ಗಡಿ ಕನ್ನಡಿಗ
ಕಳೆದ ಹದಿನೈದು ದಿನಗಳಿಂದ ತಾಲೂಕಿನಾದ್ಯಂತೆ ಸುರಿಯುತ್ತಿರುವ ಮಳೆಗೆ ತಾಲೂಕಿನ ಪ್ರಮುಖ ರಸ್ತೆಗಳು ಹದಗೆಟ್ಡು ಸಂಚರಿಸಲು ಅಯೋಗ್ಯವಾಗಿ ಮಾರ್ಪಟ್ಡಿವೆ.
ಬಾರಿ ಮಳೆಯಿಂದಾಗಿ ಖಾನಾಪೂರ ಪಟ್ಟಣ ಸಹಿತ ಇತರೆ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾದ ನಂದಗಡ, ಜಾಂಬೋಟಿ, ಚೋರ್ಲಾ, ಪಾರಿಶ್ವಾಡ, ಇಟಗಿ, ಇತ್ಯಾದಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ರಸ್ತೆ ಮಧ್ಯದಲ್ಲಿ ದೊಡ್ಡ ದೊಡ್ಡ ತಗ್ಗುಗಳುಂಟಾಗಿ ನೀರು ತುಂಬಿ ದಿನ ನಿತ್ಯ ಸಂಚರಿಸುವ ಬಸ್ಸು, ಲಾರಿ, ಕಾರು, ದ್ವಿ-ಚಕ್ರ ವಾಹನಗಳಲ್ಲಿ ಪ್ರಯಾಣಿಸುವವರ ಗೋಳು ಹೇಳತೀರದಾಗಿದೆ.
ಪಟ್ಟಣದ ರುಮೇವಾಡಿ ಕ್ರಾಸ್ ನಿಂದ ಗೋವಾ ಸಂಪರ್ಕ ರಸ್ತೆಯಲ್ಲಂತೂ ಪ್ರತಿನಿತ್ಯ ಒಂದೆರಡು ಬೈಕ್ ಸವಾರರು ಬಿದ್ದು ತಮಗೆ ತಾವೇ ಸಾವರಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಕಾರಣ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತಕಡೆ ಗಮನ ಹರಿಸಿ ಕೂಡಲೇ ದುರಸ್ತಿಗೆ ಕ್ರಮ ಜರುಗಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡ ಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.