This is the title of the web page
This is the title of the web page

Please assign a menu to the primary menu location under menu

State

ತಿಕೋಟಾ ತಾಲೂಕಿನಲ್ಲಿ ಜಿಪಂ ಸಿಇಓ ಪ್ರವಾಸ: ಬಾಬಾನಗರ, ಬಿಜ್ಜರಗಿ ಗ್ರಾಮ ಪಂಚಾಯಿತಿಗಳ ಕಾರ್ಯವೈಖರಿಗೆ ಮೆಚ್ಚುಗೆ


ವಿಜಯಪುರ : ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರು ಜುಲೈ ೬ರಂದು ತಿಕೋಟಾ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ತಾಲೂಕಿನ ಬಾಬಾನಗರ ಮತ್ತು ಬಿಜ್ಜರಗಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿದರು. ಈ ವೇಳೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಬಾಬಾನಗರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ, ಸಮಗ್ರ ಶಾಲಾ ಅಭಿವೃದ್ಧಿ ಕಾರ್ಯಕ್ರಮದಡಿ ಶಾಲೆಯೊಂದ ಸುವ್ಯವಸ್ಥೆ ಕಂಡು ಸಿಇಓ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಹೈಟೆಕ್ ಶೌಚಾಲಯ, ರನ್ನಿಂಗ್ ಟ್ರ‍್ಯಾಕ್, ಅಡುಗೆ ಕೋಣೆ, ಭೋಜನಾಲಯ, ಶಾಲಾ ಕಂಪೌAಡ್ ಮತ್ತು ಆಟದ ಮೈದಾನ ಕಾಮಗಾರಿ, ಅಮೃತ ಸರೋವರ ಕಾಮಗಾರಿ ವೀಕ್ಷಣೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೆ ವೇಳೆ ಸಿಇಓ ಅವರು ಅರಣ್ಯ ಇಲಾಖೆಯ ಸಸ್ಯಪಾಲನಾಲಯಕ್ಕೆ ಕೂಡ ಭೇಟಿ ನೀಡಿದರು. ವಿಶೇಷವಾಗಿ ಗ್ರಾಮ ಪಂಚಾಯತಿಗಳಿಗೆ ಪ್ರಥಮ ಆದ್ಯತೆಯಲ್ಲಿ ಸಸಿಗಳನ್ನು ವಿತರಿಸಬೇಕು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವಿದ್ಯಾರ್ಥಿನಿಗೆ ಸನ್ಮಾನ: ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೧೨ನೇ ತರಗತಿಯ ಪರೀಕ್ಷೆಯಲ್ಲಿ ಶೇ.೯೨.೫೦ರಷ್ಟು ಫಲಿತಾಂಶ ಪಡೆದು ಕಾಲೇಜಿಗೇ ಎರಡನೇ ಸ್ಥಾನ ಪಡೆದು ಗ್ರಾಮದ ಕೀರ್ತಿ ಹೆಚ್ಚಿಸಿದ ಬಾಬಾನಗರ ಗ್ರಾಮದ ಕುಮಾರಿ ಪೂಜಾ ತಂದೆ ಬಸಪ್ಪ ಹಡಪದ ವಿದ್ಯಾರ್ಥಿನಿಯ ಸಾಧನೆ ಕೇಳಿ ಸಂತಸ ವ್ಯಕ್ತಪಡಿಸಿದ ಸಿಇಓ ಅವರು ವಿದ್ಯಾರ್ಥಿನಿಗೆ ಸನ್ಮಾನಿಸಿ ಸ್ಫೂರ್ತಿ ತುಂಬಿದರು.
ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ: ಬಳಿಕ ಬಿಜ್ಜರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದ ೨೫ ರಿಂದ ೩೦ ಜನರೊಡನೆ ಸಮಾಲೋಚನೆ ನಡೆಸಿದರು. ವಿಶೇಷಚೇತನರೊಬ್ಬರು ೧೦೦ ದಿನಗಳನ್ನು ಪೂರ್ಣಗೊಳಿಸಿದ ಬಗ್ಗೆ ಕೇಳಿ, ಅವರಿಗೆ ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ೧೦೦ ದಿನಗಳ ಪೂರ್ಣ ಕೆಲಸ ನಿರ್ವಹಿಸಿದ ನಂತರ ವಿಶೇಷ ತರಬೇತಿ ನೀಡುತ್ತಿದ್ದು, ಯೋಜನೆಯ ಉಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಸತಿ ನಿಲಯಕ್ಕೂ ಭೇಟಿ: ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿ ಸ್ಥಳಕ್ಕೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಸತಿ ನಿಲಯಕ್ಕೆ ಕೂಡ ಸಿಇಓ ಅವರು ಭೇಟಿ ನೀಡಿದರು. ವಸತಿ ನಿಲಯದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಪೌಷ್ಠಿಕತೋಟ ನಿರ್ಮಿಸಿದ್ದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಂಥಾಲಯಕ್ಕೆ ಕೂಡ ತೆರಳಿ ವೀಕ್ಷಣೆ ಮಾಡಿದರು.
ಬಳಿಕ ಮಾತನಾಡಿದ ಸಿಇಓ ಅವರು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಮನರೇಗಾ ಯೋಜನೆಯ ಸಂಪೂರ್ಣ ಸದ್ಬಳಕೆ ಮಾಡಿಕೊಂಡು ಮಾದರಿ ಗ್ರಾಮ ಮಾಡುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಶುದ್ಧತೆ ಕಾಪಾಡಿಕೊಳ್ಳಲು ಮತ್ತು ನೀರಿನ ಸದ್ಬಳಕೆ ಮಾಡಿಕೊಳ್ಳಲು ತಿಳಿಸಿದರು. ಬಿಜ್ಜರಗಿ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ವಿಕಲಚೇತನರಿಗು ಸಹ ಆಧ್ಯತೆಯ ಮೇರೆಗೆ ಕೆಲಸ ನೀಡಿರುವುದು ನಿಜಕ್ಕೂ ಮೆಚ್ಚುವಂತಹ ಕಾರ್ಯ. ಇಂತಹ ಕೆಲಸ ಇತರೆ ಗ್ರಾಮ ಪಂಚಾಯತಿಗಳಿಗೆ ಮಾದರಿಯಾಗಲಿ ಎಂದು ಸಂತಸದಿAದ ಶ್ಲಾಘಿಸಿದರು.
ಶಾಲಾ ಮಕ್ಕಳಿಗೆ ಶಿಕ್ಷಣ ನೀಡುವ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳಬೇಡಿ ಎಂದ ಸಿಇಓ ಅವರು, ಶಾಲೆಯೊಂದರ ಗುಣಮಟ್ಟ ತಿಳಿಯುವುದು ಅದರ ಸುಂದರವಾದ ಕಟ್ಟಡದಿಂದಲ್ಲ; ಮಕ್ಕಳ ಶಿಕ್ಷಣದ ಫಲಿತಾಂಶದ ಆಧಾರದ ಮೇಲೆ ನಿರ್ಧರಿತವಾಗುತ್ತದೆ ಎಂದರು. ಗ್ರಾಮೀಣ ಶಾಲಾ ಮಕ್ಕಳ ಶಿಕ್ಷಣ ಸಲುವಾಗಿ ವಸತಿ ನಿಲಯಗಳಲ್ಲಿ ಟ್ಯೂಷನ್ ಕ್ಲಾಸ್ ಆರಂಭಿಸಿ, ವಸತಿ ನಿಲಯದ ಮಕ್ಕಳ ಜೊತೆ ಇತರೆ ಮಕ್ಕಳಿಗೂ ಟ್ಯೂಷನ್ ಕ್ಲಾಸ್‌ಗಳಿಗೆ ಹಾಜರಾಗಲು ಅವಕಾಶ ಕಲ್ಪಿಸಲು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ.ಎಚ್.ಡಿ, ಮನರೇಗಾ ಸಹಾಯಕ ನಿರ್ದೇಶಕರಾದ ಎಂ.ಬಿ.ಮನಗೂಳಿ, ಬಿಜ್ಜರಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಭಾಷಗೌಡ ಪಾಟೀಲ, ಬಾಬಾನಗರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಸೋಲಾಪುರ, ಬಿಜ್ಜರಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜೆ.ಎ.ದಶವಂತ, ತಾಂತ್ರಿಕ ಸಂಯೋಜಕರಾದ ಪ್ರಕಾಶ ಮಸಳಿ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಹಾಗೂ ಇತರರು ಹಾಜರಿದ್ದರು.


Gadi Kannadiga

Leave a Reply