This is the title of the web page
This is the title of the web page

Please assign a menu to the primary menu location under menu

State

ಸಮುದಾಯ ಕಾಮಗಾರಿ ವೀಕ್ಷಿಸಿದ ಕೇರಳ ತಂಡ


ಕೊಪ್ಪಳ ಜನವರಿ ೧೮ : ತಾಲೂಕಿನ ಹಾಲವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳವಿನಾಳ ಹಾಗೂ ಮುನಿರಾಬಾದ್ ಡ್ಯಾಂ ಗ್ರಾ.ಪಂ.ಗೆ ಕೇರಳ ರಾಜ್ಯದ ಕ್ರೀಸ್ಪ್ ತಂಡದ ಅಧಿಕಾರಿಗಳು ಭೇಟಿ ನೀಡಿ ನರೇಗಾ ಯೋಜನೆಯಡಿ ಅನುಷ್ಟಾನಗೊಂಡ ಕಾಮಗಾರಿಗಳನ್ನು ಜನವರಿ ೧೮ ರಂದು ವೀಕ್ಷಣೆ ಮಾಡಿದರು.
ಹಾಲವರ್ತಿ ಗ್ರಾ.ಪಂ ವ್ಯಾಪ್ತಿಯ ಬೆಳವಿನಾಳ ಗ್ರಾಮದಲ್ಲಿ ಸಮುದಾಯ ಇಂಗುಗುಂಡಿ ಹಾಗೂ ಪ್ರತಿ ಮನೆಗಳಿಗೆ ಅನುಷ್ಟಾನಗೊಂಡ ವೈಯಕ್ತಿಕ ಇಂಗುಗುಂಡಿ ಕಾಮಗಾರಿಯನ್ನು ವೀಕ್ಷಿಸಿದ ಕೇರಳ ರಾಜ್ಯದ ತಂಡದ ಅಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೇ ವೇಳೆ ಗ್ರಾಮದ ಸ್ವಸಹಾಯ ಸಂಘದ ಮಹಿಳೆಯರೊಂದಿಗೆ ಸ್ವಸಹಾಯ ಸಂಘಟನೆ ರಚನೆ ಹಾಗೂ ಚಟುವಟಿಕೆಗಳ ಕುರಿತು ಚರ್ಚಿಸಿದರು.
ಬಳಿಕ ಕ್ರೀಸ್ಟ್ ತಂಡವು ಮುನಿರಾಬಾದ್ ಡ್ಯಾಂ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾ.ಪಂ ಸದಸ್ಯರೊಂದಿಗೆ ಗ್ರಾ.ಪಂ ಆಡಳಿತ ನಿರ್ವಹಣೆಯ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕೇರಳ ರಾಜ್ಯದ ತಂಡದ ಪ್ರಮುಖರಾದ ಜಗಜೀವನ್, ಕೇಶವ್ ನಾಯರ್, ಸಜಿತ್ ಸುಕುಮಾರನ್, ಡಾ.ಲಲಿತಾ ಪುಲವರ್ತಿ ಹಾಗೂ ಕೊಪ್ಪಳ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ, ಯಲಬುರ್ಗಾ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಪಾಟೀಲ್ ಬಿರಾದಾರ್, ಸಹಾಯಕ ನಿರ್ದೇಶಕರಾದ ಸೌಮ್ಯ ಕೆ, ಗ್ರಾ.ಪಂ ಪಿಡಿಓ ರವರಾದ ಮಹೇಶ ಸಜ್ಜನ್, ವಿರೇಶ್,ತಾಂತ್ರಿಕ ಸಂಯೋಜಕರ ವಿಶ್ವನಾಥ ಜಿ, ಐಇಸಿ ಸಂಯೋಜಕ ಶಿವಕುಮಾರ್ ಕೆ, ತಾಂತ್ರಿಕ ಸಹಾಯಕ ಸುರೇಶ ದೇಸಾಯಿ ಸೇರಿದಂತೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು ಇದ್ದರು.


Gadi Kannadiga

Leave a Reply