ಯಮಕನಮರಡಿ: ಕನ್ನಡ ನಾಡು ನುಡಿಯ ಅಭಿಮಾನವಿರಬೇಕು ಎಲ್ಲರೂ ಕನ್ನಡ ಭಾಷೆಯನ್ನು ಚೆನ್ನಾಗಿ ಓದಿ ಕಲಿಯಬೇಕು. ಕನ್ನಡದಲ್ಲಿ ಮಾತನಾ ಡಬೇಕು ಸ್ಪಷ್ಠವಾಗಿ ಓದಬೇಕು ಎಂದು ಹಿರಿಯ ಸಾಹಿತಿ ಶಿರೀಷ ಜೋಶಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಅವರು ಹಿಡಕಲ್ ಡ್ಯಾಮಿನ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ವತಿಯಿಂದ ಆಯೋಜಿಸಿದ ಕನ್ನಡ ವಚನ ಸ್ಪರ್ದೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರತಿಷ್ಠಾನವು ಪ್ರತಿ ವರ್ಷ ಆಂಗ್ಲ ಮಾದ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ವಾಚನ ಸ್ಪರ್ದೆಯನ್ನು ಏರ್ಪಡಿಸುತ್ತಾ ಬಂದಿದೆ. ಶ್ರೀ ರಾಮಚಂದ್ರ ಒಡವಿ ದತ್ತಿ£ಧಿ ಕನ್ನಡ ವಚನ ಸ್ಪರ್ದೆಯನ್ನು ಈ ವರ್ಷ ಉರ್ದು ಮಾದ್ಯಮ ವಿದ್ಯಾರ್ಥಿಗಳಿಗೆ ಕನ್ನಡ ವಾಚನ ಸ್ಪರ್ದೆ ಏರ್ಪಡಿಸಿದ್ದು, ವಿಶೇಷವಾಗಿತ್ತು.
ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಮತಿ £Ãರಜಾ ಗಣಾಚಾರ ಕನ್ನಡ ವಾಚನ ಸ್ಪರ್ದೆ £ಯಮಗಳನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಪ್ರತಿಷ್ಠಾನದ ಅದ್ಯಕ್ಷ ಎನ್.ವ್ಹಿ. ದೇಶಪಾಂಡೆ, ಉಪಾಧ್ಯಕ್ಷ ಎಮ್.ಬಿ. ದೇಶಪಾಂಡೆ, ಶಾಲಾ ಕಾರ್ಯಾಧ್ಯಕ್ಷ ಎಮ್.ಕೆ. ಮುಲ್ಲಾ, ಮುಖ್ಯ ಶಿಕ್ಷಕ ಟಿ.ಎಸ್.ತಲ್ಲೂರ, ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಶಿಕ್ಷಕÀ ವಿಶ್ವನಾಥ ಕೋಷ್ಠಿ ಕಾರ್ಯಕ್ರಮ £ರೂಪಿಸಿದರು, ಶಿಕ್ಷಕ ಗಿರೀಶ ಬಾಯನ್ನವರ ಸ್ವಾಗತಿಸಿದರು.
Gadi Kannadiga > Local News > ಉರ್ದು ಮಾದ್ಯಮಿಕ ಶಾಲೆಯಲ್ಲಿ ಕನ್ನಡ ವಾಚನ ಸ್ಪರ್ದೆ