This is the title of the web page
This is the title of the web page

Please assign a menu to the primary menu location under menu

Local News

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ: ವಿವಿಧ ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ


ಬೆಳಗಾವಿ, ಆ.೨೨ ::ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ೨೦೨೩-೨೪ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗಾಗಿ ಆನ್ಲೆöÊನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಯೋಜನೆಗಳಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಲು ಸೆಪ್ಟಂಬರ್.೧೮ ೨೦೨೩ ರಂದು ಆನ್‌ಲೈನ್ ಏಚಿಛಿಜಛಿ ಏಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆಗಳು
ಸಾಮಾನ್ಯ ವರ್ಗದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿರಬೇಕು, ಜಾತಿ ಆದಾಯ ಪ್ರಮಾಣ ಪತ್ರ ನಮೂನೆ- ಜಿ ಯಲ್ಲಿ ಪಡೆರಬೇಕು, ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು, ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು, ಹಾಗೂ ಅವರ ಖಾಯಂ ವಿಳಾಸ ಕರ್ನಾಟಕ ರಾಜ್ಯದಲ್ಲಿರಬೇಕು, ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡನೆ ಮಾಡಿರಬೇಕು, ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಟ್ ಮಾಡಿಸಿರಬೇಕು,
ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ.೩೩% ವಿಕಲಚೇತನರಿಗೆ ಶೇ ೫% ಹಾಗೂ ತೃತೀಯ ಲಿಂಗಗಳಿಗೆ ಶೇ.೫ ಮಿಸಲಾತಿ ಇರಿಸಲಾಗಿದೆ. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ, ಅರಿವು ಶೈಕ್ಷಣಿಕ ಸಾಲ ಯೋಜನೆಗಳಲ್ಲಿ ಮಾತ್ರ ಇಬ್ಬರಿಗೆ ಅವಕಾಶವಿರುತ್ತದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಅರ್ಹತೆಗಳು:
ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.೩ ಲಕ್ಷ ಮಿತಿಯೊಳಗಿರಬೇಕು, ಅರ್ಜಿದಾರರು ೧೮ ವರ್ಷ ಮೇಲ್ಪಟ್ಟು ೪೫ ವರ್ಷ ಒಳಗಿನವರಾಗಿರಬೇಕು, ಯೋಜನೆಗಳಲ್ಲಿ ಕನಿಷ್ಠ ರೂ.೫೦ ಸಾವಿರ ಗಳಿಂದ ಗರಿಷ್ಠ ೧ ಲಕ್ಷದ ವರಗೆ ಸಾಲ ಒದಗಿಸಲಾಗುವುದು, ಮೊತ್ತದಲ್ಲಿ ಶೇ.೨೦ ರಷ್ಟು ಸಹಾಯಧನ ಹಾಗೂ ಶೇ.೮೦ರಷ್ಟು ಸಾಲವನ್ನು ವಾರ್ಷಿಕ ಶೇ.೪ ರ ಬಡ್ಡಿ ದದದಲ್ಲಿ ಮಂಜೂರು ಮಾಡಲಾಗುವುದು. ೨ ತಿಂಗಳ ವಿರಾಮ ಅವಧಿ ಇರುತ್ತದೆ, ನಂತರ ಸಾಲವನ್ನು ೩೪ ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.
ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆಯ ಅರ್ಹತೆಗಳು
ಅರ್ಜಿದಾರರ ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ೬ ಲಕ್ಷ ರೂ ಗಳ ಮಿತಿಯೊಳಗಿರಬೇಕು, ಅರ್ಜಿದಾರರು ೨೧ ವರ್ಷ ಮೇಲ್ಪಟ್ಟು ೫೫ ವರ್ಷದ ಒಳಗಿನವರಾಗಿರಬೇಕು, ಯೋಜನೆಯಡಿ ಆಹಾರ ವಾಹಿನಿ ಪ್ರಾರಂಭಿಸಲು ಬ್ಯಾಂಕ್ ಸಹಕಾರಿ ಸಂಘಗಳಿಂದ ಸಾಲ ಪಡೆಯಬೇಕು ಹಾಗೂ ನಿಗಮದಿಂದ ಗರಿಷ್ಠ . ೨ ಲಕ್ಷ ರೂ ಗಳ ಸಹಾಯಧನವನ್ನು ನೀಡಲಾಗುವುದು,
ವಾಸವಿ ಜಲಶಕ್ತಿ ಯೋನೆಯ ಅರ್ಹತೆಗಳು:
ಯೋಜನೆಯಡಿ ೨ ರಿಂದ ೫ ಎಕರೆ ಕೃಷಿ ಭೂಮಿ ಹೊಂದಿದವರಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಸಾಲ ಸಹಾಯಧನವನ್ನು ನೀಡಲಾಗುವುದು, ಅರ್ಜಿದಾರ ಕುಟುಂಬ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ೬ ಲಕ್ಷ ರೂ ಗಳ ಮಿತಿಯೊಳಗಿರಬೇಕು, ಅರ್ಜಿದಾರರು ೨೧ ವರ್ಷ ಮೇಲ್ಪಟ್ಟು ೫೦ ವರ್ಷದ ಒಳಗಿನವರಾಗಿರಬೇಕು, ಈ ಯೋಜನೆಯಡಿ ಗರಿಷ್ಠ ೨ ಲಕ್ಷ ರೂ ಗಳ ಸಾಲವನ್ನು ವಾರ್ಷಿಕ ಶೇ.೪ರ ಬಡ್ಡಿ ದರದಲ್ಲಿ ಒದಗಿಸಲಾಗುವದು ಹಾಗೂ ವಿದ್ಯುದ್ದೀಕರಣಕ್ಕಾಗಿ ರೂ.೫೦ ಸಾವಿರ ಸಹಾಯಧನ ನೀಡಲಾಗುವುದು, ೬ ತಿಂಗಳ ವಿರಾಮಾವಧಿ ಇರುತ್ತದೆ ನಂತರ ಸಾಲವನ್ನು ೩೪ ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.


Leave a Reply