ಮುಂದೆ ಕರ್ನಾಟಕದಲ್ಲಿಯೂ ಕಮಾಲ್ ನಿಶ್ಚಿತ ; ಬಸವರಾಜ ಕ್ಯಾವಟರ್ 

Murugesh Shivapuji
ಮುಂದೆ ಕರ್ನಾಟಕದಲ್ಲಿಯೂ ಕಮಾಲ್ ನಿಶ್ಚಿತ ; ಬಸವರಾಜ ಕ್ಯಾವಟರ್ 
WhatsApp Group Join Now

ಕೊಪ್ಪಳ: ಮುಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿಯೂ ಕಮಲ್ ಪಡೆ ಮ್ಯಾಜಿಕ್ ನಿಶ್ಚಿತ. ದೇಶದೆಲ್ಲಡೆ ಮತದಾರರು ಎನ್ ಡಿಎ ಪರ ಒಲವು ಹೊಂದುತ್ತಿದ್ದಾರೆ ಎಂಬುದಕ್ಕೆ ದೆಹಲಿ ಫಲಿತಾಂಶವೇ ಸಾಕ್ಷಿ ಎಂದು ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಭರವಸೆ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ದೇಶದ ಹೃದಯ ಭಾಗವಾದ ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಮತದಾರ ಪ್ರಭುಗಳು ಆರ್ಶೀವಾದ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ಆಡಳಿತ ಜನ ಸಾಮಾನ್ಯರಿಗೆ ಬೇಸರ ತರಿಸಿದೆ‌. ಪೂರ್ವಪರ ಯೋಚನೆಗಳಿಲ್ಲದ, ಮುಂದಿನ ಜಮಾನಕ್ಕೆ ಅನುಕೂಲ ಕಲ್ಪಿಸದೇ ಆರ್ಥಿಕತೆಯ ದಿಕ್ಕನ್ನೆ ಹಳಿ ತಪ್ಪಿಸುವ ಉಚಿತ ಕಾರ್ಯಕ್ರಮಗಳನ್ನು ಮತದಾರರು ತಿರಸ್ಕರಿಸಿ ದೇಶದ ಅಭಿವೃದ್ಧಿಯ ಭಾಗವಾಗಿ ಕಮಲ ಪಡೆ ಬೆಂಬಲಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ ಎಂದಿದ್ದಾರೆ.ಕಾಂಗ್ರೆಸ್ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷಗಳ ದೇಶ ವಿರೋಧಿ ನೀತಿಗಳು ಹಾಗೂ ಅಭಿವೃದ್ಧಿ ಕಡೆಗಿನ ನಿರ್ಲಕ್ಷದ ವಿರುದ್ಧ ದೆಹಲಿಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ, ಕಾಂಗ್ರೆಸ್ ಧೂಳಿಪಟವಾದಂತೆ ಕರ್ನಾಟಕದಲ್ಲಿಯೂ ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಲಿದೆ.

ಈಗಾಗಲೇ ಕರ್ನಾಟಕದಲ್ಲಿ ಅಭಿವೃದ್ಧಿಯ ಧ್ಯೇಯ ಮರೆತು ಕೋಮು-ರಾಜಕಾರಣ ಹಾಗೂ ಒಂದು ವರ್ಗ ಓಲೈಸುವುದು ಮತ್ತು ಭ್ರಷ್ಟಾಚಾರಕ್ಕಾಗಿ ಮಾತ್ರ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರದ ಅಧ-ಪತನ ಆರಂಭವಾಗಲಿದೆ.ಅಲ್ಲದೆ, ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಪ್ರಕ್ರಿಯೆ ಹಿಂದಕ್ಕೆ ಹೋಗುತ್ತಿದೆ‌. ಇದರಿಂದ ಸದ್ದಿಲ್ಲದೇ ಜನಾಕ್ರೋಶ ರೂಪಗೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಎಂದು ಬಸವರಾಜ ಕ್ಯಾವಟರ್ ಅವರು ತಿಳಿಸಿದ್ದಾರೆ.ದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಗೆಲುವಿಗಾಗಿ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಹಗಲಿರುಳು ಶ್ರಮಪಟ್ಟಿದ್ದರ ಫಲವಾಗಿ ಆಯ್ಕೆಯಾಗಿರುವ ನಮ್ಮ ಶಾಸಕರು ದೆಹಲಿ ರಾಜ್ಯದ ಜನರ ಸೇವೆಗೆ ಸೈನಿಕರಂತೆ ಸೇವೆ ಮಾಡಲು ಸಿದ್ದರಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ನೆಪಕೋಸ್ಕರ ಬಳಸಿಕೊಂಡು ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ ಇತರೆ ಎಲ್ಲಾ ಸಮುದಾಯ ವರ್ಗದವರನ್ನು ತಮ್ಮ ದುರಾಡಳಿತಕ್ಕೆ ಹಾಗೂವಸ್ವಾರ್ಥಕ್ಕೆ ಬಳಸಿಕೊಂಡು ಕರ್ನಾಟಕ ರಾಜ್ಯದ ಆಡಳಿತ ದಿಕ್ಕು ಪಾಲು ಆಗುವಂತೆ ಮಾಡಿದ್ದಕ್ಕಾಗಿ ಭಾರತೀಯ ಜನತಾ ಪಾರ್ಟಿ ಪಕ್ಷಕ್ಕೆ ದೆಹಲಿಯಲ್ಲಿ ಹೆಚ್ಚು ಬಹುಮತ ಬರುವುದಕ್ಕೆ ಕಾರಣವಾಯಿತು. ಆಮ್ ಆದ್ಮಿ ಪಾರ್ಟಿ ದೆಹಲಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಸ್ವತಹ ಅರವಿಂದ್ ಕೇಜ್ರಿವಾಲ್ ರವರೆ ಜೈಲಿಗೆ ಹೋಗಿದ್ದು, ಅನೇಕ ಹಗರಣಗಳಲ್ಲಿ ತೊಡಗಿಕೊಂಡಿದ್ದರಿಂದ ಆಮ್ ಆದ್ಮಿ ಪಕ್ಷ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ವೈದ್ಯರಾದ ಬಸವರಾಜ ಕ್ಯಾವಟರ್ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!