ಟಾçರ್ ಜಾನ್ಸನ್. ಕೆ.ಜಿ. ಅವರು ಮಾತನಾಡಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಸಿಬ್ಬಂದಿಗಳಿಗೆ ಕೊವೀಡ್ ಮತ್ತು ಅನೇಕ ಕಾರಣಾಂತರಗಳಿAದ ತರಬೇತಿ ನೀಡಲು ಸಾಧ್ಯವಾಗಿರಲಿಲ್ಲ. ಈಗ ಅದು ಸಾಧ್ಯವಾಗಿದೆ ಎಂದರು. ಕಛೇರಿಯಲ್ಲಿ ಕೇವಲ ಅಧಿಕಾರಿಗಳು ಅಷ್ಟೇ ಪ್ರಾಮುಖ್ಯತೆ ಹೊಂದಿರುವುದಿಲ್ಲ ಅವರ ಜೊತೆಗೆ ಕಛೇರಿ ಸಿಬ್ಬಂದಿಯು ಕೂಡ ಪ್ರಾಮುಖ್ಯತೆಯನ್ನು ಹೊಂದಿರುತ್ತಾರೆ. ಇಂತಹ ತರಬೇತಿ ಕಾರ್ಯಾಗಾರಗಳಿಂದ ಸಿಬ್ಬಂದಿಗಳ ಸಬಲೀಕರಣವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಕಾರ್ಮಿಕ ಆಯುಕ್ತ ಎ.ಎಚ್. ಉಮೇಶ್, ಅವರು ಮಾತನಾಡಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಸಿಬ್ಬಂದಿಗಳಿಗೆ ಇದು ಮೊದಲ ತರಬೇತಿಯಾಗಿದೆ. ತರಬೇತಿ ಕಾರ್ಯಾಗಾರದಲ್ಲಿ ಎಲ್ಲ ಸಿಬ್ಬಂದಿಗಳು ಸಕ್ರೀಯವಾಗಿ ಭಾಗವಹಿಸಿ ಅದರ ಸಂಪೂರ್ಣ ಲಾಭ ಪಡೆಯಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಯಾವತ್ತೂ ತರಬೇತಿ ಕಾರ್ಯಾಗಾರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕಾರ್ಮಿಕ ಇಲಾಖೆಯ ಆಯುಕ್ತ ಅಕ್ರಂ ಪಾಷ ಅವರಿಗೂ ಕೂಡ ಅಭಿನಂದನೆ ಸಲ್ಲಿಸಲಾಯಿತು. ಸಹಾಯಕ ಪ್ರಾಧ್ಯಾಪಕ ಶ್ರೀಕಾಂತ್. ಕೆ.ಎಸ್., ಹಿರಿಯ ಸಹಾಯಕ ಕೆ. ನಾಗೇಂದ್ರಪ್ಪ, ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಎಸ್. ಸಿದ್ದರಾಜು, ಪುನೀತ್. ಬಿ.ಎಲ್., ಟಿ.ಡಿ. ಪ್ರೇಮೇಶ್ ಮುಂತಾದವರು ಹಾಜರಿದ್ದರು. ಹಿರಿಯ ಸಹಾಯಕ ಎಸ್.ಎಲ್. ಶ್ರೀಧರ ಮೂರ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Gadi Kannadiga > State > ಕಾಲಕಾಲಕ್ಕೆ ಸರ್ಕಾರಿ ನೌಕರರಿಗೆ ತರಬೇತಿ ಕಾರ್ಯಾಗಾರ ಅತ್ಯವಶ್ಯ: ಜಂಟಿ ಕಾರ್ಮಿಕ ಆಯುಕ್ತ ಎಂ.ಎಸ್. ಚಿದಾನಂದ್
ಕಾಲಕಾಲಕ್ಕೆ ಸರ್ಕಾರಿ ನೌಕರರಿಗೆ ತರಬೇತಿ ಕಾರ್ಯಾಗಾರ ಅತ್ಯವಶ್ಯ: ಜಂಟಿ ಕಾರ್ಮಿಕ ಆಯುಕ್ತ ಎಂ.ಎಸ್. ಚಿದಾನಂದ್
khushihost12/03/2022
posted on
More important news
ಶೋಭಾ ಶಿವಾಜಿ ಪಾಟೀಲ ನಿಧನ
13/05/2022