This is the title of the web page
This is the title of the web page

Please assign a menu to the primary menu location under menu

State

ಕಲಾಸಂಘದ ಸೇವೆ ಸಮಾಜಕ್ಕೆ ಮಾದರಿ : ಸಂಗಣ್ಣ ಕರಡಿ


ಕೊಪ್ಪಳ : ನಗರದ ಸಾಹಿತ್ಯ ಭವನದಲ್ಲಿ ಇತ್ತೀಚಗೆ ಜರುಗಿದ ಶಿಕ್ಷಕರ ಕಲಾಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ಕೊಪಣಗಿರಿ ರಂಗ ಸಂಭ್ರಮ’ದ ಚೋರ ಚರಣದಾಸ ನಾಟಕವನ್ನು ಉದ್ಫಾಟಿಸಿ ಮಾತನಾಡಿದರು.
ಶಿಕ್ಷಕರಾಗಿದ್ದುಕೊಂಡು ಪ್ರವೃತ್ತಿಯಾಗಿ ರಂಗಭೂಮಿ ?ಸಾಹಿತ್ಯ ?ಸಂಗೀತ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಮಾಜದಲ್ಲಿ ನೊಂದವರಿಗೆ ನೆರಳಾಗಿ ಸಹಾಯಧನ ನೀಡುತ್ತಾ ಬರುತ್ತಿರುವ ಶಿಕ್ಷಕರ ಕಲಾ ಸಂಘದ ಸೇವೆ ಸ್ಮರಣೀಯ ಎಂದು ಸಂಸದರಾದ ಸಂಗಣ್ಣ ಕರಡಿರವರು ಹೇಳಿದರು.
ಮಕ್ಕಳ ಮನಸ್ಸಿನಾಳಕ್ಕಿಳಿದು ಬೋಧಿಸುವುದರ ಜತೆಗೆ ರಂಗಭೂಮಿಯ ಕಾರ್ಯ ಮಾಡುತ್ತಿರುವ ನಾಡಿನ ಅಪರೂಪದ ರಂಗತಂಡಗಳಲ್ಲಿ ಶಿಕ್ಷಕರ ಕಲಾ ಸಂಘ ಕೂಡ ಒಂದು.ಸಂಗೀತ?ಪರಿಸರ?ಸಾಹಿತ್ಯ ಶಿಕ್ಷಕರಿಗೆ ಅತ್ಯಾಪ್ತವಾಗಿರಬೇಕು.ಇದನ್ನು ಕಲಾ ಸಂಘ ಮೈಗೂಡಿಸಿಕೊಂಡಿದೆ.ಕೊಪ್ಪಳದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ ಡೊಳ್ಳಿನ ಮಾತನಾಡಿದರು.
ಕಲಾ ಸಂಘ ಹತ್ತು ವರ್ಷ ಸಾಗಿ ಬಂದಿದ್ದು ಸಣ್ಣ ಕೆಲಸವಲ್ಲ . ಶಿಕ್ಷಕರು ಸಮಾಜದ ನಿರ್ಮಾತೃರು.ಸಮಾಜದ ತಪ್ಪು ಒಪ್ಪುಗಳನ್ನು ರಂಗದ ಮೇಲೆ ತಂದು ಬದಲಾವಣೆಗೆ ಪ್ರೇರಣೆ ನೀಡುತ್ತಿರುವುದು ಬಹು ದೊಡ್ಡ ಕಾರ್ಯ.ಎಂದು ಶ್ಲಾಘಿಸಿದರು. ಕಲಾ ಸಂಘದ ಕಾರ್ಯಗಳು ಯಾವಾಗಲೂ ಸಮಾಜಮುಖಿಯಾಗಿರುತ್ತವೆ.ಸದಭಿರುಚಿಯ ನಾಟಕಗಳನ್ನು ಕಳೆದ ಒಂದು ದಶಕದಿಂದ ಪ್ರದರ್ಶಿಸುತ್ತಾ ಬರುತ್ತಿರುವುದು ಹೆಮ್ಮೆಯ ವಿಷಯ.ಎಂದು ಕಾರ್ಯಕ್ರಮದ ಅಧ್ಯಕ್ಷತೆವಹಿಸಿಕೊಂಡಿದ್ದ ಸಮಾಜ ಸೇವಕರಾದ ಸಿ.ವ್ಹಿ ಚಂದ್ರಶೇಖರ ಹೇಳಿದರು.
ಶಿಕ್ಷಕರ ಕಲಾ ಸಂಘ ಬರೀ ನಾಟಕಗಳನ್ನು ಮಾತ್ರ ಪ್ರದರ್ಶಿಸುವುದಿಲ್ಲ ಅದರಿಂದ ಬಂದ ಹಣವನ್ನು ಸಮಾಜದ ಲ್ಲಿ ಅಶಕ್ತರಿಗೆ ?ನೊಂದವರಿಗೆ ನೀಡುತ್ತಾ ಬಂದಿದ್ದಾರೆ.ನಾಡಿನ ಹಲವು ಕಡೆ ನಾಟಕಗಳನ್ನು ಪ್ರದರ್ಶಿಸಿ ವೃತ್ತಿ ಗೌರವವನ್ನು ಹೆಚ್ಚಿಸಿದ್ದಾರೆ.ಎಂದು ಕ.ರಾ .ಪ್ರಾ.ಶಾ .ಶಿ ಸಂಘದ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಮಾತಾನಾಡಿದರು.
ಶಿಕ್ಷಕರು ರಂಗಭೂಮಿಯ ಮೂಲಕ ಹಲವು ಸಮಾಜಮುಖಿ ಸೇವಾಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಸಂತಸದ ವಿಷಯ ಇವರ ಸೇವೆ ಸದಾ ಹೀಗೆಯೆ ಸಾಗಲಿ.ಸಮೃದ್ಧ ಸಮಾಜ ನಿರ್ಮಾಣ ಸಮರ್ಥ ಶಿಕ್ಷಕರಿಂದ ರೂಪಿತಗೊಳ್ಳುತ್ತೆ ಎಂದು ದಿವ್ಯ ಸಾನ್ನಿಧ್ಯವಹಿಸಿದ ಚೈತನ್ಯಾನಂದ ಸ್ವಾಮಿಜಿ ನುಡಿದರು.
ಪ್ರಸ್ತಾವಿಕವಾಗಿ ಕಲಾ ಸಂಘದ ಅಧ್ಯಕ್ಷರಾದ ರಾಮಣ್ಣ ಶ್ಯಾವಿ ಮಾತನಾಡಿ ಕಲಾ ಸಂಘ ಹತ್ತುವರ್ಷ ನೆಡೆದ ಬಂದ ದಾರಿಯನ್ನು ತಿಳಿಸಿದರು.
ಚೋರ ಚರಣದಾಸ ನಾಟಕ
ಕೊಪಣಗಿರಿ ರಂಗ ಸಂಭ್ರಮ ಮೊದಲ ನಾಟಕವಾಗಿ ಹಬೀಬ್ ತನವೀರ್ ರಚನೆಯ ಕನ್ನಡಕ್ಕೆ ಸಿದ್ಧಲಿಂಗ ಪಟ್ಟಣಶೆಟ್ಟಿ ಅನುವಾದಸಿದ ನಾಟಕ ಚೋರಚರಣದಾಸ ನಾಟಕ ಲಕ್ಷ್ಮಣ ಪಿರಗಾರ ನಿರ್ದೇಶನ ಮತ್ತು ಶಂಕರ ಬಿನ್ನಾಳರ ಸಂಗೀತ ಸಂಯೋಜನೆಯಲ್ಲಿ ಪ್ರದರ್ಶನಗೊಂಡು ಜನಮನ ಸೆಳೆಯಿತು. ನಾಟಕದ ಪಾತ್ರಧಾರಿಗಳಾಗಿ ಹವಾಲದಾರ-ಪ್ರಾಣೇಶ ಪೂಜಾರ, ಚೋರ ಚರಣದಾಸ- ಮಹಾಂತೇಶ ಚಳ್ಳಮರದ ರೈತ–ರಾಮಣ್ಣ ಶ್ಯಾವಿ, ಶ್ರೀಮಂತ ಮಹಿಳೆ-ಸುಮತಿ.ಸಿ, ಸ್ವಾಮೀಜಿ – ಮಂಜುನಾಥ ಪೂಜಾರ, ಶಿಷ್ಯ ೧ – ನಾಗರಾಜನಾಯಕ ಡೊಳ್ಳಿನ, ಶಿಷ್ಯ ೨ – ಮುಕುಂದ ಅಮೀನಗಡ ಶಿಷ್ಯ ೩- ರಾಮಣ್ಣ ಶ್ಯಾವಿ, ಸಾಹುಕಾರ _ ಹಳ್ಳಿಯ ಶ್ರೀಮಂತ – ಯಮನೂರಪ್ಪ ಗಣೇಶ – ಸಾಹುಕಾರನ ಆಳು- ಯೋಗಪ್ಪ ಪೂಜಾರಿ – ರಾಮಣ್ಣ ಶ್ಯಾವಿ, ಪ್ರಧಾನ ಮಂತ್ರಿ-ನಾಗರಾಜನಾಯಕ ಡೊಳ್ಳಿನ, ಕಾರಕೂನ-ಮುಕುಂದ ಅಮೀನಗಡ, ರಾಣಿ – ನಿರ್ಮಲ, ಪುರೋಹಿತ –ಪ್ರಾಣೇಶ ಪೂಜಾರ. ದಾಸಿ ಕಮಲಾ- ಅಕ್ಷತಾ, ಮೇಳದ ಮುಂದಾಳತ್ವ : ಯೋಗಾನರಸಿಂಹ ಪಿ.ಕೆ. ಗಾಯಕರು ಫಕೀರಪ್ಪ ಗುಳದಳ್ಳಿ, ಯೋಗಾನರಸಿಂಹ ಪಿ.ಕೆ ಮತ್ತು ತಂಡ
ಕಡ್ಲಿಮಟ್ಟಿ ಸ್ಟೇಷನ್ ನಾಟಕ
ನಾಟಕದ ರಚನೆ ಮಹಾದೇವ ಹಡಪದ ರಂಗ ವಿನ್ಯಾಸ ನಿರ್ದೇಶನ ಧೀಮಂತ, ಸಂಗೀತ, ವಸ್ತ್ರವಿನ್ಯಾಸ ಮರಿಯಮ್ಮ ಪಾತ್ರಧಾರಿಗಳಾಗಿ ಮಕ್ಕಳು ಬಸವಲಿಂಗಮ್ಮ, ಸುಷ್ಮಿತಾ, ಸಾವಿತ್ರಿ, ಅನಿತಾ, ದುರ್ಗಾ, ಹುಲಿಗೆಮ್ಮ, ದೀಪಾ, ಸರಸ್ವತಿ, ವಂದನಾ, ಗಾಯತ್ರಿ, ಪ್ರೇಕ್ಷಿತಾ, ಆರನೇ ತರಗತಿ ಮಕ್ಕಳು ಪೂರ್ಣಿಮಾ ಸಂಗೀತಾ, ಯಲ್ಲಮ್ಮ, ನೇತ್ರಾವತಿ, ನಾಗಲಕ್ಷ್ಮೀ, ರೋಹಿಣಿ, ಸಂಜನಾ, ಜ್ಯೋತಿ, ಶ್ವೇತಾ, ಐಶ್ವರ್ಯ, ಅಶ್ವಿನಿ, ಏಳನೇ ತರಗತಿ ಮಕ್ಕಳು ತೇಜಸ್ವಿನಿ, ಪಾರ್ವತಿ, ನೇತ್ರಾವತಿ, ರಾಮುಲಮ್ಮ. ಒಟ್ಟು ಇಪ್ಪತ್ತಾರು ಮಕ್ಕಳು ಪಾತ್ರಧಾರಿಗಳಾಗಿ ನಾಟಕದಲ್ಲಿ ಅಭಿನಯಿಸಿದರು. ಮಕ್ಕಳ ಅಭಿನಯ ಪ್ರೇಕ್ಷಕರನ್ನು ರಂಜಿಸಿತು.
ಕನಸಿನ ಖೂನಿ ( ಆರ್ಡರ್ ಆರ್ಡರ್)
ನಾಟಕದ ರಚನೆ ಮತ್ತು ನಿರ್ದೇಶನ ವಿಜಯಕುಮಾರ ಪಟ್ಯಾಳ, ಪಾತ್ರಧಾರಿಗಳಾಗಿ ನ್ಯಾಯಾಧೀಶ-ವಿಜಯಕುಮಾರ, ಇನ್ಸಪೆಕ್ಟರ್-ಶ್ರೀಶೈಲ್ ಹುದ್ಧಾರ, ನೌಕರ-ಸುನೀಲ ಗರಗ, ಪೊಲೀಸ್ ಕಾನ್ಸಟೇಬಲ್-ಬಸವರಾಜ ಹೂಲಿಹಾಳ, ಆಳು- ಮಹೇಶ, ಡಾಕ್ಟರ್- ಆಕಾಶ. ನಾಟಕ ಪ್ರದರ್ಶನವಾಯಿತು.
ಇದೇ ಸಂದರ್ಭದಲ್ಲಿ ರಂಗಭೂಮಿಯಲ್ಲಿ ಸೇವೆಸಲ್ಲಿಸಿದ ಮಹನೀಯರಾದ ಲಕ್ಷö್ಮಣ ಪಿರಗಾರ, ಶರಣಪ್ಪ ಬಾಚಲಾಪೂರ, ತೋಟಪ್ಪ ಕಾಮನೂರ, ಶಂಕರ ಬಿನ್ನಾಳ, ಹಾಲಯ್ಯ ಹುಡೇಜಾಲಿ, ಹನುಮಂತಪ್ಪ ಕುರಿ, ಈರಮ್ಮ ಮುಧೋಳ, ಅವರನ್ನು ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಶರಣಬಸನಗೌಡ ಪಾಟೀಲ ?ತೋಟಪ್ಪ ಕಾಮನೂರು?ಸಾವಿತ್ರಿ ಮಜುಮದಾರ್ ?ಶಿವಾನಂದ ಪೂಜಾರ್ ?ದೈಹಿಕ ಶಿಕ್ಷಣಾಧಿಕಾರಿಯಾದ ಬಸವರಾಜ?ಅರವಿಂದ ?ಪ್ರಭು ಕಿಡದಾಳ ?ಕೊಟ್ರಪ್ಪ ಗಡಗಿ ?ಸುರೇಶ ಅರಕೇರಿ ಮುಂತಾದವರುಉಪ್ಥಿತರಿದ್ದರು. ವಿಜಯಲಕ್ಷ್ಮಿ ಕೊಟಗಿ ನಿರೂಪಿಸಿದರು.ಸೋಮಲಿಂಗಪ್ಪ, ಸ್ವಾಗತಿಸಿದರು.ಪಾಂಡರಂಗ ಅಲ್ಲೂರು ವಂದಿಸಿದರು.


Gadi Kannadiga

Leave a Reply