This is the title of the web page
This is the title of the web page

Please assign a menu to the primary menu location under menu

Local News

ಕಿತ್ತೂರು ಸಂಸ್ಥಾನದ ದಾಖಲೆಗಳ (ಸಂಪುಟ ೦೨) ಬಿಡುಗಡೆ ಸಮಾರಂಭ


ಬೆಳಗಾವಿ, ಫೆ.೦೨ : ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಕಿತ್ತೂರು ಸಂಸ್ಥಾನ ದಾಖಲೆಗಳ ಶೋಧ-ಅನುವಾದ-ಪ್ರಕಟಣ ಯೋಜನೆ ಸಹಯೋಗದಲ್ಲಿ ಕಿತ್ತೂರು ಸಂಸ್ಥಾನದ ದಾಖಲೆಗಳ ಸಂಪುಟ ಬಿಡುಗಡೆ ಸಮಾರಂಭ ಶನಿವಾರ(ಫೆ,೦೪) ಸಂಜೆ ೫.೩೦ಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಆಯುಕ್ತರಾದ ನಾಡೋಜ ಡಾ. ಮನು ಬಳಿಗಾರ ಅವರು ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಸಾಹಿತಿಗಳಾದ ಡಾ.ಬಾಳಣ್ಣ ಶೀಗೀಹಳ್ಳಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಸಲಹಾ ಸಮಿತಿಯ ಸದಸ್ಯರಾದ ಡಾ.ಸ್ಮಿತಾ ಸುರೇಬಾನಕರ ಅವರು ಯೋಜನೆ ಮತ್ತು ಸಂಪುಟಗಳ ಕುರಿತು ಮಾಹಿತಿ ನಿಡಲಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ಕಿತ್ತೂರು ಸಂಸ್ಥಾನ ದಾಖಲೆಗಳ ಶೋಧ-ಅನುವಾದ-ಪ್ರಕಟಣ-ಯೋಜನೆಯ ನರ್ದೇಶಕರು ಮತ್ತು ಸಂಪಾದಕರಾದ ಡಾ. ಎ. ಬಿ. ವಗ್ಗರ ಅವರು ಗೌರವ ಉಪಸ್ಥಿತಿಗಳಾಗಿ ಆಗಮಿಸಲಿದ್ದಾರೆ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಿರೇಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಯಾದ ವಿದ್ಯಾವತಿ ಭಜಂತ್ರಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಂಯೋಜಕರಾದ ಡಾ. ಎಂ. ವಾಯ್. ಸಾವಂತ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರದಾನ ಕಾರ್ಯದರ್ಶಿಯಾದ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply