This is the title of the web page
This is the title of the web page

Please assign a menu to the primary menu location under menu

Local News

ಕೋಮಲಣ್ಣಾ ದೊಡ್ಡಣ್ಣವರ ಅವರ ಶೈಕ್ಷಣೀಕ ಸೇವೆ ಅವಿಸ್ಮರಣೀಯ : ಡಾ.ಅನಿಲ ಪಾಟೀಲ


ಬೆಳಗಾವಿ.ಬೆಳಗಾವಿಯಲ್ಲಿ ೬೦ ವರ್ಷಗಳ ಹಿಂದೆ ಭರತೇಶ ಶಿಕ್ಷಣ ಸಂಸ್ಥೆಯ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೋಮಲಣ್ಣಾ ದೊಡ್ಡಣ್ಣವರ ಅವರ ಶೈಕ್ಷಣಿಕ ಸೇವೆ ಅವಿಸ್ಮರಣೀಯವಾಗಿದೆ ಎಂದು ಖ್ಯಾತ ಶಿಕ್ಷಣ ತಜ್ಞ ಹಾಗೂ ಸಾತಾರಾ ರೈತ ಶಿಕ್ಷಣ ಸಂಸ್ಥೆಯ ಚೇರಮನ್ ಡಾ. ಅನಿಲ ಪಾಟೀಲ ಅವರು ಅಭಿಪ್ರಾಯಪಟ್ಟರು.
ಬೆಳಗಾವಿ ಹಲಗಾ ಗ್ರಾಮದಲ್ಲಿನ ಭರತೇಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕೋಮಲಣ್ಣಾ ದೊಡ್ಡಣ್ಣವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಕೊಮಲಣ್ಣಾ ದೊಡ್ಡಣ್ಣವರ ಅವರು ನೀಡಿದ ಸೇವೆ ಶ್ಲಾಘನೀಯ. ಕಷ್ಟದ ಕಾಲದಲ್ಲಿ ಸಂಸ್ಥೆಯನ್ನು ಹುಟ್ಟು ಹಾಕುವುದು ಒಂದು ಸವಾಲವೇ ಸರಿ. ಭರತೇಶದಂತಹ ಸಂಸ್ಥೆಯನ್ನು ಬೆಳೆಸುವಲ್ಲಿ ಅನೇಕ ಸವಾಲಗಳು ಎದುರಾಗಿರಬಹುದು. ಎಲ್ಲ ಸವಾಲುಗಳನ್ನು ಎದುರಿಸಿ ಶೈಕ್ಷಣಿಕ ಸಂಸ್ಥೆಯನ್ನು ಬೆಳೆಸಿರುವದು ಹೆಮ್ಮೆಯ ಸಂಗತಿಯಾಗಿದ್ದು, ಅವರು ತೋರಿದ ದಾರಿಯಲ್ಲಿ ಇಂದಿನ ಆಡಳಿತ ಮಂಡಳಿಯೂ ಸಹ ಮುಂದುವರೆಯುತ್ತಿದೆ . ಇದೊಂದು ಮಾದರಿ ಸಂಸ್ಥೆಯಾಗಿದೆ ಎಂದು ಅವರು ಬಣ್ಣಿಸಿದರು.
ಕೋಮಲಣ್ಣಾ ದೊಡ್ಡಣ್ಣವರ ಅವರು ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದರೆ ಮಹಾರಾಷ್ಟ್ರದಲ್ಲಿ ೧೯೧೮ ರಲ್ಲಿ ಕರ್ಮವೀರ ಭಾವುರಾವ ಪಾಟೀಲ ಅವರು ರೈತ ಶೀಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಮಹಾರಾಷ್ಟ್ರದಲ್ಲಿ ಹೊಸದೊಂದು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ. ಅವರ ಅಂದಿನ ತ್ಯಾಗ ಮತ್ತು ಪರಿಶ್ರಮದಿಂದ ಇಂದು ರೈತ ಶಿಕ್ಷಣ ಸಂಸ್ಥೆ ೪೫೦ ಸಂಸ್ಥೆಗಳನ್ನು ೧೨ ಸಾವಿರ ಸಿಬ್ಬಂದಿ ಹಾಗೂ ೪ ಲಕ್ಷ ೫೦ ಸಾವಿರ ವಿದ್ಯಾರ್ಥಿಗಳನ್ನು ಹೊಂದಿದ ಸಂಸ್ಥೆಯಾಗಿದೆ ಎಂದರು.
ಇತ್ತಿಚಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗಳಾಗುತ್ತಿವೆ. ನೂತನವಾಗಿ ಪರಿಚಯಿಸಲ್ಪಟ್ಟ ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಅನೇಕ ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ. ಮಾನವನ ಬುದ್ದಮತ್ತೆಗೆ ಅನುಗುಣವಾಗಿ ಶಿಕ್ಷಣ ನೀಡುವ ಈ ನೀತಿಯ ಮುಖ್ಯ ಉದ್ದೇಶವಾಗಿದೆ. ಇದರಿಂದ ಮುಂಬರುವ ಐದು ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಂದು ಹೊಸ ಕ್ರಾಂತಿಯಾಗಲಿದೆ. ಇದಕ್ಕಾಗಿ ನಾವೆಲ್ಲರೂ ಮಾನಸಿಕವಾಗಿ ಮತ್ತು ಶೈಕ್ಷಣಿಕವಾಗಿ ಸಿದ್ದರಾಗಬೇಕೆಂದು ಅವರು ತಿಳಿಸಿದರು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಮಾತನಾಡುತ್ತ , ಕೋಮಲಣ್ಣಾ ದೊಡ್ಡಣ್ಣವರ ಅವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವರು ರಾಜಕೀಯದಲ್ಲಿದ್ದರೂ ಸಹ ಎಂದಿಗೂ ಅಧಿಕಾರದ ಆಸೆ ಹೊಂದಲಿಲ್ಲ. ನಾವು ಅವರನು ಶಾಸಕರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವು. ಆದರೆ ಅವರು ಪ್ರಕಾಶ ಹುಕ್ಕೇರಿ ಅವರಿಗೆ ಶಾಸಕ ಸ್ಥಾನ ಕೊಡಿ ಎಂದು ಹೇಳುವ ಮೂಲಕ ನನ್ನ ಹೆಸರು ಶೀಫಾರಸ್ಸು ಮಾಡಿದ್ದರಿಂದಲೇ ಇಂದು ನಾನು ಶಾಸಕನಾಗಿದ್ದೇನೆ. ಇಂತಹ ಮಹಾನ ಚೇತನ ಪ್ರಾರಂಭಿಸಿದ ಭರತೇಶ ಶಿಕ್ಷಣ ಸಂಸ್ಥೆಗೆ ಪ್ರತಿ ವರ್ಷ ೨೫ ಲಕ್ಷ ರೂ. ಅನುದಾನ ನೀಡುವುದಾಗಿ ಅವರು ಹೇಳಿದರು. ಸಮಾರಂಭದ ಇನ್ನೋರ್ವ ಅತಿಥಿ ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಕೊಮಲಣ್ಣಾ ದೊಡ್ಡಣ್ಣವರ ಅವರು ಮಾಡಿದ ತ್ಯಾಗದ ಫಲದಿಂದ ಇಂದು ಭರತೇಶ ಶಿಕ್ಷಣ ಸಂಸ್ಥೆಯು ಹೆಮ್ಮರವಾಗಿ ಬೆಳದುನಿಂತಿದೆ. ಇದಕ್ಕೆ ದಿವಂಗತ ರಾಜೀವ ದೊಡ್ಡಣ್ಣವರ ಅವರು ಕೊಡುಗೆಯೂ ಸಹ ಅಪಾರವಾಗಿದೆ. ಈ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಎ.ಎ. ಸನದಿ ಅವರು ಬರೆದ ಭರತೇಶ ಬೆಳಕು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ ಅವರು ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಪ್ರಕಾಶ ಉಪಾಧ್ಯೆ ಉಪಸ್ಥಿತರಿದ್ದರು. ಖಜಾಂಚಿ ಶ್ರೀಪಾಲ ಖೇಮಲಾಪೂರೆ ಅತಿಥಿಗಳನ್ನು ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯ ವಿನೋದ ದೊಡ್ಡಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಭೂಷಣ ಮಿರ್ಜಿ ವಂದಿಸಿದರು. ಸ್ವಾತಿ ಜೋಗ ಮತ್ತು ಎಸ್.ಎನ್.ಅಕ್ಕಿ ಅವರು ಕಾರ್ಯಕ್ರಮ ನಿರೂಪಿಸಿದರು . ಸಮಾರಂಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.


Leave a Reply