This is the title of the web page
This is the title of the web page

Please assign a menu to the primary menu location under menu

State

ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕನಕಗಿರಿ, ಗಂಗಾವತಿ ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳ ಭೇಟಿ; ಪರಿಶೀಲನೆ


ಕೊಪ್ಪಳ ಮೇ 09 :- ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಮೇ 9ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಕುಷ್ಟಗಿ, ಕನಕಗಿರಿ, ಗಂಗಾವತಿ ಮತ್ತು ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳಿಗೆ ಸಹ ಭೇಟಿ ನೀಡಿ ಮಸ್ಟರಿಂಗ್ ಪ್ರಕ್ರಿಯೆಯ ಬಗ್ಗೆ ಖದ್ದು ಪರಿಶೀಲಿಸಿದರು.
ಮತಯಂತ್ರ ಸೇರಿದಂತೆ ಎಲ್ಲಾ ಚುನಾವಣಾ ಸಾಮಗ್ರಿಗಳನ್ನು ಸುವ್ಯವಸ್ಥಿತವಾಗಿ ಮತಗಟ್ಟೆಗೆ ತೆಗೆದುಕೊಂಡು ಹೋಗಿ ಮೇ.10ರಂದು ಮತದಾನವು ಶಾಂತಿಯುತವಾಗಿ ನಡೆಸುವ ಮಹತ್ವದ ಜವಾಬ್ದಾರಿಯನ್ನು ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಪ್ರತಿಯೊಬ್ಬರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.
ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 319 ಪಿಅರ್‌ಓಗಳು, 320 ಎಪಿಆರ್‌ಓಗಳು, 659 ಪಿಓಗಳು 278 ಮತಗಟ್ಟೆಗಳಿಗೆ 49 ವಿವಿಧ ವಾಹನಗಳ ಮೂಲಕ ತೆರಳುವ ವ್ಯವಸ್ಥೆ ಮಾಡಲಾಗಿದೆ ಎಂದು ಕುಷ್ಟಗಿ ಕ್ಷೇತ್ರ ಚುನಾವಣಾಧಿಕಾರಿ ಚಿದಾನಂದ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಕನಕಗಿರಿಗೆ ತೆರಳಿ ಅಲ್ಲಿನ ಮಸ್ಟರಿಂಗ್ ಕೇಂದ್ರದ ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೆ ವೇಳೆ ಕನಕಗಿರಿ ಕ್ಷೇತ್ರ ಚುನಾವಣಾಧಿಕಾರಿ ಸಮೀರ್ ಮುಲ್ಲಾ ಅವರು, 306 ಪಿಅರ್‌ಓಗಳು, 307 ಎಪಿಆರ್‌ಓಗಳು, 632ಪಿಓಗಳು ಸೇರಿದಂತೆ 1245 ಮತಗಟ್ಟೆ ಅಧಿಕಾರಿಗಳು 264 ಮತಗಟ್ಟೆಗಳಿಗೆ 47 ವಿವಿಧ ವಾಹನಗಳ ಮೂಲಕ ತೆರಳಿದ್ದಾರೆ ಎಂದು ತಿಳಿಸಿದರು.
ಗಂಗಾವತಿ ನಗರದ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ನಿಗದಿತ ಸಮಯಕ್ಕೆ ಮಸ್ಟರಿಂಗ್ ಕಾರ್ಯ ನಡೆದಿದೆ. 275 ಪಿಅರ್‌ಓಗಳು, 276 ಎಪಿಆರ್‌ಓಗಳು, 576 ಪಿಓಗಳು ಸೇರಿದಂತೆ 1127 ಮತಗಟ್ಟೆ ಅಧಿಕಾರಿಗಳನ್ನು 235 ಮತಗಟ್ಟೆಗಳಿಗೆ 59 ವಿವಿಧ ವಾಹನಗಳ ಮೂಲಕ ಕಳುಹಿಸಲಾಗಿದೆ ಎಂದು ಗಂಗಾವತಿ ಕ್ಷೇತ್ರ ಚುನಾವಣಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್ ಕಾರ್ಯದಲ್ಲಿ 297 ಪಿಅರ್‌ಓಗಳು, 298 ಎಪಿಆರ್‌ಓಗಳು, 614 ಪಿಓಗಳು ಚುನಾವಣಾ ಸಾಮಗ್ರಿಗಳನ್ನು ಪಡೆದುಕೊಂಡು 256 ಮತಗಟ್ಟೆಗಳಿಗೆ 47 ವಿವಿಧ ವಾಹನಗಳ ಮೂಲಕ ತೆರಳಿದ್ದಾರೆ ಎಂದು ಯಲಬುರ್ಗಾ ಕ್ಷೇತ್ರ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ. ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
331 ಪಿಅರ್‌ಓಗಳು, 333 ಎಪಿಆರ್‌ಓಗಳು, 683 ಪಿಓಗಳು ಸೇರಿ 1347 ಮತಗಟ್ಟೆ ಅಧಿಕಾರಿಗಳನ್ನು 289 ಮತಗಟ್ಟೆಗಳಿಗೆ 61 ವಿವಿಧ ವಾಹನಗಳ ಮೂಲಕ ಕಳುಹಿಸುವ ಮಸ್ಟರಿಂಗ್ ವ್ಯವಸ್ಥೆಯು ಕೊಪ್ಪಳದ ಗವಿಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಮೇ 9ರಂದು ಅಚ್ಚುಕಟ್ಟಾಗಿ ನಡೆದಿದೆ ಎಂದು ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply