This is the title of the web page
This is the title of the web page

Please assign a menu to the primary menu location under menu

State

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಶಾಂತಿಯುತವಾಗಿ ಜರುಗಿದ ಮತ ಏಣಿಕೆ


ಗದಗ ಮೇ ೧೩: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ ನಾಲ್ಕು ವಿಧಾನ ಸಭಾ ಮತಕ್ಷೇತ್ರಗಳಲ್ಲಿ ಮೇ. ೧೦ ರಂದು ಮತದಾನ ಜರುಗಿತ್ತು. ಮೇ.೧೩ ರಂದು ಗದಗ ನಗರದ ತೋಂಟದಾರ್ಯ ಎಂಜಿನೀಯರಿಂಗ್ ಕಾಲೇಜಿನಲ್ಲಿ ಬೆಳಗ್ಗೆ ೮ ರಿಂದ ಮತ ಏಣಿಕೆ ಕಾರ್ಯ ಶಾಂತಿಯುತವಾಗಿ ಜರುಗಿತು. ಶಿರಹಟ್ಟಿ ವಿಧಾನಸಭಾ ಮತಕ್ಷೆತ್ರದಿಂದ ಡಾ.ಚಂದ್ರು ಲಮಾಣಿ (ಬಿಜೆಪಿ), ಗದಗ ವಿಧಾನಸಭಾ ಮತಕ್ಷೇತ್ರದಿಂದ ಎಚ್.ಕೆ.ಪಾಟೀಲ (ಆಯ್.ಎನ್.ಸಿ) ರೋಣ ವಿಧಾನಸಭಾ ಕ್ಷೇತ್ರದಿಂದ ಜಿ.ಎಸ್.ಪಾಟೀಲ (ಆಯ್.ಎನ್.ಸಿ) ಹಾಗೂ ನರಗುಂದ ವಿಧಾನಸಭಾ ಕ್ಷೇತ್ರದಿಂದ ಸಿ.ಸಿ.ಪಾಟೀಲ (ಬಿಜೆಪಿ) ಅವರುಗಳು ಗೆಲವು ಸಾಧಿಸಿದ್ದು ಕ್ಷೇತ್ರವಾರು ಸ್ಪರ್ಧಿಸಿದ ಅಭ್ಯರ್ಥಿಗಳು, ಪಕ್ಷ ಹಾಗೂ ಪಡೆದ ಮತಗಳ ವಿವರ ಇಂತಿದೆ.
೬೫-ಶಿರಹಟ್ಟಿ ವಿಧಾನಸಭಾ ಮತ ಕ್ಷೇತ್ರ: ಡಾ.ಚಂದ್ರ ಲಮಾಣಿ (ಬಿಜೆಪಿ) ಪಡೆದ ಮತಗಳು ೭೪೪೮೯, ದೊಡಮನಿ ಮಲ್ಲಿಕಾರ್ಜುನ ಯಲ್ಲಪ್ಪ (ಎಎಪಿ) ೮೭೨, ಸುಜಾತ ನಿಂಗಪ್ಪ ದೊಡಮನಿ ೩೪,೭೯೧, ಹನುಮಂತಪ್ಪ ಎಂ.ನಾಯಕ (ಜೆ.ಡಿ.ಎಸ್) ೨೦೬೫, ಡಾ.ಮುತ್ತು ಸರುಕೋಡ (ಆಯ್.ಎಂ.ಪಿ) ೩೧೨, ಮಂಜುನಾಥÀ ಅಸೆಂಗಪ್ಪ ಆಸಂಗಿ (ಕೆ.ಆರ್.ಎಸ್) ೨೨೮, ಸುಷ್ಮಾ ಸುನೀಲ ಸರ್ವದೇ (ಉತ್ತಮ ಪ್ರಜಾಕೀಯ ಪಕ್ಷ) ೪೭೨, ದುರಗಪ್ಪ ಶೇಖಪ್ಪ ಬಿಂಜಡಗಿ (ಪಕ್ಷೇತರ) ೨೨೮, ದೊಡ್ಡಪ್ಪ ಭದ್ರಪ್ಪ ಲಮಾಣಿ (ಪಕ್ಷೇತರ) ೯೬೫, ರಾಜವೆಂಕಟೇಶ ದೇ ಕಾರಭಾರಿ (ಪಕ್ಷೇತರ) ೫೦೨, ರಾಮಕೃಷ್ಣ ಶಿದ್ದಲಿಂಗಪ್ಪ ದೊಡಮನಿ (ಪಕ್ಷೇತರ) ೪೫೯೬೯, ವೆಂಕಟೇಶ.ಬಿ.ಗುಜ್ಜರಿ (ಪಕ್ಷೇತರ) ೫೩೬, ಸಂತೋಷ ಗೌರವ್ವ ಹಿರೇಮನಿ (ಪಕ್ಷೇತರ) ೪೫೮, ಹನುಮಂತಪ್ಪ ಪೀರಪ್ಪ ಕೊರವರ (ಪಕ್ಷೇತರ) ೪೪೫, ನೋಟಾ-೧೬೪೨.
೬೬-ಗದಗ ವಿಧಾನಸಭಾ ಮತಕ್ಷೇತ್ರ: ಅನೀಲ ಮೆನಸಿನಕಾಯಿ (ಬಿಜೆಪಿ) ೭೪೮೨೮, ಗೋವಿಂದಗೌಡ್ರ. ವೆಂಕನಗೌಡ್ರ, ರಂಗನಗೌಡ (ಜೆ.ಡಿ.ಎಸ್.) ೬೯೮, ದೊಡ್ಡಮನಿ ಪೀರಸಾಬ (ಎಎಪಿ) ೪೯೩, ಎಚ್.ಕೆ.ಪಾಟೀಲ (ಆಯ್.ಎನ್.ಸಿ) ೮೯,೯೫೮, ಆನಂದ ಹಂಡಿ (ಕೆ.ಆರ್.ಎಸ್.) ೫೩೬, ಚಂದ್ರಶೇಖರ ದೇಸಾಯಿ (ರಾಣಿ ಚನ್ನಮ್ಮ ಪಾರ್ಟಿ) ೭೨, ಪೂಜಾ ಮಲ್ಲಪ್ಪ ಬೇವೂರ (ಆಯ್.ಎಂ.ಪಿ) ೯೮, ಸಚಿನಕುಮಾರ ಕರ್ಜೆಕ್ಕಣ್ಣವರ (ಉತ್ತಮ ಪ್ರಜಾಕೀಯ ಪಾರ್ಟಿ) ೨೭೬, ಬಿ.ಎಂ.ಪಾಟೀಲ (ಪಕ್ಷೇತರ) ೯೫, ಬಸವರಾಜ ಮಾಳೋದೆ (ಪಕ್ಷೇತರ) ೧೦೬, ಮಲ್ಲಿಕಾರ್ಜುನಗೌಡ ಶಂಕರಗೌಡ ಪರ್ವತಗೌಡ್ರ (ಪಕ್ಷೇತರ) ೨೮೩, ರುದ್ರಪ್ಪ ಬಸಪ್ಪ ಕುಂಬಾರ (ಪಕ್ಷೇತರ) ೭೨೯, ವಿಶ್ವನಾಥ ಖಾನಾಪುರ (ಪಕ್ಷೇತರ) ೨೭೬, ವೀರಭದ್ರಪ್ಪ ಈರಪ್ಪ ಕಬ್ಬಿಣದ (ಪಕ್ಷೇತರ) ೨೪೧, ನೋಟಾ-೧೫೪೩.
೬೭-ರೋಣ ವಿಧಾನಸಭಾ ಮತಕ್ಷೇತ್ರ: ಕಳಕಪ್ಪ ಗುರುಶಾಂತಪ್ಪ ಬಂಡಿ (ಬಿಜೆಪಿ) ೭೦೧೭೭, ಗುರುಪಾದಗೌಡ, ಸಂಗನಗೌಡ ಪಾಟೀಲ (ಆಯ್.ಎನ್.ಸಿ) ೯೪೮೬೫, ಆನೇಕಲ್ ದೊಡ್ಡಯ್ಯ (ಎಎಪಿ) ೮೮೩೯, ಮಕ್ತುಮಸಾಬ ಯಮನೂರಸಾಬ ಮುಧೋಳ (ಜೆ.ಡಿ.ಎಸ್.) ೬೫೨, ಕುಮಾರ ಅಂದಪ್ಪ ಹಕಾರಿ (ಶಿವಸೇನಾ) ೧೨೨, ಅಬ್ದುಲಖಾದರಸಾಬ ಎ (ಪಕ್ಷೇತರ) ೯೮, ದೇವೆಂದ್ರಪ್ಪ ಬಾಳಪ್ಪ ಓಲೇಕಾರ (ಪಕ್ಷೇತರ) ೧೨೪, ಬಿಬಿಜಾನ್ ರಾಜೇಸಾಬ ದರಗದ (ಪಕ್ಷೇತರ) ೨೫೬, ಶಿವಾನಂದ ಶಂಕರಪ್ಪ ರಾಠೋಡ (ಪಕ್ಷೇತರ) ೧೪೬೩, ನೋಟಾ-೧೬೦೦.
೬೮-ನರಗುಂದ ವಿಧಾನಸಭಾ ಮತಕ್ಷೇತ್ರ: ಸಿ.ಸಿ.ಪಾಟೀಲ (ಬಿ.ಜೆ.ಪಿ) ೭೨೮೩೫, ಬಿ.ಆರ್.ಯಾವಗಲ್ (ಆಯ್.ಎನ್.ಸಿ) ೭೧೦೪೪, ರಾಮಪ್ಪ ದ್ಯಾಮಪ್ಪ ಹೂವಣ್ಣವರ (ಎಎಪಿ) ೬೦೬, ಆರ್.ಎನ್.ಪಾಟೀಲ (ಜೆ.ಡಿ.ಎಸ್.)೬೫೩, ಹನುಮಂತ ಯಲ್ಲಪ್ಪ ಮಾದರ (ಬಿ.ಎಸ್.ಪಿ) ೧೦೧, ರುದ್ರಯ್ಯ ಗದಿಗಯ್ಯ ಸುರೇಬಾನ (ಆಯ್.ಎಂ.ಪಿ) ೩೯, ವೀರನಗೌಡ ಶಿವನಗೌಡ ಮೂಗನೂರ (ಕೆ.ಆರ್.ಎಸ್) ೧೪೨, ಉಮೇಶ ಫಕೀರಪ್ಪ ತಳವಾರ (ಪಕ್ಷೇತರ) ೪೧, ಎಂ.ವಾಯ್.ನಾಯಕ (ಪಕ್ಷೇತರ) ೫೧, ಡಾ.ಮುತ್ತು ಸರುಕೋಡ (ಪಕ್ಷೇತರ) ೮೧, ರಾಮಪ್ಪ ಹುಜರತ್ತಿ (ಪಕ್ಷೇತರ) ೧೦೪, ವಸಂತಗೌಡ ನಿಂಗನಗೌಡ ಬಂಡಿ (ಪಕ್ಷೇತರ) ೧೦೨, ವೀರೇಶ ಸೊಬರದಮಠ (ಪಕ್ಷೇತರ) ೧೬೬೩, ಶಿವಾನಂದ ಶಿದ್ದಪ್ಪ ಮಾಯನ್ನವರ (ಪಕ್ಷೇತರ) ೧೦೦೫, ನೋಟಾ-೧೭೬೭.
ಕ್ಷೇತ್ರವಾರು ಚಲಾವಣೆಯಾದ ಹಾಗೂ ತಿರಸ್ಕೃತ ಮತಗಳ ವಿವರ: ೬೫- ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ ೨೨೬೯೯೯ ಮತಗಳ ಪೈಕಿ ೧೬೨೩೩೨ ಮತಗಳು ಚಲಾವಣೆಯಾಗಿದ್ದು, ೧೩೧ ಮತಗಳು ತಿರಸ್ಕೃತಗೊಂಡಿವೆ. ೬೬-ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ೨೨೨೭೯೨ ಮತಗಳ ಪೈಕಿ ೧೬೮೬೮೯ ಮತಗಳು ಚಲಾಣೆಯಾಗಿದ್ದು ೧೩೮ ಮತಗಳು ತಿರಸ್ಕೃತಗೊಂಡಿವೆ. ೬೭-ರೋಣ ವಿಧಾನಸಭಾ ಮತಕ್ಷೆತ್ರದಲ್ಲಿ ೨೩೨೫೧೦ ಮತಗಳ ಪೈಕಿ ೧೭೬೫೯೬ ಮತಗಳು ಚಲಾವಣೆಯಾಗಿದ್ದು ೧೫೦ ಮತಗಳು ತಿರಸ್ಕೃತಗೊಂಡಿವೆ. ೬೮-ನರಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ೧೮೬೫೩೮ ಮತಗಳ ಪೈಕಿ ೧೫೦೩೧೩ ಮತಗಳು ಚಲಾವಣೆಯಾಗಿದ್ದು ೭೯ ಮತಗಳು ತಿರಸ್ಕೃತಗೊಂಡಿವೆ.


Leave a Reply