This is the title of the web page
This is the title of the web page

Please assign a menu to the primary menu location under menu

State

Shocking news: ಕೋವಿಡ್ ಹೆಚ್ಚಳಕ್ಕೆ ಕರ್ನಾಟಕ ತತ್ತರ


ಬೆಂಗಳೂರು: ರಾಜ್ಯದಲ್ಲಿ ಮತ್ತೆ ಇಂದು ಕೊರೋನಾ ಮಹಾಸ್ಪೋಟವೇ ಉಂಟಾಗಿದೆ. ಬೆಂಗಳೂರಿನಲ್ಲಿ 15,617 ಸೇರಿದಂತೆ ರಾಜ್ಯಾಧ್ಯಂತ 21,390 ಜನರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 1,95,047 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.ಇವರಲ್ಲಿ ಬೆಂಗಳೂರಿನಲ್ಲಿ 15,617 ಸೇರಿದಂತೆ ರಾಜ್ಯದಲ್ಲಿ 21,390 ಜನರಿಗೆ ಕೋವಿಡ್ ದೃಢಪಟ್ಟಿರೋದಾಗಿ ತಿಳಿಸಿದೆ.

ಇಂದು ರಾಜ್ಯದಲ್ಲಿ 21,390 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ ಶೇ.10.96ಕ್ಕೆ ಏರಿಕೆಯಾಗಿದೆ. ಸಕ್ರೀಯ ಪ್ರಕರಣಗಳ ಸಂಖ್ಯೆ ಬೆಂಗಳೂರಿನಲ್ಲಿ 73 ಸಾವಿರ ಸೇರಿದಂತೆ 93,009ಕ್ಕೆ ಏರಿಕೆಯಾಗಿವೆ ಎಂದು ತಿಳಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 1,541 ಜನರು ಗುಣಮುಖರಾಗಿದ್ದಾರೆ. ಸೋಂಕಿನಿಂದಾಗಿ ಬೆಂಗಳೂರಿನಲ್ಲಿ 6 ಜನರು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.


Gadi Kannadiga

Leave a Reply