ಬೆಳಗಾವಿ, ಜು.೦೬ : ಚನ್ನಮ್ಮ ಕಿತ್ತೂರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ ಬಳಕೆ, ಮಾರಟ, ಸಂಗ್ರಹಣೆ, ವಿತರಣೆ ಹಾಗೂ ಸಾಗಾಣಿಕೆಯನ್ನು ನಿಷೇಧಿಸಲು ಜುಲೈ. ೦೧ ೨೦೨೩ ರಿಂದ ಜು.೨೮ ೨೦೨೩ ರವರೆಗೆ ಪ್ಲಾಸ್ಟಿಕ ಮುಕ್ತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಪ್ಲಾಸ್ಟಿಕ ಬಳಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಅಭಿಯಾನದ ಯಶಸ್ವಿಗೆ ಸಹಕರಿಸುವ ಅಂಗಡಿಕಾರರಿಗೆ “ಹಸಿರು ಸಂಸ್ಥೆ” ಎಂದು ಘೋಷಿಸಿ ಪಟ್ಟಣ ಪಂಚಾಯತಿಯಿಂದ ಪ್ರಮಾಣ ಪತ್ರ ನೀಡಲಾಗುವುದು.
ಸದರಿ ಸಾರ್ವಜನಿಕರು ಹಾಗೂ ಎಲ್ಲಾ ಅಂಗಡಿ ಮಾಲಕರು ಪ್ಲಾಸ್ಟಿಕ ಮುಕ್ತ ಅಭಿಯಾನದಲ್ಲಿ ಸಹಕರಿಸಬೇಕು ಎಂದು ಚನ್ನಮ್ಮ ಕಿತ್ತೂರ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಕಿತ್ತೂರ ಪಟ್ಟಣ ಪಂಚಾಯತ್: ಪ್ಲಾಸ್ಟಿಕ ಮುಕ್ತ ಅಭಿಯಾನ
ಕಿತ್ತೂರ ಪಟ್ಟಣ ಪಂಚಾಯತ್: ಪ್ಲಾಸ್ಟಿಕ ಮುಕ್ತ ಅಭಿಯಾನ
Suresh06/07/2023
posted on