This is the title of the web page
This is the title of the web page

Please assign a menu to the primary menu location under menu

Local News

ವಿಶ್ವಕರ್ಮ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಬದ್ಧ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬೆನ್ನಾಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಸಮಾಜದ ಬೃಹತ್ ಕಾಂಗ್ರೆಸ್ ಸಮಾವೇಶ


ಬೆಳಗಾವಿ: ವಿಶ್ವಕರ್ಮ ಸಮುದಾಯವೂ ಸದಾ ಪ್ರೀತಿ, ಸಹಕಾರ, ಬೆಂಬಲ £Ãಡಿದೆ. ಮುಂದೆಯೂ £ಮ್ಮ ಪ್ರೀತಿ, ಸಹಕಾರ, ಬೆಂಬಲ ನಮಗೆ ಇರಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಬೆನ್ನಾಳಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಸಮಾಜದ ಬೃಹತ್ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ಮತ್ತು ವಿವಿಧ ಬೇಡಿಕೆಗಳನ್ನು ಪೂರೈಸಲು ಪ್ರಯತ್ನಿಸಿದ್ದೇನೆ. ಮುಂದೆಯೂ ಕೂಡ ಸಮುದಾಯದ ಅಭಿವೃದ್ಧಿಗಾಗಿ ಸದಾ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಕಳೆದ ೧೫ ವರ್ಷಗಳ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು £ಮ್ಮ ಮುಂದೆ ಇವೆ. ನನ್ನ ಗಮನಕ್ಕೆ ಬಂದ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೇನೆ. ವಿಶ್ವಕರ್ಮ ಸಮುದಾಯದ ಕೆಲವು ಬೇಡಿಕೆಗಳು ನಮ್ಮ ಗಮನಕ್ಕೆ ತಂದಿದ್ದಾರೆ. ಅವುಗಳಿಗೆ ಶೀಘ್ರ ಸ್ಪಂದಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಇದೇ ವೇಳೆ ಭರವಸೆ £Ãಡಿದರು.
ಯುವಕರ, ರೈತರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಅಭಿವೃದ್ಧಿ ಕಾರ್ಯ, ಸೇವೆ ಮಾಡಲು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ವಿಶ್ವಕರ್ಮ ಸಮಾಜದ ಮುಖಂಡ ಸಿ.ವೈ. ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲಾ ಸಮುದಾಯ ಭಾಂದವರನ್ನು ಗೌರವಿಸುವ ಶಾಸಕ ಸತೀಶ್ ಜಾರಕಿಹೊಳಿ ಅವರಂತ ನಾಯಕನನ್ನು ಪಡೆದ ನಾವೇ ಧನ್ಯರು. ಅವರನ್ನು ಮತ್ತೊಮ್ಮೆ ಆಯ್ಕೆ ಮಾಡುವುದೇ ನಮ್ಮ ಗುರಿಯಾಗಬೇಕು. ಕ್ಷಣಾರ್ಧದಲ್ಲಿ ಸಮಸ್ಯೆಗೆ ಪರಿಹಾರ £Ãಡುವ ಶಾಸಕರು ಸಿಗುವುದು ತುಂಬಾ ವಿರಳ. ಕಾರಣ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಅವರಿಗೆ ಇನ್ನಷ್ಟು ಬಲ ತುಂಬೋಣ ಎಂದು ಹೇಳಿದರು.
ಮುಖಂಡ ಮುರಳಿ ಬಡಿಗೇರ ಮಾತನಾಡಿ, ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಅಂತರದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡೋಣ. ಶಾಸಕರು ಮತಕ್ಷೇತ್ರದ ೧೧೨ ಹಳ್ಳಿಗಳನ್ನು ಅಭಿವೃದ್ಧಿ ಪಡಿಸಿದ್ದು, ಅಭಿವೃದ್ಧಿ ಹರಿಕಾರರು ಎ£್ನಸಿಕೊಂಡಿದ್ದಾರೆ. ಸದಾ ವಿಶ್ವಕರ್ಮ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವ ಶಾಸಕ ಸತೀಶ್ ಜಾರಕಿಹೊಳಿ ಅವರ ಋಣವನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಕುಂಭ ಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ದೇವಗಿರಿ, ಹುದಲಿ, ಅಸ್ಟಗಿ ಗ್ರಾಮಗಳ ಮುಖಂಡರು ಸನ್ಮಾ£ಸಿದರು. ವಿದ್ಯಾರ್ಥಿ£ಯರು ಪ್ರಾರ್ಥನಾ ಗೀತೆ ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಪಾಂಡು ಮ£್ನಕೇರಿ, ವಿಜಯ ಹೊಲಮ£, ಜಿವಪ್ಪ ಬಡಿಗೇರ್, ರವಿ ಲೋಹಾರ್, ದಿವಾಕರ್ ಸುತಾರ, ಬಾಬು ಸುತಾರ, ಶಂಕರ ಬಡಿಗೇರ್, ಸಾಯಿಕುಮಾರ ಪೋತದಾರ್, ಮುರಳಿ ಬಡಿಗೇರ್, ಮಲ್ಲಪ್ಪ ಬಡಿಗೇರ್, ಚಂದ್ರಕಾಂತ್ ಸುತಾರ, ಅಪ್ಪು ಸುತಾರ, ಮಾರುತಿ ಕುಂಬಾರ, ಮಹೇಶ ಪತ್ತಾರ, ರಾಮಚಂದ್ರ ಬಡಿಗೇರ್, ಭಗವಂತ ಪತ್ತಾರ, ಕೃಷ್ಣಾ ಸುತಾರ, ಕಾಳಪ್ಪ ಪತ್ತಾರ ಸೇರಿದಂತೆ ಸಮಾಜದ ಸಾವಿರಾರು ಮಹಿಳೆಯರು, ಮುಖಂಡರು ಉಪಸ್ಥಿತರಿದ್ದರು.


Gadi Kannadiga

Leave a Reply