This is the title of the web page
This is the title of the web page

Please assign a menu to the primary menu location under menu

State

ಕಲಬುರ್ಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ : ವಿವಿಧ ಸ್ಪರ್ಧೆಗಳಿಗೆ ಸಂಸದರಿಂದ ಚಾಲನೆ


ಕೊಪ್ಪಳ, ಸೆ. ೨೨: ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕಲಬುರ್ಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಿಗೆ ಕೊಪ್ಪಳ ಸಂಸದ ಕರಡಿ ಸಂಗಣ್ಣನವರು ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
೨೦೨೨-೨೩ನೇ ಸಾಲಿನ ಕಲಬುರ್ಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಅಂಗವಾಗಿ ಕೊಪ್ಪಳ ಜಿಲ್ಲೆಗೆ ವಿವಿಧ ಕ್ರೀಡೆಗಳು ಹಂಚಿಕೆಯಾಗಿದ್ದು, ಕೊಪ್ಪಳ ಜಿಲ್ಲೆಗೆ ಹಂಚಿಕೆ ಮಾಡಿರುವ ವಾಲಿಬಾಲ್, ಥ್ರೋಬಾಲ್, ಬಾಲ್‌ಬ್ಯಾಡ್ಮಿಂಟನ್ ಹಾಗೂ ಕಬಡ್ಡಿ ಸ್ಪರ್ಧೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬುಧವಾರ (ಸೆ.೨೧) ಹಾಗೂ ಗುರುವಾರದಂದು (ಸೆ.೨೨) ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಯೂ ಅತ್ಯವಶ್ಯಕವಾಗಿದ್ದು, ಎಲ್ಲರೂ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ನಡೆದ `ಟೊಕಿಯೋ ಹಾಗೂ ಪ್ಯಾರಾ’ ದಂತಹ ಒಲಂಪಿಕ್ಸ್ಗಳಲ್ಲಿ ಭಾರತ ದೇಶವು ಉತ್ತಮ ಸಾಧನೆ ಮಾಡಿ, ಹಲವಾರು ಪದಕಗಳನ್ನು ತನ್ನದಾಗಿಸಿಕೊಂಡಿದೆ. ನೀರಜ ಚೋಪ್ರಾ, ಮೀರಾಬಾಯಿ ಚಾನು, ರವಿಕುಮಾರ ದಾಹಿಯಾ, ಪಿ.ವಿ ಸಿಂಧು ಸೇರಿದಂತೆ ಹಲವಾರು ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಇತಿಹಾಸ ಸೃಷ್ಠಿಸಿದಾರೆ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದ್ದು, ಕ್ರೀಡಾಸಕ್ತರು ಇಂತಹ ಕ್ರೀಡಾಕೂಟಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ, ತಾಲ್ಲೂಕ ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಬಸವರಾಜ, ಸರ್ಕಾರಿ ನೌಕರರ ಸಂಘದ ಶುಶೀಲೇಂದ್ರರಾವ್ ದೇಶಪಾಂಡೆ, ಮಾಜಿ ಜಿ.ಪಂ ಸದಸ್ಯ ರಾಮಣ್ಣ ಚೌಡಕಿ, ಸರ್ಕಾರಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Gadi Kannadiga

Leave a Reply