ಅಥಣಿ: ರಾಜ್ಯ ಸರಕಾರ ನೀಡಿದ ಭರವಸೆ ಹಿನ್ನೆಲೆಯಲ್ಲಿ ತಳವಾರ ಸಮಾಜ ಬಂಧುಗಳಿಗೆ ಎಸ್.ಟಿ ಮೀಸಲಾತಿ ಸೌಲಭ್ಯ ಕಲ್ಪಿಸಿಕೊಟ್ಟಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅಥಣಿ, ಕಾಗವಾಡ ತಾಲೂಕುಗಳ ತಳವಾರ ಸಮಾಜ ಬಾಂದವರು ಹಲ್ಯಾಳದ ಕೃಷ್ಣಾ ರೈತ ಭವನದಲ್ಲಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಸವಕಲ್ಯಾಣ ಹಾಗೂ ಸಿಂದಗಿ ಉಪ ಚುನಾವಣೆಗಳಲ್ಲಿ ನಿರ್ಣಾಯಕ ಮತದಾರರಾಗಿದ್ದ ತಳವಾರ ಸಮಾಜ ಬಂಧುಗಳ ಬೇಡಿಕೆ ಈಡೇರಿಸುತ್ತೇವೆ ಎಂದು ನಮ್ಮ ನಾಯಕರಾದ ಬಿಎಸ್ವೈ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು ಎಂದರು.
ತಳವಾರ ಸಮಾಜಕ್ಕೆ ಎಸ್.ಟಿ ಸೌಲಭ್ಯ ಕೊಟ್ಟರು ಎಂದ ಅವರು ಲಕ್ಷ್ಮಣ ಸವದಿಯವರ ಸತತ ಪ್ರಯತ್ನದ ಫಲವಾಗಿಯೇ ತಳವಾರ ಸಮಾಜಕ್ಕೆ ಈ ಮೀಸಲಾತಿ ದೊರಕಿದ್ದರಿಂದಲೇ ಮೊಟ್ಟ ಮೊದಲ ಬಾರಿಗೆ ಸಮಾಜ ಕಲ್ಯಾಣ ಸಚಿವನಾಗಿ ಅಥಣಿಗೆ ಆಗಮಿಸಿ ತಳವಾರ ಸಮಾಜದ ಸಮಾವೇಶದಲ್ಲಿ ಪಾಲ್ಗೊಂಡು ಸಾಂಕೇತಿಕವಾಗಿ 11 ಜನ ತಳವಾರ ಬಂಧುಗಳಿಗೆ ಜಾತಿ ಪ್ರಮಾಣಪತ್ರ ನೀಡಿದ್ದೇನೆ.ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ರಾಜಕೀಯ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಶಕ್ತಿ ಹೆಚ್ಚಾಗಲು ಈ ಮೀಸಲಾತಿ ತಳವಾರ ಸಮುದಾಯಕ್ಕೆ ಅನಕೂಲವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಅಧ್ಯಕ್ಷತೆ ವಹಿಸಿದ್ದರು. ಸಾನಿಧ್ಯ ವಹಿಸಿದ್ದ ತೆಲಸಂಗ ವಿರಕ್ತ ಮಠದ ವೀರೇಶ ದೇವರು ಮಾತನಾಡಿದರು. ಸಮಾಜದ ಮುಖಂಡ ಫಲವಾಗಿಯೇ ಮುಖ್ಯಮಂತ್ರಿ ಎಸ್.ಟಿ ಹಣಮಂತ ಕಾಲವೆ, ಪ್ರಕಾರ ಕೋಳಿ, ಬಾಪು ಗಸ್ತಿ, ಧನಪಾಲ ಮೀಸಲಾತಿಯನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಿದರು. ಸನದಿ, ಮಲ್ಲಿಕಾರ್ಜುನ ದಳವಾಯಿ ಇದ್ದರು.