This is the title of the web page
This is the title of the web page

Please assign a menu to the primary menu location under menu

Local News

ಕನ್ನಡ ಭಾಳೆಗೆ ಉಸಿರು £Ãಡಿದ್ದೇ ಶರಣರು : ಸಾಹಿತಿ ಯ. ರು. ಪಾಟೀಲ


ಬೆಳಗಾವಿ.ಸೆ.೧೬. – ನೆಲದ ಭಾಷೆ ಕನ್ನಡಕ್ಕೆ ಮಹತ್ವ ಕೊಟ್ಟ ವಚನಕಾರರು ಕನ್ನಡವನ್ನು ಜೀವಂತಗೊಳಿಸಿದರು. ಕನ್ನಡ ಭಾಷೆಯನ್ನು ಎತ್ತಿಹಿಡಿದ ಅವರ ಕೊಡುಗೆ ಇಂದಿಗೂ ಅಮರವಾಗಿದೆ. ವಚನಕಾರರ ಶ್ರಮದ ಪ್ರತಿಫಲವಾಗಿ ಕನ್ನಡ ಜೀವಂತಭಾಷೆಯಾಗಿ ಮುನ್ನಡೆದೆ ಎಂದು ಚಾರಿತ್ರಿಕ ಕಾದಂಬರಿಕಾರ, ಮಾಜಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಯ.ರು.ಪಾಟೀಲ ನುಡಿದರು.
ಬೆಳಗಾವಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದಿಂದ ಶಿವಬಸವನಗರದ ಲಿಂಗಾಯತ ಭವನದಲ್ಲಿ ಹಮ್ಮಿಕೊಂಡ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಹೊರನಾಡ ವಚನಕಾರರ ಕನ್ನಡಪ್ರೇಮ ಕುರಿತು ಮಾತನಾಡಿದದರು. ಮುಂದುವರೆದುಕಾಶ್ಮೀರ, ಅಪ್ಘಾ£ಸ್ತಾನ , ಗುಜರಾತ, ಕೇರಳ,ತಮಿಳುನಾಡು ಮುಂತಾದ ಹೊರನಾಡಿ£ಂದ ಬಂದ ಶರಣರು ಕನ್ನಡ ಕಲಿತು ಕನ್ನಡದಲ್ಲೇ ವಚನ ರಚಿಸಿದ್ದು ವಿಸ್ಮಯ ಹಾಗೂ ರಾಜಾಶ್ರಯದಲ್ಲಿದ್ದ ಸಾಹಿತ್ಯವನ್ನು ಜನಸಾಮಾನ್ಯರ ಆವರಣಕ್ಕೆ ತಂದರು. ಕನ್ನಡದಲ್ಲಿ ವಚನಗಳನ್ನು ರಚಿಸಿ ಈ ನೆಲೆದಲ್ಲಿ ಜ್ಞಾನಾಮೃತವನ್ನು ಭಿತ್ತಿ ಬೆಳೆದರು. ಇಂದಿಗೂ ಶರಣರ ವಚನಗಳು ನಾಡಿನ ಕೈದೀವಿಗೆಯಾಗಿವೆ ಎಂದರು.ಅವರ ಅಂದಿನ ಕನ್ನಡ ಪ್ರೇಮ ಈಗಿನ ಕನ್ನಡಿಗರಿಗೆ ಎಲ್ಲಿ ಹೋಯಿತು ಎಂದು ವಿಳಾದ ವ್ಯಕ್ತಪಡಿಸುತ್ತ, ನಮ್ಮ ಭಾಷೆಯ ಇತಿಹಾಸ ಪರಂಪರೆ ಹಾಗೂ ಸಂಸ್ಕೃತಿಯನ್ನು ಮರೆಯುತ್ತಿರುವುದು ಖೇದಕರಸಂಗತಿ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಕನ್ನಡಿಗರೇ ತಮ್ಮ ಭಾಷೆಯನ್ನು ಉಳಿಸದಿದ್ದರೆ ಮತ್ಯಾರು ಉಳಿಸಲು ಸಾಧ್ಯ. ತಾಯಂದಿರು ತಮ್ಮ ಮಕ್ಕಳಿಗೆ ಮಮ್ಮಿ ಡ್ಯಾಡಿ ಸಂಸ್ಕೃತಿ £Ãಡಬಾರದೆಂದು ಸೂಚ್ಯವಾಗಿ ಹೇಳಿದರು.
ಸಾ£ಧ್ಯ ವಹಿಸಿದ ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಸ್ವಾಮಿಗಳು ಬೆಳಗಾವಿ ಚರಿತ್ರೆಯನ್ನು £ಖರವಾಗಿ ಬೆಳಕಿಗೆ ತಂದವರು ಯ.ರು.ಪಾಟೀಲರು. ಇವರ ಸಂಶೋಧನಾ ಕಾದಂಬರಿ ಬೆಳವಡಿ ರಾಣಿ ಮಲ್ಲಮ್ಮ ಕೃತಿಯನ್ನು ರಾತ್ರಿಯಿಡೀ ನಾನು ಓದಿದ್ದು, ಓದಿಸಿಕೊಂಡು ಹೋಗುವ ಗುಣ ಈ ಕೃತಿಗೆ ಇದೆ. ವಚನ ಸಾಹಿತ್ಯದಲ್ಲಿಯೂ ವಿಶೇಳ ಅಧ್ಯಯನ ಮಾಡಿದ್ದಕ್ಕೆ ಇಂದಿನ ಇವರ ಅರ್ಥಪೂರ್ಣ ಉಪನ್ಯಾಸವೇ ಸಾಕ್ಷಿಯಾಗಿದೆ ಎಂದರು.
ಹೊರನಾಡ ವಚನಕಾರರು ಕೃತಿಯ ಕುರಿತು ಮಾತನಾಡಿದ ಹಿರಿಯ ಸಾಹಿತಿಗಳಾದ ಡಾ.ಗುರುದೇವಿ ಹುಲೆಪ್ಪನವರಮಠ ಯ.ರು.ಪಾಟೀಲರವರ ಹೊರನಾಡಿ£ಂದ ಬಂದ ವಚನಕಾರರು ಸಂಗ್ರಹಯೋಗ್ಯ ಕೃತಿ. ಕನ್ನಡ ಭಾಳೆಯನ್ನು ಶ್ರೀಮಂತ ಗೊಳಿಸಿದವರು ಶರಣರುಭಾರತದ ವಿವಿಧ ಭಾಗಗಳಿಂದ ಮತ್ತು ವಿದೇಶದಿಂದ ಬಂದಿದ್ದ ಅನೇಕ ಶರಣರು ಕಲ್ಯಾಣದ ಶರಣರೊಂದಿಗೆ ಕಾಯಕ ದಾಸೋಹ ಭಕ್ತಿಯಂತಹ ತತ್ವಗಳನ್ನು ಅರಿತು ಆಚರಿಸಿ ಈ ನೆಲದ ಭಾಳೆಯಾದ ಕನ್ನಡವನ್ನು ಕಲಿತು ಆಭಾಳೆಯಲ್ಲಿ ವಚನಗಳನ್ನು ರಚಿಸಿದ್ದು ವಿಶೇಳ. ಅಂತಹ ಅನೇಕ ಶರಣರ ಕುರಿತು ಸಂಗ್ರಹಯೋಗ್ಯ ಕೃತಿಯನ್ನು ಯ.ರು.ಪಾಟೀಲ ರಚಿಸಿದ್ದಾರೆ ಎಂದು ಅಭಿನಂದಿಸಿದರು.
ಅಧ್ಯಕ್ಷತೆ ವಹಿಸಿದ ಮಹಾಸಭಾದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರತ್ತಪ್ರಭಾ ವಿ.ಬೆಲ್ಲದರವರು ಮಾತನಾಡಿ ವೀರಶೈವ ಲಿಂಗಾಯತ ಮಹಾಸಭೆ ಹಲವಾರು ರಚನಾತ್ಮಕವಾದ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡುತ್ತಾ ಬರುತ್ತಿದೆ. ಇಂದಿನ ಯುವಕ ಯುವತಿಯರಲ್ಲಿ ವಚನ ಸಾಹಿತ್ಯ ಕುರಿತು ಪ್ರಜ್ಞೆ ಮೂಡಿಸುವ ಕೆಲಸ ಜರುಗಬೇಕಾಗಿದೆ. ಶರಣ ಸಂಸ್ಕೃತಿಯನ್ನು ಮೂಡಿಸುವ ಕೆಲಸ ನಡೆಯಬೇಕಾಗಿದೆ. ಈ £ಟ್ಟಿನಲ್ಲಿ ಮಹಾಸಭೆಯ ಹಲವಾರು ರೂಪರೇಷೆಗಳನ್ನು ಹಾಕಿಕೊಂಡಿದೆ. ಮನೆಗಳಲ್ಲಿ ವಚನ ಪರಂಪರೆಯನ್ನು ಮೂಡಿಸುವ ಕೆಲಸ ನಡೆಯಲಿ. ಯ.ರು.ಪಾಟೀಲರು ರಚಿಸಿದ ಕೃತಿ ಕೈಗನ್ನಡಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಜುಶ್ರೀ ಹಾವಣ್ಣನವರ ವಚನ ಪ್ರಾರ್ಥನೆಯನ್ನು ಸಲ್ಲಿಸಿದರು. ಭಾರತಿ ಮಾಳಿ ವಚನ ವಿಶ್ಲೇಷಣೆ ಮಾಡಿದರು. ಶೈಲಾ ಸಂಸುದ್ದಿ ವಂದಿಸಿದರು. ಶ್ವೇತಾ ಹೆದ್ದೂರಶೆಟ್ಟಿ ಸ್ವಾಗತಿಸಿದರು. ಗೀತಾ ಗುಂಡಕಲ್ಲೆ ಅತಿಥಿಗಳನ್ನು ಪರಿಚಯಿಸಿದರು. ಸಾರಿಕಾ ಕುಲಕರ್ಣಿ £ರೂಪಿಸಿದರು. ಡಾ.ಎಪ್.ವ್ಹಿ.ಮಾ£್ವ, ಚಂದ್ರಶೇಖರ ಬೆಂಬಳಗಿ, ಎ.ಬಿ.ಕೊರಬು, ಆರ್.ಪಿ.ಪಾಟೀಲ, ಬಿ.ಕೆ.ಗುರುಪುತ್ರನವರ ಮೊದಲಾದವರು ಉಪಸ್ಥಿತರಿದ್ದರು.


Leave a Reply