This is the title of the web page
This is the title of the web page

Please assign a menu to the primary menu location under menu

Local News

ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ


ಬೆಳಗಾವಿ,ಜೂನ್೨೧: ಕರ್ನಾಟಕ ಸವಿತಾ ಸಮಾಜದ ಅಭಿವೃದ್ಧಿ ನಿಗಮ ೨೦೨೨-೨೩ನೇ ಸಾಲಿನ ಕ್ರಿಯಾ ಯೋಜನೆಯನ್ವಯ ವಿವಿಧ ಸಾಲ ಸೌಲಭ್ಯಗಳನ್ನು ಪಡೆಯಲು ಅರ್ಹ ಸವಿತಾ ಸಮಾಜಕ್ಕೆ ಸೇರಿದವರಿಂದ ಅರ್ಜಿಗಳನ್ನು ಅಹ್ವಾನಿಸಿದೆ.
ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ:
ಈ ಯೋಜನೆಯಡಿ ಮೇಲೆ ತಿಳಿಸಿರುವ ಸಮಾಜದವರಿಗೆ ಕುಲಕಸುಬು/ಸಾಂಪ್ರದಾಯಿಕ ವೃತ್ತಿಗಳಾದ ಕ್ಷೌರಿಕ ವೃತ್ತಿ, ಬ್ಯೂಟಿಷಿಯನ್, ಡೋಲು, ವಾದ್ಯ ಮತ್ತು ಬ್ಯಾಂಡ್‌ಸೆಟ್ ಮುಂತಾದ ವೃತ್ತಿಗಳನ್ನು ಹಾಗೂ ಕೌಶಲ್ಯತೆ ಹೊಂದಿರುವ ವೃತ್ತಿಗಳನ್ನು ಕೈಗೊಳ್ಳಲು ಗರಿಷ್ಠ ರೂ.೨.೦೦ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ಶೇಕಡಾ ೨ರ ಬಡ್ಡಿದರದಲ್ಲಿ ಒದಗಿಸಲಾಗುವುದು. ಘಟಕ ವೆಚ್ಛ ರೂ. ೫೦,೦೦೦/-ಗಳ ವರೆಗಿನ ಘಟಕ ವೆಚ್ಛದ ಆರ್ಥಿಕ ಚಟುವಟಿಕೆಗಳಿಗೆ ಶೇ. ೩೦ರಷ್ಟು ಗರಿಷ್ಟ ರೂ ೧೦,೦೦೦/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ. ೭೦ರಷ್ಟು ಗರಿಷ್ಟ ರೂ.೪೦,೦೦೦/-ಗಳು ರೂ.೫೦,೦೦೧/- ರಿಂದ ರೂ.೧,೦೦,೦೦೦/-ಗಳವರೆಗಿನ ಘಟಕ ವೆಚ್ಛದ ಆರ್ಥಿಕ ಚಟುವಟಿಕೆಗಳಿಗೆ ಶೇ.೨೦ರಷ್ಟು ಸಹಾಯಧನ ಉಳಿಕೆ ಶೇ.೮೦ರಷ್ಟು ಗರಿಷ್ಠ ರೂ.೮೦,೦೦೦/-ಗಳ ಸಾಲ ರೂ.೧,೦೦,೦೦೧/- ರಿಂದ ಗರಿಷ್ಠ ರೂ.೨,೦೦,೦೦೦/-ಗಳ ವರೆಗಿನ ಘಟಕ ವೆಚ್ಛಗಳ ಆರ್ಥಿಕ ಚಟುವಟಿಕೆಗಳಿಗೆ ಕನಿಷ್ಠ ರೂ.೨೦,೦೦೦/-ಗಳಿಂದ ಗರಿಷ್ಠ ರೂ.೩೦,೦೦೦/-ಗಳ ಸಹಾಯಧನ, ಉಳಿಕೆ ಮೊತ್ತ ಶೇ.೮೫ರಷ್ಟು ಗರಿಷ್ಟ ರೂ.೧,೭೦,೦೦೦/ ಇರುತ್ತದೆ.
ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯಧನ ಯೋಜನೆ:
ಸ್ವಯಂ ಉದ್ಯೋಗ ಸಾಲ ಯೋಜನೆಯಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಕೈಗೊಳಲು ಗರಿಷ್ಠ ರೂ.೨.೦೦ ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ಶೇ.೪ರ ಬಡ್ಡಿ ದರದಲ್ಲಿ ಒದಗಿಸಲಾಗುವದು. ರೂ. ೫೦,೦೦೦/-ರವರೆಗಿನ ಘಟಕವೆಚ್ಛದ ಆರ್ಥಿಕ ಚಟುವಟಿಕೆಗಳಿಗೆ ಶೇ.೨೦ರಷ್ಟು ಸಹಾಯಧನ ಉಳಿಕೆ ಶೇ.೮೦ರಷ್ಟು ಸಾಲ ರೂ.೧,೦೦,೦೦೧ ರಿಂದ ಗರಿಷ್ಠ ೨,೦೦,೦೦೦/-ರವರೆಗಿನ ಘಟಕವೆಚ್ಛಗಳ ಆರ್ಥಿಕ ಚಟುವಟಿಕೆಗಳಿಗೆ ಕನಿಷ್ಠ ರೂ.೨೦,೦೦೦/-ಗಳಿಂದ ಗರಿಷ್ಠ ರೂ.೩೦,೦೦೦/-ಗಳ ಸಹಾಯಧನ ಉಳಿಕೆ ಮೊತ್ತ ಶೇ.೮೫ರಷ್ಟು ಗರಿಷ್ಟ ರೂ.೧,೭೦,೦೦೦/-ಗಳ ಸಾಲ ಮಂಜೂರು ಮಾಡಲಾಗುವದು. ಈ ಯೋಜನೆಯಲ್ಲಿ ಸೌಲಭ್ಯ ಪಡಯಬಯಸುವವರು ಹಿಂದುಳಿದ ವರ್ಗಗಳ ಪ್ರ-ವರ್ಗ ೨ಎರಲ್ಲಿ ಬರುವ ಸವಿತಾ ಮತ್ತು ಇದರ ಉಪಜಾತಿಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಂತರ ಪ್ರದೇಶದವರಿಗೆ ರೂ.೯೮,೦೦೦/-ಗಳು ಪಟ್ಟಣ ಪ್ರದೇಶದವರಿಗೆ ರೂ.೧,೨೦,೦೦೦/-ಗಳ ಒಳಗಿರಬೇಕು. ಅರ್ಜಿದಾರರ ವಯಸ್ಸು ೧೮ ರಿಂದ ೫೫ ವರ್ಷಗಳ ಮಿತಿಯಲ್ಲಿರಬೇಕು. ಈ ಯೋಜನೆಯಡಿಯಲ್ಲಿ ಸೌಲಭ್ಯ ಒದಗಿಸಲು ಸುವಿಧಾ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವಾ ಅರ್ಜಿದಾರರು ಆಧಾರ ಜೋಡನೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ ಕಾರ್ಡನಲ್ಲಿರುವಂತೆ ಅರ್ಜಿದಾರರ ಹೆಸರು/ವಿಳಾಸ/ಜಾತಿ ಮತ್ತು ಆಧಾಯ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಪಾಸಪುಸ್ತಕದಲ್ಲಿ ತಾಳೆ ಆಗಬೇಕು.(ಶ್ರೀ/ಶ್ರೀಮತಿ/ಕುಮಾರಿ ಮುಂತಾದ ಮಾಹಿತಿಗಳು) ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಚೇರಿಯ ಅವಧಿಯಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುತ್ತದೆ.
ಸಮಾಜದ ಅರ್ಜಿದಾರರು hಣಣಠಿs://suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ ಜಾಲತಾಣದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ನಿಗಮದ ವೆಬ್‌ಸೈಟ್ hಣಣಠಿs://ಞssಜ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ನಿಗಮದ ಸಹಾಯವಾಣಿ ಸಂಖ್ಯೆ: ೯೬೬೦೬೦೬೬೩೮೯ ಹಾಗೂ ಬೆಳಗಾವಿ ಜಿಲ್ಲೆಯ ದೂರವಾಣಿ ಸಂಖ್ಯೆ:-೦೮೩೧-೨೪೦೨೧೬೩ ಸಂಪರ್ಕಿಸಬಹುದಾಗಿದೆ. ಆನ್ ಲೈನ್ ಮೂಲಕ ಭತಿ ಮಾಡಿದ ಅರ್ಜಿಗಳನ್ನು ಅಗತ್ಯ/ದಾಖಲಾತಿಗಳೊಂದಿಗೆ ಜೂನ್ ೨೦ ರಿಂದ ಆಗಸ್ಟ್ ೦೩೨೦೨೨ರೊಳಗೆ ಸುವಿಧಾ ತಂತ್ರಾಂಶದ ಮುಖಾಂತರ ಸಲ್ಲಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply