ಬಳ್ಳಾರಿ,ಜೂ.೨೭: ಇತ್ತೀಚೆಗೆ ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ನಾರಾಯಣಸ್ವಾಮಿಯವರು, ದಲಿತರನ್ನು ಒಂದು ಬಿರಿಯಾನಿ ಮೂಲಕ ಮತಾಂತರ ಮಾಡಲಾಗುತ್ತಿದೆ ಎಂಬ ದಲಿತರಿಗೆ ಅವಮಾನ ಮಾಡುವ ಹೇಳಿಕೆಯನ್ನು ಸಮತಾ ಸೈನಿಕ ದಳದ ಕಲ್ಯಾಣ ಕರ್ನಾಟಕ ವಿಭಾಗೀಯ ಕಾರ್ಯಧ್ಯಕ್ಷ ಕೆ.ಪೃಥ್ವಿರಾಜ್ ಅವರು ಖಂಡಿಸಿದ್ದಾರೆ. ಇಂತಹ ಹೇಳಿಕೆಯು ತಮ್ಮ ಲಕ್ಷಾಂತರ ಅನುಯಾಯಿಗಳೊಡನೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡ. ಡಾ|| ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ಪರೋಕ್ಷವಾಗಿ ಅವಮಾನ ಮಾಡಿದಂತಾಗುತ್ತದೆ, ಅಂದರೆ ಬಾಬಾ ಸಾಹೇಬರು ಹಾಗೂ ಅವರ ಅನುಯಾಯಿಗಳು ಪಾಕೇಟ್ ಬಿರಿಯಾನಿಗಾಗಿ ಅಥವಾ ಯಾವುದೋ ಆಮಿಷಕ್ಕೆ ಬಲಿಯಾಗಿದ್ದಾರೆಂದು ಅರ್ಥವೇ? ಮತಾಂತರಕ್ಕೆ ನಾನಾ ಆಧ್ಯಾತ್ಮಿಕ, ದೈವಿಕ ಮಾರ್ಗಗಳ ದಾಹದ ಅನ್ವೇಷಣೆಗಳು ಇರುತ್ತವೆ. ಅದಕ್ಕೆ ಮಹಾತ್ಮಾ ಗಾಂಧೀಜಿಯವರು ಈಶ್ವರ ಅಲ್ಲಾ ಸೇರೋ ನಾಮ್’ ಎಂದು ಹಾಡಿ ಎಲ್ಲಾ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ ಗೌರವಿಸುತ್ತಿದ್ದರು. ಇಂದಿಗೂ ನಮ್ಮ ನಾಡಿನ ಜನ ಸಾಮಾನ್ಯರು ಯಾವುದೇ ಜಾತಿಯವರಾದರೂ ಮೊಹರಂ ಹಬ್ಬದ ಆಚರಣೆ ಮಾಡುವುದು, ಮಸೀದಿ, ಮಖಾನ್ ದರ್ಗಾಗಳಿಗೆ ಹೋಗಿ ಭಕ್ತಿ ಸಲ್ಲಿಸುತ್ತಾರೆ. ಅದು ಅವರ ಧಾರ್ಮಿಕ ಆಯ್ಕೆ ಬಸವಣ್ಣ ನವರು ೧೨ನೇ ಶತಮಾನದಲ್ಲಿ ಎಲ್ಲಾ ಶೋಷಿತ ಜಾತಿಗಳನ್ನ ಒಂದೇ ವೇದಿಕೆಯಲ್ಲಿ ಸೇರಿಸಿ ಅಂತರ್ಜಾತಿಯ ವಿವಾಹ ಮಾಡಿಸಿ ಅನುಭವ ಮಂಟಪದಲ್ಲಿ ಧಾರ್ಮಿಕ ಪ್ರವಚನಗಳನ್ನ ಯಾವುದೇ ಜಾತಿ ಭೇದವಿಲ್ಲದೆ ನೀಡುತ್ತಿದ್ದರು.ಇಂತಹ ಭೂಮಿಯಲ್ಲಿ ಬಸವಣ್ಣ, ನಾರಾಯಣ ಗುರು, ಶಾಹು ಮಹಾರಾಜ್, ಜ್ಯೋತಿ ಭಾಷುಲೆ, ಸಾವಿತ್ರಿ ಭಾಯಿಲೆ, ಡಾ| ಬಾಬಾ ಸಾಹೇಬ ಅಂಬೇಡ್ಕರ್ ಇವರುಗಳು ಧಾರ್ಮಿಕ ಹಾಗೂ ಸಾಮಾಜಿಕ ಸಮಾನತೆಗಾಗಿ ನಿರಂತರ ದುಡಿದರು, ಆದರೇ ಇಂದು ಇಂತಹ ಮಹನೀಯರುಗಳ ಆಶಯಗಳಿಗೆ ವಿರುದ್ಧವಾಗಿ ಮನುವಾದಿಗಳ ಸುಳ್ಳು ತಾರತಮ್ಯಗಳ ಸೈದ್ಧಾಂತಿಕ ವಾದಗಳು ಸಮಾಜದಲ್ಲಿ ಗಲಿಬಿಲಿ ಮಾಡುತ್ತಿವೆ. ಆದಕಾರಣ ದಲಿತರು ಒಂದೇ ಒಂದು ಬಿರಿಯಾನಿ ತಿಂದು ಮತಾಂತರ ಆಗುವ ಅಪ್ರಬುದ್ಧರಲ್ಲ, ದಲಿತರಲ್ಲಿ ಅದ್ಯಾತ್ಮಿಕ ಅನ್ವೇಷಣೆಯ ಜ್ಞಾನ ದಾಹ, ವಿವಿಧ ಮಠ ಗ್ರಂಥಗಳ ಅಧ್ಯಯನ ಚರ್ಚೆ, ವಿವೇಚನೆ ಮುಂತಾದ ಎಲ್ಲಾ ಸದ್ಗುಣಗಳು ಇವೆ, ಬಾಬಾ ಸಾಹೇಬರ ಸಂವಿಧಾನದ ಪ್ರಕಾರ ಧಾರ್ಮಿಕ ಪ್ರಚಾರ, ಧರ್ಮ ಸ್ವೀಕಾರ, ಧಾರ್ಮಿಕ ಸ್ವಾತಂ???? ಸಕಲರಿಗೂ ನೀಡಲಾಗಿದೆ. ಆದರೆ ಇಂದಿಗೂ ಸಹಸ್ರಾರು ಹಳ್ಳಿಗಳಲ್ಲಿ ದೇವಸ್ಥಾನ, ಹೋಟೆಲ್, ಕ್ಷೌರದ ಅಂಗಡಿಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. ಅಷ್ಟೇ ಏಕೆ ಇದೇ `ಕೇಂದ್ರ ಸಚಿವ ನಾರಾಯಣ ಸ್ವಾಮಿಯನ್ನ ದಲಿತ, ಅಸ್ಪೃಶ್ಯ ಎಂಬ ಕಾರಣಕ್ಕೆ ಅವರ ಮತ ಕ್ಷೇತ್ರದ ಸವರ್ಣೀಯರು ತಮ್ಮ ಹಟ್ಟಿಯಲ್ಲಿ ಬಿಟ್ಟುಕೊಂಡಿರುವುದಿಲ್ಲ. ಈ ಬಗ್ಗೆ ಅಸ್ಪೃಶ್ಯತೆ ಆಚರಿಸಿದಂತವರ ವಿರುದ್ಧ ಕಾನೂನು ಕ್ರಮವನ್ನ ಸಚಿವರು ಕೈಗೊಳ್ಳಲಿಲ್ಲ. ಒಬ್ಬ ಕೇಂದ್ರ ಸಚಿವರಿಗೆ ಇಂತಹ ಅವಮಾನವಾದರೆ ಅನಕ್ಷರಸ್ತ ಬಡ ದಲಿತರ ಸಾಮಾಜಿಕ ಜೀವನ ಗ್ರಾಮಗಳಲ್ಲಿ ಎಷ್ಟು ಭೀಕರವಾಗಿರಬಹುದು ?. ಆದ್ದರಿಂದ ಯಾರೇ ಆಗಲಿ ದಲಿತರನ್ನು ಆಮಿಷಗಳಿಗೆ, ಹಣಕ್ಕೆ, ಒಂದು ಬಿರಿಯಾನಿಗೆ ಆಸೆ ಪಡುವಂತಹ ಕೀಳು ಜನರೆಂದು ಬಿಂಬಿಸುವಂತಹ ಹೇಳಿಕೆಗಳನ್ನು ನೀಡಬಾರದೆಂದು ಸಮತಾ ಸೈನಿಕ ದಳ ಆಗ್ರಹಿಸುತ್ತದೆ. ಮತ್ತು ಹಿಂದಿನ ಬಿ.ಜೆ.ಪಿ. ಸರ್ಕಾರ ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯಿದೆಯನ್ನು ಈಗಿನ ಕಾಂಗ್ರೇಸ್ ಸರ್ಕಾರ ರದ್ದುಮಾಡಿ ಸಕಲರಿಗೆ ಧಾರ್ಮಿಕ ಸ್ವಾತಂ????ದ ವಾತಾವರಣವನ್ನು ಕಲ್ಪಿಸಬೇಕಾಗಿ ಸಮತಾ ಸೈನಿಕ ದಳದ ವಿಭಾಗೀಯ ಕಾರ್ಯಧ್ಯಕ್ಷ ಕೆ.ಪೃಥ್ವಿರಾಜ್ ಸರ್ಕಾರವನ್ನು ವಿನಂತಿಸಿದ್ದಾರೆ.
Gadi Kannadiga > State > ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿಕೆಗೆ ಕೆ.ಪೃಥ್ವಿರಾಜ್ ಖಂಡನೆ