ಕೊಪ್ಪಳ: ನಗರದ ಗ.ವಿ.ವ. ಟ್ರಸ್ಟ್ನ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ ಸಮಯ: ೧೧-೦೦ ಕ್ಕೆ ಬಿ.ಇಡಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಟಿಇಟಿ/ಸಿಟಿಇಟಿ ಅರ್ಹತಾ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊಪ್ಪಳ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾದ ಪ್ರೋ. ಬಿ.ಕೆ. ರವಿ ಕಾರ್ಯಕ್ರಮಕ್ಕೆ ಸಸಿಗೆ ನೀರು ಎರೆಯುವುದರ ಮೂಲಕ ಉಧ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರಿಗೆ ತಂತ್ರಜ್ಞಾನದ ಜ್ಞಾನ ಇಂದಿನ ದಿನಗಳಲ್ಲಿ ಅತಿ ಅವಶ್ಯಕವಾಗಿದೆ. ವಿಷಯದ ಪ್ರಸ್ತುತಪಡಿಸಲು ಮಕ್ಕಳ ಅವಧಾನವನ್ನು ಕೇಂದ್ರಿಕರಿಸಲು ಅತ್ಯಂತ ಮಹತ್ವವಾದುದು. ಶಿಕ್ಷಕ ವೃತ್ತಿ ಅತಿ ಸವಾಲುಳ್ಳ ವೃತ್ತಿಯಾಗಿದ್ದು ಮಕ್ಕಳ ಮಾನಸಿಕ,ದೈಹಿಕ ಬೆಳವಣಿಗೆಯ ಕಡೆಗೆ ಗಮನ ಹರಿಸಬೇಕು. ತರಗತಿಗೆ ಹೋಗುವ ಪೂರ್ವದಲ್ಲಿ ಪರಿಣಾಮಕಾರಿ ಸಿದ್ಧತೆಯಿಂದ ಹೋಗುವ ಅತ್ಯಗತ್ಯ ಇದೆ. ಉತ್ತಮ ದೇಶ ಹಾಗೂ ಆದರ್ಶ ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅಗಾಧ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗ.ವಿ.ವ. ಟ್ರಸ್ಟ್ ಕಾರ್ಯದರ್ಶಿಗಳಾದ ಡಾ. ಆರ್.ಮರೇಗೌಡ, ಮುಖ್ಯ ಅತಿಥಿಗಳಾಗಿ ಟ್ರಸ್ಟ್ನ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಪ್ರೋ. ಈ.ಆರ್. ಏಕಬೋಟೆಯವರು ವಹಿಸಿದ್ದರು.
ವನಜಾಕ್ಷಿ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ || ಎಸ್.ಬಿ.ಕಂಬಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೈಲಜಾ ಅರಳಲೇಮಠ ಅತಿಥಿಗಳನ್ನು ಪರಿಚಯಿಸಿದರು. ಕಾಂಚನಗಂಗಾ ವಂದಿಸಿದರು. ಗಂಗಾಧರ ಸೊಪ್ಪಿಮಠ ನಿರೂಪಿಸಿದರು. ಸಮಾರಂಭದಲ್ಲಿ ರ‍್ಯಾಂಕ್ ವಿಜೇತೆಗೆ, ಯುನಿವರ್ಸಿಟಿ ಬ್ಲೂ ಆದ ಕ್ರೀಡಾಪಟುವಿಗೆ, ಟಿಇಟಿ/ಸಿಟಿಇಟಿ ಪರೀಕ್ಷೆ ಯಲ್ಲಿ ಅರ್ಹತಾ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ವತಿಯಿಂದ ಸನ್ಮಾನ ಮಾಡಲಾಯಿತು. ಸಿಬ್ಭಂದಿಗಳಾದ ಡಾ. ನೀಲಾಂಬಿಕೆ, ಶ್ರೀಲತಾ ದೇಸಾಯಿ, ಶಿವಕುಮಾರ, ಅನಿತಾ, ಜಂಭಯ್ಯ, ದೇವೆಂದ್ರ, ದೇವರಾಜ ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.