ರಾಯಚೂರು:- ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಆಚಾರ್ ಹಾಲಪ್ಪ ಬಸಪ್ಪ ಅವರು ನಿನ್ನೆ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆಡಿಪಿ ಸಭೆಯಲ್ಲಿ
ಮಾನ್ವಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ನೇಮಕಾತಿ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಪತ್ರಕರ್ತರ ಮೇಲೆ ಅಶ್ಲೀಲ ಪದ ಬಳಸಿ ಎಗರಾಡಿದ ಶಾಸಕ
ಇಂದು ಪತ್ರಕರ್ತರ ಮುಂದೆ ಕೆಡಿಪಿ ಸಭೆಯಲ್ಲಿನ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ರಾಯಚೂರಿನ ಮಾನ್ವಿ ಶಾಸಕ ವೆಂಕಟಪ್ಪ ನಾಯಕ ದುರ್ವರ್ತನೆ ಎಲ್ಲೆಡೆ ಸಾರ್ವಜನಿಕರಿಂದ ಅಕ್ರೋಶ ವ್ಯಕ್ತವಾಗಿತ್ತು.
ಸಭೆಯಲ್ಲಿ ಕಾಮನ್ ಸೆನ್ಸ್ ಮರೆತ ಜೆಡಿಎಸ್ ಶಾಸಕರ ಕುರಿತು ಖಾಸಗಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ಕಾರಣ ಇಂದು ಪತ್ರಕರ್ತರ ಮುಂದೆ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ ನಮ್ಮ ತಂದೆ ರಾಜ ಅಂಬಣ್ಣನಾಯಕರ ಕಾಲದಿಂದಲೂ ಪತ್ರಕರ್ತರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಭಿವೃದ್ಧಿಗೆ ತೊಡಕಾಗಬಾರದು ಎನ್ನುವ ದೃಷ್ಟಿಯಿಂದ ಗೊಂದಲ ಉಂಟಾಗಿ ನನ್ನ ಮಾತಿನಿಂದ ಏನಾದರು ನೋವು ಉಂಟಾಗಿದ್ದರೆ ಅದಕ್ಕಾಗಿ ವಿಷಾದವಿರಲಿ ಎಂದು ಮನವಿ ಮಾಡಿಕೊಂಡರು.
ವಿಶ್ವನಾಥ ಸಾಹುಕಾರ
ರಾಯಚೂರು