This is the title of the web page
This is the title of the web page

Please assign a menu to the primary menu location under menu

Local News

ಎಂಇಎಸ್ ನಿಷೇಧಿಸುವಂತೆ ಕರವೇ ಆಗ್ರಹ


ಬೆಳಗಾವಿ: ಚುನಾವಣೆ ಸಮೀಪ ಬರುತ್ತಿದ್ದಂತೆಯೇ ಎಂಇಎಸ್ ನಾಯಕರಿಗೆ ಭಾಷಾ ಪ್ರೇಮ ಹೆಚ್ಚಾಗುತ್ತದೆ.ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಲೇ ಬಂದಿರುವ ಎಂಇಎಸ್ ಎಲ್ಲ ರಂಗಗಳಲ್ಲಿ ಅಧಿಕಾರ ಕಳೆದುಕೊಂಡು ಕಂಗಾಲಾಗಿದ್ದು, ಮರಾಠಿ ಫಲಕ, ಮರಾಠಿ ಕಾಗದಪತ್ರ ಎಂದು ಮತ್ತೆ ಕಾಲು ಕೆದರಿ ಜಗಳಕ್ಕೆ ನಿಂತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಕರವೇ ಆಗ್ರಹಿಸಿದೆ.

ಈ ಕರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಭಾಷಾ ಅಲ್ಪ ಸಂಖ್ಯಾತ ಆಯೋಗದ ಆದೇಶ ಇಡೀ ದೇಶಕ್ಕೆ ಅನ್ವಯ ಆಗುತ್ತದೆ. ಈ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಮಹಾರಾಷ್ಟ್ರದ ಸೊಲ್ಲಾಪೂರ ಸೇರಿದಂತೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಜಾರಿ ಮಾಡಿದೆಯಾ ? ಅನ್ನೋದನ್ನು ಈ ಎಂಇಎಸ್ ನಾಯಕರು ಸ್ಪಷ್ಟಪಡಿಸಲಿ ಎಂದು ದೀಪಕ ಗುಡಗನಟ್ಟಿ ಸವಾಲು ಹಾಕಿದ್ದಾರೆ. ಭಾಷಾ ಅಲ್ಪ ಸಂಖ್ಯಾತರ ಆಯೋಗದ ಆದೇಶವನ್ನು ಮಹಾರಾಷ್ಟ್ರ ಸರ್ಕಾರವೇ ಪಾಲಿಸಿಲ್ಲ,ಅವರು ಪಾಲಿಸದ ಆದೇಶವನ್ನು ಕರ್ನಾಟಕದಲ್ಲಿ ಅನುಷ್ಠಾನ ಮಾಡಬಾರದು.ಎಂಇಎಸ್ ಮೊಂಡು ವಾದಕ್ಕೆ ಸರ್ಕಾರ ಮನ್ನಣೆ ನೀಡಬಾರದು ಎಂದು ಕರವೇ ಒತ್ತಾಯಿಸಿದೆ.

ಮಹಾರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ಕನ್ನಡಿಗರು ಅತೀ ಹೆಚ್ವಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ.ಆದ್ರೆ ಅಲ್ಲಿಯ ಕನ್ನಡಿಗರಿಗೆ ಮಹಾರಾಷ್ಟ್ರ ಸರ್ಕಾರ ಯಾವುದೇ ರೀತಿಯ ಭಾಷಾ ಸವಲತ್ತುಗಳನ್ನು ಕೊಡುತ್ತಿಲ್ಲ.ಹೀಗಾಗಿ ಭಾಷಾ ಅಲ್ಪ ಸಂಖ್ಯಾತರ ಆಯೋಗದ ಆದೇಶವನ್ನು ಪಾಲಿಸುವಂತೆ ಎಂಇಎಸ್ ನಾಯಕರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕೊಟ್ಟಿರುವ ಮನವಿಯನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.

ಚುನಾವಣೆ ಹತ್ತಿರ ಬಂದಾಗ ಎಂಇಎಸ್ ನಾಯಕರ ಮೈಯಲ್ಲಿ ಭಾಷೆ ಎಂಬ ಭೂತ ಮೈಯಲ್ಲಿ ಬರುತ್ತದೆ.ಮರಾಠಿಯಲ್ಲಿ ಕಾಗದ ಪತ್ರ ಕೊಡಬೇಕು,ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮರಾಠಿ ಫಲಕ ಹಾಕಬೇಕು ಎಂದು ಪ್ರತಿಭಟನೆ ಮಾಡುವ ಎಂಇಎಸ್ ನಾಯಕರು ನಾಟಕ ಮಾಡಿ,ಮುಗ್ದ ಮರಾಠಿಗರನ್ನು ಪ್ರಚೋದಿಸುತ್ತಲೇ ಬಂದಿದ್ದು,ಸರ್ಕಾರ ಇವರ ಪುಂಡಾಟಿಕೆಗೆ ಶಾಶ್ವತವಾಗಿ ಲಗಾಮು ಹಾಕುವ ನಿರ್ಧಾರ ಕೈಗೊಳ್ಳಬೇಕು ಎಂದು ದೀಪಕ ಗುಡಗನಟ್ಟಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ,ಆಡಳಿತದಲ್ಲಿ ಕನ್ನಡ ಭಾಷೆಯನ್ನು ಬಿಟ್ಟು ಇತರ ಯಾವುದೇ ಭಾಷೆಯನ್ನು ಅನುಷ್ಠಾನ ಮಾಡಬಾರದು.ಎಂದು ಕರವೇ ಒತ್ತಾಯ ಮಾಡಿದೆ.


Gadi Kannadiga

Leave a Reply