This is the title of the web page
This is the title of the web page

Please assign a menu to the primary menu location under menu

Local News

ಕಾರ್ಮಿಕ ಬಂಧುಗಳ ಆರೋಗ್ಯ ಕಾಳಜಿಗಾಗಿ ಕೆ ಎಲ್ ಇ ವೆಲ್‌ನೆಸ್ ಸೆಂಟರ:- ಡಾ. ಪ್ರಭಾಕರ ಕೊರೆ


ಬೆಳಗಾವಿ : ದುಡಿಮೆಯೇ ದುಡ್ಡಿನ ದೇವರು ಎಂದು ಸದಾ ಕಾಲ ಕೈಗಾರಿಕಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕ ಬಂಧುಗಳ ಆರೋಗ್ಯ ಕಾಳಜಿಯ ದೃಷ್ಟಿಯನ್ನಿಟ್ಟುಕೊಂಡು ಕೆ ಎಲ್ ಇ ವೆಲ್‌ನೆಸ್ ಸೆಂಟರನ್ನು ಪ್ರಾರಂಭಿಸಲಾಗಿದೆ ಎಂದು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡುತ್ತಿದ್ದರು ಅವರು ಬುಧವಾರ ದಿನಾಂಕ ೦೩ನೇ ಮೇ ೨೦೨೩ರಂದು ಬೆಳಗಾವಿ ನಗರದ ಕೆ ಎಲ್ ಇ ಎಮ್ ಎಸ್ ಶೇಷಗಿರಿ ಇಂಜಿನೀಯರಿಂಗ ಕಾಲೇಜಿನ ಆವರಣದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಪ್ರಾಯೋಜಕತ್ವದಲ್ಲಿ ನೂತನವಾಗಿ ಪ್ರಾರಂಭಿಸಲಾದ “ಕೆ ಎಲ್ ಇ ವೆಲ್‌ನೆಸ್ ಸೆಂಟರ್” ನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ೧೦೬ ವರ್ಷಗಳ ಇತಿಹಾಸ ಹೊಂದಿರುವ ಕೆ ಎಲ್ ಇ ಸಂಸ್ಥೆಯು ಪ್ರಾರಂಭದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಇಂದು ಜಗತ್ತಿನಾದ್ಯಂತ ೩೦೦ ಕ್ಕೂ ಅಧಿಕ ಸಂಸ್ಥೆಗಳನ್ನು ಹೊಂದಿದೆ. ಆರೋಗ್ಯ ಹಾಗೂ ಶಿಕ್ಷಣದಲ್ಲಿ ತನ್ನದೇ ಆದ ಮೌಲ್ಯಗಳನ್ನು ಹೊಂದಿರುವ ನಮ್ಮ ಸಂಸ್ಥೆಯು ಇಂದು ಕೈಗಾರಿಕಾ ಕಾರ್ಮಿಕರ ಒಳಿತಿಗಾಗಿ ಈ ಸೆಂಟರ್‌ನ್ನು ಪ್ರಾರಂಭಿಸಿದ್ದೇವೆ. ರಾಜ್ಯ, ಭಾಷೆ, ಧರ್ಮ, ಮತ ಭೇದಗಳಿಲ್ಲದೇ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶಗಳು ಮುಟ್ಟುವÀಂತೆ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಳಗಾಂ ಪೌಂಡ್ರಿ ಕ್ಲಸ್ಟರ್ ನ ಚೇರಮನ ಶ್ರೀ ರಾಮ್ ¨sಂಡಾರೆ ಅವರು ಮಾತನಾಡುತ್ತ “ ೫೦ ಸಾವಿರಕ್ಕಿಂತಲೂ ಅಧಿಕ ಕಾರ್ಮಿಕರು ಉದ್ಯಮಭಾಗ ಭಾಗಕ್ಕೆ ಇ ಎಸ್ ಐ ಆಸ್ಪತ್ರೆಯನ್ನು ಪ್ರಾರಂಭಿಸಬೇಕೆಂದು ಈ ಮೊದಲು ಹಲವಾರು ಬಾರಿ ಸರ್ಕಾರಕ್ಕೆ ವಿನಂತಿಸಿದ್ದರೂ ಸಹ ಸರ್ಕಾರವು ಸ್ಪಂದಿಸಿರಲಿಲ್ಲ. ಈ ನಿಟ್ಟಿನಲ್ಲಿ ನಾವು ಕೆ ಎಲ್ ಇ ಸಂಸ್ಥೆಯ ಗಮನಕ್ಕೆ ತಂದ ಕೇವಲ ಮೂರೆ ಮೂರು ತಿಂಗಳಲ್ಲಿ ಈ ಕೆ ಎಲ್ ಇ ವೆಲ್‌ನೆಸ್ ಸೆಂಟರ ನ್ನು ಪ್ರಾರಂಭಿಸಿರುವದು ಕೆ ಎಲ್ ಇ ಸಂಸ್ಥೆಯ ಕಾರ್ಯದಕ್ಷತೆಯನ್ನು ಸಾರುವ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಬದಲ್ಲಿ ಬೆಳಗಾಂ ಪೌಂಡ್ರಿ ಕ್ಲಸ್ಟರ್, ಬೆಳಗಾವಿ ಲಘು ಉದ್ಯೋಗ ಭಾರತಿ, ಸಣ್ಣ ಉದ್ದಿಮೆಗಳ ಅಸೋಶಿಯೇಷನ್, ಬೆಳಗಾವಿ ಚೇಂಬರ ಆಫ ಕಾಮರ್ಸ್ ಗಳ ಜೊತೆಗೆ ಕೆ ಎಲ್ ಇ ವೆಲ್‌ನೆಸ್ ಸೆಂಟರ ನ ಆರೋಗ್ಯ ಸೇವೆಗಳಿಗೆ ಸಂಬಂಧ ಪಟ್ಟಂತೆ ಪರಸ್ಪರ ಒಡಂಬಡಿಕೆಯನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ್ದ ಸಣ್ಣ ಉದ್ದಿಮೆಗಳ ಅಸೋಶಿಯೇಷನ್ ನ ಅಧ್ಯಕ್ಷರಾದ ಶ್ರೀ ಮಹಾದೇವ ಚೌಗಲೆ ಅವರು ಮಾತನಾಡುತ್ತ “ ಈ ಭಾಗದಲ್ಲಿ ಕಾರ್ಮಿಕರು ಕಾರ್ಯಪ್ರವರ್ತÀರಾಗಿರುವಾಗ ಸಣ್ಣ ಪುಟ್ಟ ಆಕಸ್ಮಿಕಗಳು ಸಂಭವಿಸಿದಾಗ ಆರೋಗ್ಯ ಸೇವೆUಳನ್ನು ¥ಡೆಯುವದು ತುಂಬ ದುಸ್ತರವಾಗಿತ್ತು, ಅದರಲ್ಲಿಯೂ ರಾತ್ರಿಯ ವೇಳೆಯಲಿ ್ಲ ಏನಾದರೂ ಇಂತಹ ಅವಘಡಗಳು ಸಂಭವಿಸಿದರೆ ಅಂಬುಲೆನ್ಸನ ಸೌಲಭ್ಯವೂ ಸಹ ಸಿಗುವದು ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಕೆ ಎಲ್ ಇ ಸಂಸ್ಥೆಯು ಈ ಸೆಂಟರ್‌ನ್ನು ಪ್ರಾರಂಭಿಸಿರುವದು ನಿಜಕ್ಕೂ ನಮ್ಮ ಕಾರ್ಮಿಕ ಬಂಧುಗಳ ಅದೃಷ್ಟವೇ ಸರಿ ಎಂದು ಸಂತಸ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಅಶೋಕ ಐರನ್ ವರ್ಕ್ಸ್ ನ ಮ್ಯಾನೇಜಿಂಗ ಡೈರೆಕ್ಟರ ಶ್ರೀ ಜಯಂತ ಹುಂಬರವಾಡಿ, ಬೆಳಗಾವಿ ಲಘು ಉದ್ಯೋಗ ಭಾರತಿಯ ಅಧ್ಯಕ್ಷರಾದ ಶ್ರೀ ದಯಾನಂದ ನೇತಾಲ್ಕರ ಹಾಗೂ ಬೆಳಗಾವಿ ಚೇಂಬರ ಆಫ ಕಾಮರ್ಸ್ ನ ಅಧ್ಯಕ್ಷ ಶ್ರೀ ಹೇಮೆಂದ್ರ ಪೋರವಾಲ ಅವರು ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಹಿರಿಯ ವೈದ್ಯರಾದ ಡಾ. ಸಿ ಎನ್ ತುಗಶೆಟ್ಟಿ ಅವರು ನಿರೂಪಿಸಿದರು. ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಅಥಿತಿಗಳನ್ನು ಸ್ವಾಗತಿಸುತ್ತಾ ಕೆ ಎಲ್ ಇ ವೆಲ್‌ನೆಸ್ ಸೆಂಟರ ನ ಕಾರ್ಯದ ರೂಪು ರೇಷೆಗಳನ್ನು ತಿಳಿಸಿದರು. ಕೆ ಎಲ್ ಇ ವೆಲನೆಸ್ ಸೆಂmರ ನಲ್ಲಿರಬಹುದಾದ ಸೇವೆಗಳು, ವಿಶೇಷತೆಗನ್ನು ತಿಳಿಸುತ್ತ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಎಲ್ಲರಿಗೂ ವಂದಿಸಿರು.
ಕಾರ್ಯಕ್ರಮದಲ್ಲಿ ಬೆಳಗಾವಿ ಮೈಕ್ರೊ ಇಂಡಸ್ಟ್ರೀಸ ನ ಅಧ್ಯಕ್ಷ ಶ್ರೀ ರಮೇಶ ದೇಸೂರಕರ ಹಾಗೂ ಮತ್ತಿತರೆ ಪದಾಧಿಕಾರಿಗಳು. ಕೆ ಎಲ್ ಇ ವಿಶ್ವವಿದ್ಯಾಲಯದ ನಿವೃತ್ತ ರೆಜಿಸ್ಟ್ರಾರ್ ಡಾ. ವಿ ಡಿ ಪಾಟೀಲ, ಡಾ. ಎಮ್ ವಿ ಜಾಲಿ, ಶ್ರೀ ಎಸ್ ವಿ ವಿರಗೆ, ಕೆ ಎಲ್ ಇ ಹೊಮಿಯೊಪಥಿಕ ಕಾಲೇಜಿನ ಪ್ರಾಂಶುಪಾಲÀರಾದ ಡಾ. ಎಮ್ ಎ ಉಡಚನಕರ, ಕೆ ಎಲ್ ಇ ಶ್ರೀ ಬಿ ಎಮ್ ಕಂಕಣವಾಡಿ ಆಯುರ್ವೇದಿಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಹಾಸ ಶೆಟ್ಟಿ, ಕೆ ಎಲ್ ಇ ಎಮ್ ಎಸ್ ಶೇಷಗಿರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜ ಕಟಗೇರಿ, ಕೆ ಎಲ್ ಇ ಸೆಂಟಿನರಿ ಚಾರಿಟೇಬಲನ್ ಪ್ರಾಂಶುಪಾಲರಾದ ಶ್ರೀ. ವಿಕ್ರಾಂತ ನೆಸರಿ, ಕೆ ಎಲ್ ಇ ಚಾರಿಟೆಬಲ್ ಆಸ್ಪತ್ರೆಯ ಎಲ್ಲ ವಿಭಾಗದ ಮುಖ್ಯಸ್ಥರು, ಹಿರಿಯ ವೈದ್ಯರುಗಳು ಹಾಗೂ ಅಪಾರ ಪ್ರಮಾಣದ ಕಾರ್ಮಿಕ ಬಂಧುಗಳು ಮತ್ತು ಕೆ ಎಲ್ ಇ ಸಿಬ್ಬಂದಿ ವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Leave a Reply