This is the title of the web page
This is the title of the web page

Please assign a menu to the primary menu location under menu

Local News

ಜ್ಞಾನವೇ ನಾಗರಿಕತೆ ಉತ್ಥಾನದ ಮೂಲ: ಪ್ರೊ. ತ್ಯಾಗರಾಜ


ಬೆಳಗಾವಿ: ಪ್ರಾಚೀನ ಕಾಲದಿಂದಲೂ ಜ್ಞಾನವು ನಾಗರಿಕತೆಗಳ ನಿರೂಪಣೆ ಮತ್ತು ಪೋಷಣೆಯಲ್ಲಿ ತಳಹದಿಯಾಗಿ ಕಾರ್ಯವನ್ನು ಮಾಡಿದೆ. ಮನುಕುಲದ ಏಳ್ಗೆ, ಶಾಂತಿ, ಪ್ರಗತಿ ಎಲ್ಲವೂಗಳಿಗೂ ಜ್ಞಾನ ಕೇಂದ್ರಿತ ವ್ಯವಸ್ಥೆಯೇ ಕಾರಣವಾಗಿರುವುದು ಅಧ್ಯಯನಗಳಿಂದ ವ್ಯಕ್ತವಾಗಿದೆ ಎಂದು ಪ್ರೊ. ಸಿ.ಎಂ ತ್ಯಾಗರಾಜ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ ಮತ್ತು ಎಲ್‍ಐಎಸ್‍ಎ ವಿದ್ಯಾರ್ಥಿಗಳ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ವಿವಿಯ ಕುವೆಂಪು ಸಭಾಭವನದಲ್ಲಿ 130ನೇ ರಾಷ್ಟ್ರೀಯ ಗ್ರಂಥಾಲಯ ದಿನ ನಿಮಿತ್ತ ‘ರೋಲ್ ಆಫ್ ಇನ್‍ಫಾರಮೇಷನ್ ಟೆಕ್ನಾಲಜಿ ಇನ್ ಡಿಸ್‍ಮೆನಟಿಂಗ್ ಇನ್‍ಫಾರಮೆಷನ್ ಇನ್ ದ್ ಡಿಜಿಟಲ್ ಎರಾ’ ವಿಷಯದ ಕುರಿತಾದ ಏರ್ಪಡಿಸಿದ್ದ ಒಂದು ದಿನದ ಕಮ್ಮಟ ಅವರು ಮಾತನಾಡಿದರು.

ಜ್ಞಾನದ ಉತ್ಕಟ ಅನ್ವೇಷಣೆಯಲ್ಲಿ ಹಲವಾರು ಸಾಧಕರು ಮೂಂಚುಣ ಯಲ್ಲಿ ವಿಶ್ವಾದ್ಯಂತ ಕೊಡುಗೆಗಳನ್ನು ನೀಡಿದ್ದಾರೆ. ಸಂತರು, ದಾರ್ಶನಿಕರು, ವಿಜ್ಞಾನಿಗಳು ಕವಿಗಳು, ಸಮಾಜ ಸುಧಾರಕರು, ರಾಜಕೀಯ ವ್ಯವಸ್ಥೆಗಳ ಚಿಂತಕರು, ನೀಡಿರುವ ಕೊಡುಗೆಗೆಳ ಕಾರಣಗಳಿಂದ ಪ್ರಕೃತಿ ಜೊತೆಗೆ ಜ್ಞಾನವು ಮಾನವ ಅಭ್ಯುದಯಕ್ಕಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ಮಾಹಿತಿಗಳು ಜ್ಞಾನವಾಗಿರುವುದಿಲ್ಲ. ಚಲನಚಿತ್ರ, ವಾಣ ಜ್ಯ, ಕ್ರೀಡೆ, ಸೇವಾ ಮಾಹಿತಿಗಳು ಮತ್ತಿತರ ಮಾಹಿತಿಯ ಪ್ರಕಾರಗಳು ಜ್ಞಾನ ವ್ಯವಸ್ಥೆಯ ನಿರ್ಮಾಣಕ್ಕೆ ಸಹಕಾರಿ ಆಗುವುದಿಲ್ಲ ಎಂದು ತಿಳಿಸಿದರು.

21ನೇ ಶತಮಾನದಲ್ಲಿ ನಾಗರೀಕತೆಯು ತಂತ್ರಜ್ಞಾನದಂತ ಸಂಪೂರ್ಣವಾಗಿ ವಾಲಿದ್ದು, ಆಧುನಿಕ ಬದುಕಿನ ಎಲ್ಲ ಸ್ಥರಗಳು ಡಿಜಿಟಲ್ ವ್ಯವಸ್ಥೆಗೆ ಅವಲಂಬಿಸಿದೆ. ಕೇವಲ ಲಾಭದ ಕಾರಣದಿಂದ ಮಾರುಕಟ್ಟೆಗಳು ವಿಸ್ತಾರವಾಗುತ್ತಿವೆಯೇ ಹೊರತು ಮನುಕುಲದ ಶಾಂತಿ, ಪ್ರೀತಿ, ನೆಮ್ಮದಿ, ನಿರುದ್ಯೋಗ ನಿವಾರಣೆ ಬಡತನ ನಿವಾರಣೆ ಇಂತಹ ಗಂಭೀರ ವಿಷಯಗಳತ್ತ ವಿಶ್ವದ ನಾಯಕರು, ತಂತ್ರಜ್ಞಾನಿಗಳು, ಶಾಸನಗಳನ್ನು ರೂಪಿಸುವವರು, ವಿಶ್ವ ಸಂಸ್ಥೆ ಈ ಕುರಿತಾಗಿ ಆದ್ಯತೆಯಿಂದ ಗಮನಿಸಿದಿದ್ದರೆ ಈ ಭೂಗೃಹದ ಮೇಲೆ ಮನುಕುಲದ ಸಂಗತಿ ಆಳವಿನತ್ತ ಸಾಗುತ್ತಿದೆ ಎಂಬ ಸ್ಟಿಫನ್ ಹಾಕಿಂಗ್‍ನವರ ನುಡಿ ಎಚ್ಚರಿಕೆ ಸಂದೇಶವಾಗಿದೆ ಎಂದರು.

ಪ್ರಭಾರ ಕುಲಪತಿ ಮತ್ತು ವಾಣ ಜ್ಯ ಶಾಸ್ತ್ರ ವಿಭಾಗದ ಪ್ರೊ.ಎಚ್.ವೈ ಕಾಂಬ್ಳೆ ಮಾತನಾಡಿ, ಪ್ರಸಕ್ತ ಆಧುನಿಕ ಮತ್ತು ತಂತ್ರಜ್ಞಾನ ಯುಗದಲ್ಲಿ ಮಾಹಿತಿ ಅನೇಕ ಮೂಲಗಳಿಂದ ಪ್ರಾಪ್ತಿಯಾಗುತ್ತದೆ. ಆಷ್ಟೇ ಅಲ್ಲದೆ ಆ ಮಾಹಿತಿಯು ಅಪಾರ ದತ್ತಾಂಶಗಳನ್ನು ಹೊಂದಿರುತ್ತದೆ. ಆದರೆ ಸೂಕ್ತ ಮತ್ತು ಉಪಯುಕ್ತ ಮಾಹಿತಿಯನ್ನು ಮಾತ್ರ ಪಡೆಯುವುದು ಒಂದು ದೊಡ್ಡ ಸವಾಲಾಗಿ ಇಂದು ಪರಿಣಮಿಸಿದೆ. ಈ ಅಪಾರವಾದ ಮಾಹಿತಿ ಹರಿಯುವಿಕೆಯು ಅನೇಕ ಅಡ್ಡ ಪರಿಣಾಮಗಳನ್ನು ಮತ್ತು ಸಮಸ್ಯೆಗಳನ್ನು ಸಮಾಜಕ್ಕೆ ತಂದೊಡ್ಡಿದೆ ಎಂದು ಹೇಳಿದರು. ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಆರ್‍ಸಿಯು ಮರಾಠಿ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ವಿನೋದ ಗಾಯಕವಾಡ ಮಾತನಾಡಿದರು.

ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ, ವಿಜ್ಞಾನ ನಿಖಾಯದ ಮುಖ್ಯಸ್ಥೆ ಪ್ರೊ.ವಿಜಯಲಕ್ಷ್ಮಿ ಶೀಗಿಹಳ್ಳಿ, ಕಮ್ಮಟದ ಸಹ ಸಂಯೋಜಕ ಡಾ.ಮಾರಣ್ಣ ವಿವಿಯ ವಿವಿಧ ನಿಖಾಯದ ಡೀನರು, ಮುಖ್ಯಸ್ಥರು ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

ಶ್ವೇತಾ ಹಾರೊಬೇಡಿ ನಿರೂಪಿಸಿದರು. ಮಲ್ಲಿಕಾರ್ಜುನ ಕುಂಬಾರ ಪ್ರಾರ್ಥಿಸಿದರು. ವಿಭಾಗದ ಅಧ್ಯಕ್ಷ ಪ್ರೊ.ವಿ.ಎಂ. ಬಂಕಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕಿರಣ ಪಿ ಸವಣೂರ ಸ್ವಾಗತಿಸಿದರು. ಡಾ.ಭವಾನಿಶಂಕರ ನಾಯ್ಕ್ ಬಿ ಪರಿಚಯಿಸಿದರು ಮತ್ತು ಡಾ ರಮೇಶ ಬಿ ಕುರಿಯವರು ವಂದಿಸಿದರು.


Gadi Kannadiga

Leave a Reply