ಕೊಪ್ಪಳ ಏಪ್ರಿಲ್ 23 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನಸಭಾ ಚುನಾವಣೆ-2023ರ ನಿಮಿತ್ತ ಜಿಲ್ಲೆಯ ಕಾರಟಗಿಯ ಚೆನ್ನಳ್ಳಿ ಕ್ರಾಸ್ ಚೆಕ್ ಪೋಸ್ಟ್ಗೆ ಏಪ್ರಿಲ್ 23ರಂದು ಕಾರಟಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಪ್ಪ ಎನ್ ಅವರು ಭೇಟಿ ನೀಡಿ, ಪರಿಶೀಲಿಸಿದರು.
ಇಓ ಅವರು ಮಾತನಾಡಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ಗೆ ನಿಯೋಜಿಸಿದ ಅಧಿಕಾರಿಗಳು ಬರುವ ಎಲ್ಲಾ ವಾಹನಗಳನ್ನು ಕಟ್ಟುನಿಟ್ಟಾಗಿ ಚೆಕ್ ಮಾಡಿ ಬಿಡುವಂತೆ ತಿಳಿಸಿದರು. ಬಳಿಕ ವಾಹನಗಳನ್ನು ಖುದ್ದಾಗಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚೆಕ್ ಪೋಸ್ಟ್ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.