This is the title of the web page
This is the title of the web page

Please assign a menu to the primary menu location under menu

Local News

15 ವರ್ಷ ಜನಸೇವೆಗೆ ಅವಕಾಶ ನೀಡಿದ್ದು, ಈ ಭಾರೀಯೂ ಆಶೀರ್ವದಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ


ಯಮಕನಮರಡಿ: ಯಮಕನಮರಡಿ ಮತಕ್ಷೇತ್ರದ ಜನ ಕಳೆದ 15 ವರ್ಷಗಳ ಕಾಲ ಜನ ಸೇವೆ ಮಾಡಲು ಅವಕಾಶ ನೀಡಿದ್ದು, ಈ ಭಾರೀಯೂ ಪ್ರೀತಿ, ವಿಶ್ವಾಸ ಜತೆ ಬೆಂಬಲ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಯಮಕನಮರಡಿ ಮತಕ್ಷೇತ್ರದ ಮುಚ್ಚಂಡಿ ಗ್ರಾಮದಲ್ಲಿ ಸರಣಿ ಸಭೆಗಳನ್ನು ನಡೆಸಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಯಮಕನಮರಡಿ ಮತಕ್ಷೇತ್ರದ ಜನರ ಸೇವೆಯಲ್ಲಿ  ತೊಡಗಿ ನಿರಂತರವಾಗಿ ಜನರ ಸಂಪರ್ಕದಲ್ಲಿದ್ದೇನೆ‌. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡು ವುದರ ಮೂಲಕ ಮಾದರಿ ಕ್ಷೇತ್ರವಾಗಿ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನ ಈ ಭಾರೀಯೂ ಮತ್ತೊಮ್ಮೆ ಆಶೀರ್ವಾದಿಸಬೇಕೆಂದು ಮನವಿ ಮಾಡಿದರು.

ನಾವು ಅಧಿಕಾರಕ್ಕೆ ಬರುವ ಮುನ್ನ ಯಾವ ರೀತಿ ಮುಚ್ಚಂಡಿ, ಕಲಖಾಂಬ ಗ್ರಾಮದ ಸ್ಥಿತಿ ಹೇಗಿತ್ತು ಎಂಬುವುದನ್ನು ನೀವು ನೋಡಿದ್ದಿರಿ. ಆದರೆ ಈಗ ಮುಚ್ಚಂಡಿ, ಕಲಖಾಂಬ ಮೂಲಭೂತ ಸೌಕರ್ಯವುಳ್ಳ ಗ್ರಾಮವಾಗಿದೆ. ಹೀಗಾಗಿ ಅಭಿವೃದ್ಧಿಗೆ ಆದ್ಯತೆ ನೀಡುವ ನನ್ನನ್ನು ಬೆಂಬಲಿಸಬೇಕು. ಜತೆಗೆ ನಾವು ಕ್ಷೇತ್ರದಲ್ಲಿ ಶಿಕ್ಷಣಕ್ಕೂ ಪ್ರಾಶಸ್ತೆ ನೀಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಚ್ಚಂಡಿ, ಕಲಖಾಂಬ ಗ್ರಾಮದ ಗ್ರಾಪಂ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್‌ ಮುಖಂಡರು ಇದ್ದರು.


Leave a Reply