This is the title of the web page
This is the title of the web page

Please assign a menu to the primary menu location under menu

Local News

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಳಗಾವಿ ಪ್ರಾಂತೀಯ ನೂತನ ಕಟ್ಟಡ ಉದ್ಘಾಟನೆ ಸಹಕಾರಿ ಸಂಸ್ಥೆಗಳ ದಿವಾಳಿತನ ತಡೆಯಲು ಕಠಿಣ ಕ್ರಮ : ಸಹಕಾರ ಸಚಿವ ಎಸ್.ಟಿ.ಸೋಮಶೇಖರ್


ಬೆಳಗಾವಿ,ಏ.೨೦ : ಸಹಕಾರಿ ಸಂಸ್ಥೆಗಳ ದಿವಾಳಿತನ ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ಇಲ್ಲಿನ ಆಟೋ ನಗರದಲ್ಲಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಳಗಾವಿ ಪ್ರಾಂತೀಯ ನೂತನ ಕಟ್ಟಡವನ್ನು ಬುಧವಾರ(ಏ.೨೦) ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಒಟ್ಟು ೫೪೦೦ ಸೌಹಾರ್ದ ಸಂಯುಕ್ತ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸಿಸುತ್ತಿದ್ದು, ಕೆಲವೊಂದು ಸಂಸ್ಥೆಗಳು ಮಾಡಿದ ದಿವಾಳಿತನಕ್ಕೆ ಒಟ್ಟಾರೆ ಸಹಕಾರಿ ಕ್ಷೇತ್ರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ತಡೆಗಟ್ಟಲು ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು.
ಸಾರ್ವಜನಿಕರು ಎಲ್ಲಿ ಹಣ ಠೇವಣಿ ಇಟ್ಟಿರುವರೋ, ಅಲ್ಲಿಯೇ ಅವರಿಗೆ ಹಣವನ್ನು ಹಿಂದಿರುಗಿಸುವ ಕಾರ್ಯ ಮಾಡುತ್ತೇವೆ. ದಿವಾಳಿ ಯನ್ನು ತಡೆಗಟ್ಟಲು ವಿಶೇಷ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಸಂಸ್ಥೆ ದಿವಾಳಿ ಆಗುತ್ತದೆ ಎಂದು ಸಣ್ಣ ಸುಳಿವು ಸಿಕ್ಕಲ್ಲಿ ಅವರ ಮೇಲೆ ಕಾನೂನು ಕ್ರಮ ತೆಗೆಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಒಂದು ಸಂಸ್ಥೆಯ ಬೆಳವಣಿಗೆ ಜನಸೇವೆಯ ಮೇಲೆ ನಿರ್ಧಾರಿತವಾಗಿರುತ್ತದೆ. ಜನರು ಎಷ್ಟು ವಿಶ್ವಾಸ ನಂಬಿಕೆಯ ಮೇಲೆ ಹಣವನ್ನು ಇಟ್ಟಿರುತ್ತಾರೋ ಅದನ್ನು ಉಳಿಸಿಕೊಳ್ಳುವುದು ಸಹಕಾರಿ ಸಂಸ್ಥೆಗಳ ಕಾರ್ಯವಾಗಿದೆ ಎಂದರು.ಎಲ್ಲರ ವಿಶ್ವಾಸದಿಂದ ಸಹಕಾರಿ ಸಂಸ್ಥೆ ಮುನ್ನಡೆಯಬೇಕು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ ಸಂಸ್ಥೆಯಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಸಂಸ್ಥೆಯಲ್ಲಿ ಯಾವುದೇ ರಾಜಕೀಯವನ್ನು ಮಾಡದೇ ಪ್ರಾಮಾಣಿಕತೆಯಿಂದ ಎಲ್ಲರು ಸಮಾನರು ಎನ್ನುವ ರೀತಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು.ಒಂದು ವೇಳೆ ಸಂಸ್ಥೆಯಲ್ಲಿ ಕಾನೂನು ಉಲ್ಲಂಘನೆಯಾದರೆ ಸಹಕಾರ ಮತ್ತು ಸರ್ಕಾರಗಳು ಸಹಯೋಗದಲ್ಲಿ ಕಾನೂನು ರಕ್ಷಣೆ ಕಾರ್ಯ ಮಾಡಲಾಗುವುದು. ಸರ್ಕಾರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು.
ಸಾಮಾನ್ಯ ರೈತರು ಮೂರು ತಿಂಗಳು ಸಾಲ ಮರುಪಾವತಿ ಮಾಡದಿದ್ದರೆ, ಅವರ ಮನೆ ಮುಂದೆ ಡಂಗುರಾ ಬಾರಿಸುತ್ತಿರಾ, ಅದೇ ಕಾರ್ಖಾನೆಗಳು ಸಾಲ ಮರುಪಾವತಿ ವರ್ಷಗಟ್ಟಲೆ ಮಾಡದಿದ್ದರು ಯಾಕೆ ಕಾರ್ಖಾನೆ ಮುಂದೆ ಡಂಗಾರು ಹಾಕುವುದಿಲ್ಲ ಎಂದು ಪ್ರಶ್ನಿಸಿದ ಸಚಿವ ಸೋಮಶೇಖರ್ ಅವರು, ಇದು ಬದಲಾಗಬೇಕು ಯಾರೇ ಆದರು ಕಾನೂನು ಒಂದೇ ರೀತಿ ಪಾಲನೆ ಮಾಡಬೇಕು ಎಂದು ಹೇಳಿದರು.
ನ್ಯಾಯಾಲಯ ಸಂಭಾಂಗಣ ಉದ್ಘಾಟಿಸಿ ಮಾತನಾಡಿದ ಕೆ.ಎಲ್.ಇ ಸಂಸ್ಥೆಯ ಕಾರ್ಯಾದ್ಯಕ್ಷರು ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಪ್ರಭಾಕರ ಕೋರೆ ಅವರು, ಇಡೀ ಕರ್ನಾಟಕದಲ್ಲಿ ಸಹಕಾರಿ ಚಳುವಳಿ ಉಳಿದಿದ್ದು, ಬೆಳಗಾವಿಯಲ್ಲಿ ಮಾತ್ರ. ರಾಜ್ಯದ ಎಲ್ಲ ಜಿಲ್ಲೆಗಳಿಗಿಂತ ಬೆಳಗಾವಿಯಲ್ಲಿ ಸೌಹಾರ್ದ ಸಂಯುಕ್ತ ಸಹಕಾರಿ ಸಂಘಗಳು ಜಾಸ್ತಿ ಇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ಮಾತನಾಡಿ, ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳ ಸಮಸ್ಯೆಗಳಿಗೆ ಪರಿಹಾರ ನೀಡಲು ಸೌಹಾರ್ದ ಸಹಕಾರಿ ನಿಗಮವನ್ನು ಸ್ಥಾಪನೆ ಮಾಡಿದ್ದು ಹೆಮ್ಮೆಯ ಸಂಗತಿ. ಆದರೆ ಸಹಕಾರ ಸಂಸ್ಥೆಗಳು ದಿವಾಳಿ ಆಗಿ ಜನರು ಬೀದಿಪಾಲಾಗಿದ್ದಾರೆ ಅವರು ಆದಷ್ಟು ಬೇಗನೆ ಪರಿಹಾರ ನೀಡುವ ಕಾರ್ಯ ಆಗಬೇಕು ಎಂದು ತಿಳಿಸಿದರು.
ಎಲ್ಲ ಸಹಕಾರಿ ಚಳುವಳಿಗಳಿಗೆ ನಾಂದಿ ಹಾಡಿದ್ದು ನಮ್ಮ ಬೆಳಗಾವಿ ಜಿಲ್ಲೆ. ಈ ಪ್ರಾಂತೀಯ ಕಛೇರಿಯಲ್ಲಿ ತರಬೇತಿ, ಸ್ವಂತ ನ್ಯಾಯಾಲಯ, ಹೊಂದಿದ್ದು ಎಲ್ಲರಿಗೂ ಉತ್ತಮ ರೀತಿಯ ನ್ಯಾಯ ಒದಗಿಸಬೇಕು. ನಾವು ಸಂಸ್ಥೆ ಕಟ್ಟಿ ಮಕ್ಕಳಿಗೆ ಹೊರೆಮಾಡಿ ಹೋಗದೆ ಜನ ಸೇವೆ ಎಂದು ಸಾರ್ವಜನಿಕರ ಹಣ ರಕ್ಷಕನಾಗಿ ಕಾರ್ಯನಿರ್ವಹಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು ಸಿಬ್ಬಂದಿ ಮತ್ತು ಅಧಿಕಾರಿಗಳಿಗ ಕಿವಿಮಾತು ಹೇಳಿದರು.
ಗುಲ್ಬರ್ಗಾ ಪ್ರಾಂತೀಯ ಕಛೇರಿ ವರ್ಚುವಲ್ ಉದ್ಘಾಟನೆ :
ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಗುಲ್ಬರ್ಗಾ ಪ್ರಾಂತೀಯ ನೂತನ ಕಟ್ಟಡವನ್ನು ವರ್ಚುವಲ್ ಉದ್ಘಾಟನೆಯನ್ನು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ ಅವರು ನೆರವೇರಿಸಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ದ ಅಧ್ಯಕ್ಷರಾದ ಬಿ.ಹೆಚ್.ಕೃಷ್ಣಾರೆಡ್ಡಿ, ಪ್ರಾಂತೀಯ ವ್ಯವಸ್ಥಾಪಕರಾದ ಬಸವರಾಜ ಹೊಂಗಲ್, ನಿರ್ದೇಶಕರಾದ ಗುರುನಾಥ್ ಜಾಂತಿಕರ, ವಿಶ್ವನಾಥ ಚ. ಹಿರೇಮಠ, ವಾಯ್.ಟಿ.ಪಾಟೀಲ. ಹಾಗೂ ಬೆಳಗಾವಿ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಉಪಾಧ್ಯಕ್ಷರಾದ ಜಗದೀಶ ಕವಟಗಿಮಠ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ದ ವ್ಯವಸ್ಥಾಪಕ ನಿರ್ದೇಶಕರಾದ ಶರಣಗೌಡ ಜಿ. ಪಾಟೀಲ ವಂದಿಸಿದರು. ಸರ್ವಮಂಗಳಾ ಅರಳಿಮಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು.


Gadi Kannadiga

Leave a Reply