ಬೆಳಗಾವಿ: ವಿಶ್ವ ಮಹಿಳಾ ದಿನಾಚರಣೆ ನಿಮಿತ್ಯ ಬೆಳಗಾವಿಯ ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಕಾಯಕ ಸನ್ಮಾನ ಕಾರ್ಯಕ್ರಮವನ್ನು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಮಂಗಳವಾರದಂದು ಆಯೋಜಿಸಲಾಗಿತ್ತು .
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಶ್ರೀಮತಿ ವಿದ್ಯಾವತಿ ಭಜಂತ್ರಿ ಹಾಗೂ ಅಧ್ಯಾತ್ಮ ಮತ್ತು ಮೌಲ್ಯ ಶಿಕ್ಷಣ ತಜ್ಞರಾಗಿರುವ ಡಾ.ಸ್ಪೂರ್ತಿ ಮಾಸ್ತಿಹೊಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಬಸವಣ್ಣನವರ ತತ್ವಗಳು ,ವಚನಗಳು , ಕಾಯಕ ಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಬೆಳೆಸಿಕೊಂಡು ಹೋಗುತ್ತಿರುವ ಲಿಂಗಾಯತ ಸಮಾಜದ ಸೇವೆಯ ಕುರಿತು ವಿದ್ಯಾವತಿ ಭಜಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಡಾ.ಸ್ಪೂರ್ತಿ ಮಾಸ್ತಿಹೊಳಿ ಅವರು ಮಾತನಾಡಿ ಮಹಿಳೆಯರು ಮಾನಸಿಕ ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ಕರೆ ಕೊಡುತ್ತಾ ರುದ್ರಾಕ್ಷಿಗಳ ಮಹತ್ವದ ಕುರಿತು ಮಾಹಿತಿ ಕೊಟ್ಟರು .ಈ ಸಂದರ್ಭದಲ್ಲಿ ನಿತ್ಯ ವಚನ ಪ್ರಾರ್ಥನೆ ಹೇಳುವ ಶರಣೆಯರು ಮತ್ತು ಮಹಿಳಾ ಉದ್ಯಮಿಗಳನ್ನು ಲಿಂಗಾಯತ ಮಹಿಳಾ ಸಮಾಜದ ವತಿಯಿಂದ ಸತ್ಕರಿಸಲಾಯಿತು.ಆರಂಭದಲ್ಲಿ ಸಮಾಜದ ಅಧ್ಯಕ್ಷೆ ಶಾಂತಾ ಮಸೂತಿ ಅವರು ಸ್ವಾಗತಿಸಿದರು . ಕಾರ್ಯದರ್ಶಿ ಸಂಗೀತಾ ಅಕ್ಕಿ ಕಾರ್ಯಕ್ರಮ ನಿರೂಪಿಸಿದರು.ಲಿಂಗಾಯತ ಮಹಿಳಾ ಸಮಾಜದ ಗೌರವಾಧ್ಯಕ್ಷೆ ಶೈಲಜಾ ಭಿಂಗೆ, ರತ್ನಾ ಬೆಲ್ಲದ , ಜ್ಯೋತಿ ಬಾದಾಮಿ, ಆಶಾ ಪಾಟೀಲ, ಜಯಶೀಲ ಬ್ಯಾಕೋಡ ಸೇರಿದಂತೆ ಮಹಿಳೆಯರು ಪಾಲ್ಗೊಂಡರು.ಸಮಾಜದ ಸಹ ಕಾರ್ಯದರ್ಶಿ ಉಮಾ ರುದ್ರಗೌಡರ ಕೊನೆಗೆ ವಂದಿಸಿದರು
Gadi Kannadiga > Local News > ಕಾಯಕ ಸನ್ಮಾನ ಕಾರ್ಯಕ್ರಮ