This is the title of the web page
This is the title of the web page

Please assign a menu to the primary menu location under menu

Local News

ಖಾನಾಪೂರ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನ


ಬೆಳಗಾವಿ:- ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ, ಖಾನಾಪೂರÀ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನವು ಶುಕ್ರವಾರ ದಿ:೩೦/೧೨/೨೦೨೨ ರಂದು ಸ್ಥಳ:ಶನಯಾ ಪಾಮ್ಸ್ ಜಾಂಬೋಟಿ ರಸ್ತೆ, ಖಾನಾಪೂರದಲ್ಲಿ ಜರುಗಲಿದೆ.
ಮುಂಜಾನೆ:೮:೦೦ ಘಂಟೆಗೆ, ಖಾನಾಪೂರ ಪೋಲಿಸ್ ತರಬೇತಿ ಶಾಲೆಯ ಪ್ರಾಂಶುಪಾಲರು, ಶ್ರೀ ಅಮಸಿದ್ಧ ಗೊಂದಲೆ ಅವರು ರಾಷ್ಟ್ರ ಧ್ವಜಾರೋಹಣವನ್ನು ನೆರವೇರಿಸುವರು. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಪರಿಷತ್ತಿನ ಧ್ವಜಾರೋಹಣವನ್ನು ನೆರವೇರಿಸುವರು. ಖಾನಾಪೂರ ತಾಲೂಕಾಧ್ಯಕ್ಷರಾದ ಶ್ರೀ.ಬಸವಪ್ರಭು ಹಿರೇಮಠ ಅವರು ನಾಡ ಧ್ವಜಾರೋಹಣವನ್ನು ನೆರವೇರಿಸುವರು. ಸಮ್ಮೇಳನವು ಚಿಕ್ಕಮುನವಳ್ಳಿಯ ಆರೂಢಮಠದ ಪ.ಪೂ.ಶ್ರೀ.ಶಿವಪುತ್ರ ಮಹಾಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಬೆಳಗಾವಿಯ ಖ್ಯಾತ ಸಾಹಿತಿಗಳು ಡಾ.ಗುರುದೇವಿ ಹುಲೆಪ್ಪನವರಮಠ ಅವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಕಕ್ಕೇರಿಯ ನಿವೃತ್ತ ಶಿಕ್ಷಕರು, ಸಾಹಿತಿಗಳಾದ ಶ್ರೀ.ಈಶ್ವರ ಗಂ. ಸಂಪಗಾವಿ ಅವರು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಅವರು ಆಶಯ ನುಡಿಗಳನ್ನಾಡಲಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಗೋವಿಂದ ಕಾರಜೋಳ, ಸಂಸದರು ಕೆನರಾ ಕ್ಷೇತ್ರ ಶ್ರೀ ಅನಂತಕುಮಾರ ಹೆಗಡೆ, ಖಾನಾಪೂರ ಶಾಸಕರು ಡಾ.ಅಂಜಲಿತಾಯಿ ನಿಂಬಾಳಕರ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರಕಾಶ ಹುಕ್ಕೇರಿ, ಶ್ರೀ ಹಣಮಂತ ನಿರಾಣಿ, ಶ್ರೀ ನಾಗರಾಜ ಯಾದವ, ಶ್ರೀ ಚನ್ನರಾಜ ಹಟ್ಟಿಹೊಳಿ, ಶ್ರೀ ಲಖನ್ ಜಾರಕಿಹೊಳಿ, ಶ್ರೀ ಸಾಬಣ್ಣಾ ತಳವಾರ, ಕೆ.ಎಲ್.ಇ.ಸೊಸೈಟಿ ನಿರ್ದೇಶಕರು ಶ್ರೀ ಮಹಾಂತೇಶ ಕವಟಗಿಮಠ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ಆಗಮಿಸಿಲಿದ್ದಾರೆ. ಕ.ಸಾ.ಪ.ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಸಾಹಿತಿಗಳು, ಕಲಾವಿದರು, ಬೆಳಗಾವಿ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು ಮತ್ತು ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಅಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆತರಬೇಕೆಂದು, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಹಾಗೂ ಖಾನಾಪೂರÀ ತಾಲೂಕಾಧ್ಯಕ್ಷರಾದ ಶ್ರೀ ಬಸವಪ್ರಭು ಹಿರೇಮಠ ಅವರು ವಿನಂತಿಸಿಕೊಂಡಿದ್ದಾರೆ.


Leave a Reply