ಸವದತ್ತಿಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಟ್ರಸ್ಟ್ ಸಭೆ

Murugesh Shivapuji
ಸವದತ್ತಿಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಟ್ರಸ್ಟ್ ಸಭೆ
WhatsApp Group Join Now

ಸವದತ್ತಿ:- ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಟ್ರಸ್ಟ್ ನ ಸಭೆ ಸವದತ್ತಿಯಲ್ಲಿ ಜರುಗಿತು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಮುರಗೇಶ ಬಿ ಶಿವಪೂಜಿ ರಾಜ್ಯಾಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ ರವರು ವಹಿಸಿಕೊಂಡಿದ್ದರು.

ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ರಾದ ಸುದೇಶ ಕುಮಾರ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮುರಗೇಶ ಬಿ ಶಿವಪೂಜಿ ಯವರು ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಸಭೆಗೆ ತಿಳಿಸಿದರು.

ಯಾವುದೇ ಸರ್ಕಾರದ ಅನುದಾನ ವಿಲ್ಲದೇ ಸಂಘದ ಸಹಕಾರದಿಂದ ಅನುಕೂಲ ವಾಗುವಷ್ಟು ಹಣದ ಸಹಾಯ ವನ್ನು ನಮ್ಮ ಪತ್ರಕರ್ತರಿಗೆ ಆರ್ಥಿಕ ವಾಗಿ ಸಹಾಯ ಮಾಡುತ್ತಾ ಹೊರಟಿದ್ದೇವೆ.

ಸುಮಾರು 6.70 ಲಕ್ಷ ಹಣವನ್ನು 2014-2024 ರ 10 ವರ್ಷದ ಅವಧಿಯಲ್ಲಿ ಟ್ರಸ್ಟ್ ವತಿಯಿಂದ ವತಿಯಿಂದ ಪತ್ರಕರ್ತರಿಗೆ ಅನಾರೋಗ್ಯ ಸಂದರ್ಭದಲ್ಲಿ ಮತ್ತು ನಿಧನರಾದ ಸಂದರ್ಭದಲ್ಲಿ ಸಹಾಯ ಮಾಡಿದೆ.

ಬೆಳಗಾವಿ ಮತ್ತು ಉತ್ತರಕನ್ನಡ ಜಿಲ್ಲೆಯಲ್ಲಿ ಕೋಆಪರೇಟಿವ್ ಸೊಸೈಟಿಯ ನ್ನು ಸಂಘದ ವತಿಯಿಂದ ಸ್ಥಾಪಿಸಲಾಗಿದೆ.

ಕೆಲಸ ಕೊಟ್ಟು ಕೂಲಿ ನೀಡುವ ಮೂಲಕ ಕೋಆಪರೇಟಿವ್ ಸೊಸೈಟಿಗೆ ಸಹಾಯ ಮಾಡಲು ಇಚ್ಛಿಸುವ ವ್ಯಕ್ತಿಗಳಿದ್ದರೆ ನಮಗೆ ಸಹಾಯ ಸಹಕಾರ ಮಾಡಬಹುದು ಎಂದು ಕರ್ನಾಟಕ ಪತ್ರಕರ್ತರ ಸಂಘ ರಾಜ್ಯಾದ್ಯಕ್ಷರಾದ ಮುರುಗೇಶ್ ಶಿವಪೂಜಿ ರವರು ಮನವಿ ಮಾಡಿಕೊಂಡರು.ದೇಶದಲ್ಲಿ ಒಟ್ಟು 22 ರಾಜ್ಯದಲ್ಲಿ ನಮ್ಮ ಸಂಘ ಕೆಲಸ ಮಾಡುತ್ತಿದೆ.ದೇಶದ ಎರಡನೇ ಸಂಘ ನಮ್ಮ ಕರ್ನಾಟಕ ಪತ್ರಕರ್ತರ ಸಂಘ ನಮ್ಮದಾಗಿದೆ ಎಂದರು.

ಸವದತ್ತಿ ಶಾಸಕ ವಿಶ್ವಾಶ ವೈದ್ಯ ಮಾತನಾಡಿ
ನಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಮೊದಲು ಎಲ್ಲಾ ಜಿಲ್ಲೆಯ ಪತ್ರಕರ್ತರಿಗೆ ಅಭಿನಂದನೆ ಗಳನ್ನು ಸಲ್ಲಿಸಿದರು.

ನಾನು ಒಬ್ಬ ಜನಪ್ರತಿನಿಧಿಯಾಗಿ ನೀವು ನನಗೆ ಕೊಡುವ ಜವಾಬ್ದಾರಿಯನ್ನು ನಾನು ನನ್ನ ಕೈಲಾದ ಸಹಾಯ ಮಾಡಿ ನಿಮ್ಮೊಂದಿಗೆ ನಾನಿರುತ್ತೇನೆ.

ದೇಶದಲ್ಲಿ ಮತ್ತು ರಾಜ್ಯದಲ್ಲಿ ನಿಮ್ಮ ಸಂಘವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲಿ ತಾಯಿ ಸವದತ್ತಿ ಯಲ್ಲಮ್ಮ ನ ತಾಯಿಯ ಆಶೀರ್ವಾದ ವಿರಲಿ ಎಂದು ಶುಭಹಾರೈಸಿದರು.

ನಂತರ ಕಾರ್ಯಕ್ರಮಗಳನ್ನು ರಾಜ್ಯಾದ್ಯಕ್ಷರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಕರ್ನಾಟಕ ಪತ್ರಕರ್ತರ ಸಂಘದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವುದಕ್ಕೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ಸ್ಮರಣ ಸಂಚಿಕೆಗೆ ಜಾಹೀರಾತು ಸಂಗ್ರಹಿಸಿ ಕಾರ್ಯಕ್ರಮ ಕ್ಕೆ ಸಂಪನ್ಮೂಲ ಕ್ರೋಡಿಕರಣಕ್ಕೆ ಅನುಕೂಲ ಮಾಡುವಂತೆ ಎಲ್ಲಾ ಜಿಲ್ಲಾ ಅಧ್ಯಕ್ಷರಿಗೂ ತಿಳಿಸಲಾಗುವುದು.ಎಂದು ಬಸವರಾಜ ಪುಟ್ಟಿ ಸಭೆಗೆ ತಿಳಿಸಿದರು.

ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ ಮಾತಾನಾಡಿ ಪತ್ರಿಕಾ ವಿತರಕರನ್ನು ಇದುವರೆಗೂ ಯಾವುದೇ ಸಂಘ ಗುರಿತಿಸಿರಲಿಲ್ಲ ,ಆದರೆ ಕರ್ನಾಟಕ ಪತ್ರಕರ್ತರ ಸಂಘ ವು ನಮ್ಮನ್ನು ತಮ್ಮೊಂದಿಗೆ ಸೇರ್ಪಡೆ ಮಾಡಿ ಕೊಂಡಿರುವುದು ಬಹಳ ಸಂತೋಷದ ವಿಚಾರ ,ಹಾಗೂ ಸಂಘದ ಟ್ರಸ್ಟಿನ ನೂತನ ಆಹ್ವಾನಿತ ಟ್ರಸ್ಟಿ ಆಗಿ ಸವದತ್ತಿಯಲ್ಲಿ ಆಯ್ಕೆ ಮಾಡಿರುವುದಕ್ಕೆ ತುಂಬ ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

ಟ್ರಸ್ಟ್‌ ಗೆ ಸೇರ್ಪಡೆಯಾಗಬೇಕಾದರೆ ಟ್ರಸ್ಟ್ ಹೆಸರಿಗೆ 50 ಸಾವಿರ ನಿಗದಿ ಮಾಡಿದ್ದ ಕಾರಣ ಸಂಘದ ಟ್ರಸ್ಟ್ ಗೆ 50 ಸಾವಿರ ಚೆಕ್ ನ್ನು ಸಂಘದ ರಾಜ್ಯಾದ್ಯಕ್ಷರಿಗೆ ಹಸ್ತಾಂತರ ಮಾಡಿದರು.
ಟ್ರಸ್ಟ್‌ ಜಾಗೆಯ ಕುರಿತು ವೇದಿಕೆಯಲ್ಲಿ ಚರ್ಚಿಸಲಾಯಿತು.

ಪತ್ರಕರ್ತರ ಸಂಘದ ಕುಟುಂಬಕ್ಕೆ ಸಹಾಯ ಮಾಡಿದ ಸದಸ್ಯರಿಗೆ ಸಂಘವು ಸಹಾಯ ಮಾಡಿದ ಕುರಿತು ಸಭೆಗೆ ಸಂಘದ ಉಪಾಧ್ಯಕ್ಷರಾದ ಸುದೇಶ ಕುಮಾರ ರವರು ತಿಳಿಸಿದರು.

ಗೋವಾ ರಾಜ್ಯದಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲು ತೀರ್ಮಾನ ಕೈಗೊಳ್ಳಬೇಕು ಎಂದು ಬಾಗಲಕೋಟ ಜಿಲ್ಲಾಧ್ಯಕ್ಷ ವಿಜಯಶಂಕರ್ ಹಾಗೂ ಕೊಪ್ಪಳ ಜಿಲ್ಲಾ ಅಧ್ಯಕ್ಷ ಆರ್ ಶರಣಪ್ಪ ಗುಮಗೇರಾ ಅವರು ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯು ಆಗಿರುವ ಮುರುಗೇಶ್ ಶಿವಪೂಜಿ ಅವರಿಗೆ ವಿನಂತಿಸಿದರು.

ಸೌದತ್ತಿ ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಸುದೀರ್ ದೊಡ್ಡಮನಿ ಅವರು  ಸಭೆಗೆ ಆಗಮಿಸಿದ ಕೊಪ್ಪಳ,ವಿಜಯಪೂರ,ವಿಜಯನಗರ, ರಾಮನಗರ, ಚಾಮರಾಜನಗರ, ಬಾಗಲಕೋಟ,ಹಾವೇರಿ, ಬೆಳಗಾವಿ, ಬಳ್ಳಾರಿ  ಸೊಲ್ಲಾಪುರ , ಗದಗ, ಉತ್ತರ ಕನ್ನಡ ಜಿಲ್ಲೆಗಳ ಅಧ್ಯಕ್ಷರುಗಳು, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳು ಸೇರಿದಂತೆ ಪತ್ರಿಕಾ ಬಳಗದವರಿಗೂ ಸನ್ಮಾನಿಸಿ ಸತ್ಕರಿಸಲಾಯಿತು. ಟ್ರಸ್ಟಿ ಬಸವರಾಜ್ ಪುಟ್ಟಿ ಅವರು ಸ್ವಾಗತಿಸಿದರು.

WhatsApp Group Join Now
Telegram Group Join Now
Share This Article
error: Content is protected !!