This is the title of the web page
This is the title of the web page

Please assign a menu to the primary menu location under menu

Local News

ಭಾರತೀಯ ಜನತಾ ಪಾರ್ಟಿ ಕಛೇರಿಯಲ್ಲಿ ಕನಕದಾಸ ಜಯಂತಿ ಆಚರಣೆ


ಬೆಳಗಾವಿ: ದಾಸ ಸಾಹಿತ್ಯದ ಮೂಲಕ ನಾಡಿನ ಜನಮಾನಸದಲ್ಲಿ ಅಜರಾಮವಾಗಿ ಉಳಿದವರೆ ಕನಕದಾಸರು ಎಂದು ಜಿಲ್ಲಾ ಬಿಜೆಪಿ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು ನಗರದಲ್ಲಿಯ ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ನಡೆದ ಕನಕದಾಸರ ಜಯಂತಿ ಅಚರಿಸಿ ಮಾತನಾಡಿ, ಕನಕದಾಸರು
ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿಟ್ಟವರು. ಬೀರಪ್ಪನಾಯಕ ಮತ್ತು ಬಚ್ಚಮ್ಮರ ಮಗನಾಗಿ ಜನಿಸಿದ ಇವರು ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ ತಿಮ್ಮಪ್ಪಎಂದೇ ನಾಮಕರಣ ಮಾಡಿದ್ದರು. ಆತ್ಮ ಯಾವ
ಕುಲ ಜೀವ ಯಾವ ಕುಲ, ಕುಲ ಕುಲ ಎಂದು ಹೊಡದಾಡದಿರಿ ಎಂದು ಸರ್ವರಲ್ಲಿ ಶಾಂತಿಯದೊಟವನ್ನ ಕಂಡ ಮಹಾನ ಚೇತನ ಕನಕದಾಸರು. ಅವರ ಆಧ್ಯಾತ್ಮಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು ಅವರ ಹಾಕಿದ ಸನ್ಮಾರ್ಗದಲ್ಲಿ ಸಮಾಜ ನಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕೆಂದು ಹೇಳಿದರು.
ರಾಜ್ಯ ಯುವ ಮೊರ್ಚಾ ಕಾರ್ಯದರ್ಶಿ ಈರಣ್ಣ ಅಂಗಡಿ ಮಾತನಾಡಿ,೧೬ನೇ ಶತಮಾನ ದಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯಗೊಂಡಿದ್ದಾಗ ಬೇಸರಗೊಂಡು ಯುದ್ಧವನ್ನು ಬಿಟ್ಟು ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು ಎಂದು ಪುರಾಣ ಸಾರುತ್ತದೆ ಎಂದರು.
ವೇದಿಕೆಯ ಮೇಲೆ ಜಿಲ್ಲಾ ಸಾಮಾಜಿಕ ಜಾಲತಾಣದ ನೀತಿನ ಚೌಗಲೆ, ಸಂತೋಷ ದೇಶನೂರ, ಕಾರ್ಯಾಲಯ ಕಾರ್ಯದರ್ಶಿ ವೀರಬಧ್ರ ಪೂಜೇರ, ಎಸ್ಸಿ ಮೊರ್ಚಾ ಜಿಲ್ಲಾ ಅಧ್ಯಕ್ಷ ಯಲ್ಲೇಶ ಕೊಲಕಾರ ಇದ್ದರು.


Gadi Kannadiga

Leave a Reply