ಯರಗಟ್ಟಿ: ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆಯಲು ಪೋಕ್ಸೋ ಕಾಯ್ದೆ ಜಾರಿಗೆ ತಂದಿದ್ದು, ಎಲ್ಲರೂ ತಿಳಿದುಕೊಳ್ಳಬೇಕು ಎಂದು ಪಿಎ??? ಆಯ್ ಎಮ್ ಹಿರೇಗೌಡರ ಹೇಳಿದರು. ಪಟ್ಟಣದ ಎಸ್. ಬಿ. ಜಕಾತಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮುವಾರ ಹಮ್ಮಿಕೊಂಡಿದ್ದ ಪೋಕ್ಸೋ ಕಾಯ್ದೆ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಮಕ್ಕಳ ಕಾನೂನುಗಳ ಬಗ್ಗೆ ಪಾಲಕರು ಮತ್ತು ಶಿಕ್ಷಕರು ಅರಿತುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಪ್ರಾಚಾರ್ಯ ಬಿ. ಕೆ. ದಂಡಿನವರ ಉಪನ್ಯಾಸಕರಾದ ಪಿ. ಎಸ್. ದೊಡ್ಡಮನಿ, ಆರ್. ಜಿ. ಗೌಡರ, ಬಿ. ಸಿ. ಸವದತ್ತಿ, ರಾಮಮೂರ್ತಿ, ಎಸ್ ಎಸ್ ಜಕಾತಿ, ಎನ್. ಎಸ್. ಮಿಲ್ಲಾನಟ್ಟಿ, ಪಿ. ಬಿ. ಕಪರಟ್ಟಿ, ಎಸ್. ವಿ. ಬಡಿಗೇರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.