This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ಉತ್ಸವಕ್ಕೆ ಗಾಳಿಪಟ ಮೆರಗು ಮಕ್ಕಳ ಬಾಲ್ಯದ ಜನಪ್ರಿಯ ಆಟ ಗಾಳಿಪಟ: ಶಾಸಕ ಬಿ.ನಾಗೇಂದ್ರ


ಬಳ್ಳಾರಿ,ಜ.೧೮: ಮಕ್ಕಳ ಬಾಲ್ಯದ ಆಟಗಳಲ್ಲಿ ಒಂದಾದ ಗಾಳಿಪಟ ಆಟವು ಮಕ್ಕಳಲ್ಲಿನ ಉಲ್ಲಾಸ ಮತ್ತು ಆಸಕ್ತಿಯನ್ನು ಬಿಂಬಿಸುವ ಆಟವಾಗಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಬಳ್ಳಾರಿ ಉತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವ ನಮಗೆಲ್ಲಾ ಹಬ್ಬದ ವಾತಾವರಣವಾಗಿದೆ. ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯು ಮಕ್ಕಳ ಮನರಂಜನೆಗೆ ಪೂರಕವಾಗಿದ್ದು, ಗಾಳಿಪಟ ಹಾರಿಸುವಾಗ ನಾವೇ ಆಕಾಶದಲ್ಲಿ ಹಾರಾಡುತ್ತಿದ್ದೆವೆ ಎನ್ನುವ ರೀತಿ ಬಾಸವಾಗುತ್ತದೆ. ನಮ್ಮೆಲ್ಲರ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಈ ಸ್ಪರ್ಧೆ ಆಯೋಜಿಸಿದ ಜಿಲ್ಲಾಡಳಿತಕ್ಕೆ ಈ ಸಂದರ್ಭದಲ್ಲಿ ಅಭಿನಂದಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, ಬಳ್ಳಾರಿ ಉತ್ಸವದ ಅಂಗವಾಗಿ ಆಯೋಜಿಸಲಾದ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ವಿಕೆ ರೋ ಕೈಟ್ಸ್, ದೊಡ್ಡ ಬಳ್ಳಾಪುರ ಕೈಟ್ಸ್, ಬೆಂಗಳೂರಿನ ನೋಪಾಸನ ಕೈಟ್ಸ್, ಹೈದರಾಬಾದ್‌ನ ಶ್ರೀನಿವಾಸ್ ಕೈಟ್ಸ್ ಅವರಿಂದ ಒಟ್ಟು ೧೪೦ ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸಲು ಕರೆಸಲಾಗಿದೆ. ಇದರಿಂದ ಉತ್ಸವಕ್ಕೆ ಇನ್ನಷ್ಟು ಮೆರಗನ್ನು ತರಲಿದ್ದು, ಈ ಪ್ರದರ್ಶನವು ದಿನಪೂರ್ತಿ ನಡೆಯಲಿದೆ ಎಂದು ತಿಳಿಸಿದರು.
ಶಾಲಾ ಕಾಲೇಜು ಮಕ್ಕಳಿಗೆ ಗಾಳಿಪಟಗಳನ್ನು ವಿತರಿಸಲಾಗುವುದು. ಮಕ್ಕಳು ಕೂಡ ಹಾರಿಸುವ ಮೂಲಕ ಸಂಭ್ರಮಿಸಬಹುದು ಎಂದರು.ಶಾಸಕ ನಾಗೇಂದ್ರ, ಮೇಯರ್ ಎಂ.ರಾಜೇಶ್ವರಿ, ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಗಾಳಿಪಟ ಹಾರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಉಪ ಮೇಯರ್ ಮಾಲನ್.ಬಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹರಿಸಿಂಗ್ ರಾಥೋಡ್, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ ಶಕೀಬ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.ನಂತರ ಶಾಲಾ ಕಾಲೇಜು ಮಕ್ಕಳೆಲ್ಲರೂ ಸೇರಿ ಗಾಳಿಪಟ ಹಾರಿಸುವ ಮೂಲಕ ಸಂಭ್ರಮಿಸಿದರು.
ಗಾಳಿಪಟ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರದ ಗಾಳಿಪಟ, ಸ್ಪೆöÊಡರ್‌ಮ್ಯಾನ್ ಗಾಳಿಪಟ, ವಿಶ್ವೇಶ್ವರಯ್ಯ ಭಾವಚಿತ್ರದ ಗಾಳಿಪಟ, ಪ್ಯಾರಾಚೂಟ್ ಗಾಳಿಪಟ, ರಾಕೆಟ್ ಗಾಳಿಪಟ ಸೇರಿದಂತೆ ೧೪೦ಕ್ಕೂ ಹೆಚ್ಚು ಗಾಳಿಪಟ ಹಾರಿಸಿದ್ದು ವಿಶೇಷವಾಗಿತ್ತು.


Leave a Reply