ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳ AC ಕಛೇರಿಯನ್ನು ಉಪ ವಿಭಾಗ ಭಾಗವಾಗಿ ಗಂಗಾವತಿಯಲ್ಲಿ ಆರಂಭಿಸಲು ಸರ್ಕಾರ ಅನುಮತಿಸಿದ್ದು ಶೀಘ್ರವೇ ಗಂಗಾವತಿಯಲ್ಲಿ ಕಛೇರಿ ಅಸ್ತಿತ್ವಕ್ಕೆ ಬರಲಿದೆ ಗಂಗಾವತಿ, ಕನಕಗಿರಿ, ಕಾರಟಗಿ ,ತಾಲ್ಲೂಕಿನ ರೈತರಿಗೆ ಆಡಳಿತಾತ್ಮಕ ವಾಗಿ ಅನುಕೂಲವಾಗಲಿದೆ. ಕರ್ನಾಟಕ ರಾಜ್ಯ ರೈತ ಸಂಘ ಸರ್ಕಾರ ದ ಈ ನಿರ್ಣಯವನ್ನು
ಸ್ವಾಗತಿಸುತ್ತದೆ .
ಆದರೆ ,ಗಂಗಾವತಿ ಉಪ ವಿಭಾಗ ಭಾಗದ ಕಛೇರಿ ವ್ಯಾಪ್ತಿಗೆ ಕುಷ್ಟಗಿ ತಾಲ್ಲೂಕನ್ನು ಸೇರ್ಪಡೆ ಮಾಡಿರುವುದು ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಗಂಗಾವತಿಯಲ್ಲಿರುವ Dysp & keb ಗೆ ವಿಭಾಗ ಕಛೇರಿಗಳಿಗೆ ಕುಷ್ಟಗಿ ತಾಲ್ಲೂಕು ಸೇರ್ಪಡೆ ಗೊಂಡು ತೀವ್ರ ಸಂಕಷ್ಟ ಅನುಭವಿಸುತ್ತಿದ್ದೇವೆ. ಕುಷ್ಟಗಿ ತಾಲ್ಲೂಕನ್ನು ಮೊದಲಿನಂತೆ ಕೊಪ್ಪಳದ ಉಪ ವಿಭಾಗ ಕಛೇರಿಯ ವ್ಯಾಪ್ತಿಯಲ್ಲಿ ಮುಂದುವರೆಸುವಂತೆ ಆಗ್ರಹಿಸಿ ದಿನಾಂಕ 24/09/2024 ರ ಬುಧವಾರ ದಂದು ಬೆಳಿಗ್ಗೆ 10:30 ಗಂಟೆಗೆ ಸಭೆ ಸೇರಿ ತಹಶಿಲ್ದಾರರ ಮುಖಾಂತರ ಸಾಂಕೇತಿಕವಾಗಿ ಸರ್ಕಾರ ಕ್ಕೆ ಹಕ್ಕೊತ್ತಾಯ ಪತ್ರ ಕಳುಹಿಸಲು ತಾಲ್ಲೂಕಿನ ರೈತರು ನಾಗರೀಕರು ಹೋರಾಟಗಾರರು ವಿಧ್ಯಾರ್ಥಿಗಳು ಮಹಿಳೆಯರು ಪ್ರಗತಿಪರರು ಪಾಲ್ಗೊಳ್ಳಲು
ಮೊಹ್ಮದ್ ನಜೀರ್ ಸಾಬ ಮೂಲಿಮನಿ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಕೋರಿದ್ದಾರೆ.