This is the title of the web page
This is the title of the web page

Please assign a menu to the primary menu location under menu

e-paperState

ನರೇಗಾ ಯೋಜನೆ ಕಾಮಗಾರಿ ಪರಿಶೀಲಿಸಿದ ಕೊಪ್ಪಳ ಜಿಲ್ಲೆಯ ತನಿಖಾಧಿಕಾರಿಗಳು


ಕೊಪ್ಪಳ:-ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಮತ್ತು ಹಿರೇಮನ್ನಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೂ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕೃಷಿ ಇಲಾಖೆಯಡಿಯಲ್ಲಿ ಅನುಷ್ಠಾನಗೊಳಿಸುವ ಕೃಷಿ ಹೊಂಡ ಬದು ನಿರ್ಮಾಣ ಕಾಮಗಾರಿಗಳನ್ನು ಜೆ.ಸಿ.ಬಿ ಮುಖಾಂತರ ಅನುಷ್ಠಾನಗೊಳಿಸಿದ್ದಾರೆ ಎಂದು ಪೋಟೋಗಳ ಮೂಲಕ ಪತ್ರಿಕೆಗಳಲ್ಲಿ ವರದಿಯಾಗಿದ್ದು, ಪೋಟೊ ಮತ್ತು ಪತ್ರಿಕಾ ವರದಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಸದರಿ ದೂರಿಗೆ ಸಂಬಂಧಿಸಿದಂತೆ ಕೂಲಂಕಷವಾಗಿ ಪರಿಶೀಲಿಸಿ ವರದಿಯನ್ನು ತನಿಖೆಯ ಕಮೀಟಿಯು ಆಗಮಿಸಿ ನಿಂಗಪ್ಪ, ರಶೀದ್,ಕುಮಾರ ಸ್ವಾಮಿ ಅತೀ ಶ್ರೀಘ್ರದಲ್ಲಿ ತನಿಖೆಯ ವರದಿಯನ್ನು ಸ್ಥಳ ಪರಿಶೀಲನೆ ಮಾಡಿದರು ಅದರ ವರದಿಯನ್ನು ನೀಡುತ್ತವೆ ಎಂದು ಹೇಳಿದರು.
ಸ್ಥಳ ಪರಿಶೀಲಿಸಲು ಬಂದಾಗ ಅರ್ಜಿ ದಾರರು ಕೂಡಾ ಸ್ಥಳಕೆ ಬೇಟಿ ನೀಡಿ ಈ ಕೃಷಿಹೊಂಡಗಳನ್ನು ಜೆ.ಸಿ.ಬಿ‌ ಮುಖಾಂತರ ‌ಮಾಡಿದ್ದಾರೆ ಎಂದು ತಿಳಿಸಲಾಯಿತು, ಅದರಲ್ಲಿ ತುಂಬಾ ದೊಡ್ಡ ದೊಡ್ಡ ಕಲ್ಲುಗಳನ್ನು ಕೂಲಿ ಕಾರ್ಮಿಕರು ತೆಗೆವುದು ಸಾಧ್ಯವಿಲ್ಲ ಇದನ್ನು ಯಂತ್ರಗಳನ್ನು ಬಳಸಿ ಮಾಡಿರುತ್ತಾರೆ ಎಂದು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಅರ್ಜಿದಾರರ ಪರವಾಗಿ ಮಾತನಾಡಿದ ನಾಗರಾಜ ಭೋವಿಯವರು ನಮ್ಮ ಹತ್ತಿರ ಇನ್ನೂ ದಾಖಲೆಗಳು ಇವೆ ಅವರ ವರದಿಯ ನಂತರ ಮಾಧ್ಯಮದ ಮಿತ್ರರಿಗೆ ಮತ್ತು ಅಧಿಕಾರಿಗಳಿಗೆ ನೀಡುತ್ತವೆ.
ಈ ಸಂದರ್ಭದಲ್ಲಿ ನಾಗರಾಜ ಭೋವಿ ಮಾನವ ಹಕ್ಕುಗಳ ಕಾನೂನು ಮತ್ತು ಸಾಮಾಜಿಕ ಕಲ್ಯಾಣಾಭಿವೃದ್ದಿ ಅಧ್ಯಕ್ಷರು, ಶಿವುಕುಮಾರ ಉಪಾಧ್ಯಕ್ಷರು, ಮುತ್ತಣ್ಣ ಚಳಗೇರಿ, ನಿರುಪಾದಿ ಮತ್ತಿತರರು ಇದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply