This is the title of the web page
This is the title of the web page

Please assign a menu to the primary menu location under menu

State

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ ಚುನಾವಣಾ ಸಮಯದಲ್ಲಿ ಅಕ್ರಮ ವೆಚ್ಚದ ಮೇಲಿನ ನಿಯಂತ್ರಣಕ್ಕೆ ಆದೇಶ


ಗದಗ ಮಾರ್ಚ ೩೦: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ -೨೦೨೩ ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನದನ್ವಯ ಚುನಾವಣೆಯನ್ನು ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೋಸ್ಕರ ಹಾಗೂ ಚುನಾವಣಾ ಸಮಯದಲ್ಲಿ ಅಕ್ರಮ ವೆಚ್ಚವನ್ನು ನಿಯಂತ್ರಿಸುವುದಕ್ಕಾಗಿ ಚುನಾವಣಾ ಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೆ ಯಾವುದೇ ವ್ಯಕ್ತಿಯು ಸೂಕ್ತ ದಾಖಲಾತಿಗಳಿಲ್ಲದೇ ೫೦,೦೦೦ ಕ್ಕಿಂಚ ಹೆಚ್ಚಿನ ನಗದನ್ನು ಕೊಂಡೊಯ್ಯುವುದನ್ನು ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಹಾಗೂ ಓರ್ವ ದಾನಿಯಿಂದ ವಿವಿಧ ಕಾರಣಗಳಿಗಾಗಿ ೨ ಲಕ್ಷಕ್ಕಿಂತ ಹೆಚ್ಚಿನ ನಗದು ಉಡುಗೊರೆಯನ್ನು ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ. ವ್ಯಾಪಾರ ವಹಿವಾಟಿನ ಕಾರಣಗಳಿಗಾಗಿ ಸೂಕ್ತ ದಾಖಲಾತಿಗಳಿಲ್ಲದೇ ೧೦,೦೦೦ ರೂ.ಗಳಿಗಿಂತ ಹೆಚ್ಚಿಗೆ ಬೆಲೆಬಾಳುವ ಸರಕುಗಳನ್ನು ಸಂಗ್ರಹಿಸುವುದು ಹಾಗೂ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಆದೇಶ ಹೊರಡಿಸಿದ್ದಾರೆ.
ಪ್ರಚಾರ ಸಾಮಗ್ರಿ ನಿಷೇಧ : ಜಿಲ್ಲೆಯಲ್ಲಿ ಚುನಾವಣೆಯನ್ನು ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೋಸ್ಕರ ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳು ಮತ್ತು ಇತರ ತೆರೆದ ಸ್ಥಳಗಳಲ್ಲಿ ಚಿಹ್ನೆಗಳು ಮತ್ತು ಬಿತ್ತಪತ್ರಗಳ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಆಸ್ತಿ ಮತ್ತು ತೆರೆದ ಸ್ಥಳಗಳ ವಿರೂಪಗೊಳಿಸುವಿಕೆಯನ್ನು ತಡೆಗಟ್ಟಲು ಆದೇಶಿಸಲಾಗಿದೆ. ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸ್ಥಳೀಯ ಪ್ರಾಧಿಕಾರದ ಲಿಖಿತ ಅನುಮತಿಯಿಲ್ಲದೇ ಯಾವುದೇ ಜಾಹೀರಾತು ಪ್ರದರ್ಶಿಸುವುದನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಆದೇಶ ಹೊರಡಿಸಿದ್ದಾರೆ.
ಪ್ರತಿಬಂಧಕಾಜ್ಞೆ ಜಾರಿ: ಚುನಾವಣಾ ಆಯೋಗವು ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-೨೦೨೩ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇ ೧೫ ರವರೆಗೆ ಜಿಲ್ಲೆಯಾದ್ಯಂತ ವಿತ್ತ ಜೀವಿಗಳಿಗೆ ಮಾರಕವಾಗುವ ಯಾವುದೇ ಮಾರಕಾಸ್ತ್ರಗಳನ್ನು ( ಕಲ್ಲು , ಬಂದೂಕು , ಭರ್ಚಿ , ಕತ್ತಿ, ಚಾಕೂ , ಕುಡುಗೋಲು , ಕೊಡಲಿ , ಬಡಿಗೆ ಇತ್ಯಾದಿ) ಸಂಗಡ ಕೊಂಡೊಯ್ಯುವುದನ್ನು ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ವೈಶಾಲಿ ಎಂ.ಎಲ್. ಅವರು ಆದೇಶ ಹೊರಡಿಸಿದ್ದಾರೆ.


Leave a Reply