This is the title of the web page
This is the title of the web page

Please assign a menu to the primary menu location under menu

Local News

ಆಜಾದಿ ಅಮೃತ ಮಹೊತ್ಸವ ಕಾರ್ಯಕ್ರಮ ರಾಷ್ಟ್ರ ನೋಡುವ ಮಟ್ಟಕ್ಕೆ ಆಯೋಜಿಸಿ : ಕೆ.ಎಸ್.ನವೀನ


ಬೆಳಗಾವಿ: ಸ್ವಾತಂತ್ರ್ಯ ಹೊರಾಟದಲ್ಲಿ ದೇಶದ ಗಮನ ಸೇಳೆದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರ ಕರ್ಮ ಭೂಮಿ ಬೆಳಗಾವಿಯಲ್ಲಿ ನಡೆಯುವ ಆಜಾದಿ ಅಮೃತ ಮಹೊತ್ಸವ ಕಾರ್ಯಕ್ರಮ ರಾಷ್ಟ್ರ ಮಟ್ಟದಲ್ಲಿ ನೋಡುವ ಮಟ್ಟಕ್ಕೆ ಆಯೋಜನೆ ಮಾಡಬೇಕೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯ ತಿರಂಗಾ ಅಭಿಯಾನ ರಾಜ್ಯ ಸಂಚಾಲಕ ಕೆ.ಎಸ್.ನವೀನ ಹೇಳಿದರು.

ಮಹಾನಗರದ ಗೊಮಟೆಶ್ವರ ಸಭಾಭವನದಲ್ಲಿ ನಡೆದ ಹರ ಘರ ತಿರಂಗಾ ಅಭಿಯಾನದ ವಿಶೇಷ ಸಭೆಯಲ್ಲಿ ಮಾತನಾಡಿ, ದೇಶದ 20 ಕೋಟಿಗಿಂತ ಹೆಚ್ಚಿನ ಮನೆಗಳ ಮೇಲೆ ತಿರಂಗಾ ಹಾರುವ ಮೂಲಕ ಪ್ರಪಂಚದಲ್ಲಿ ದೇಶ ಭಕ್ತಿಗೆ ಭಾರತ ಮುನ್ನುಡಿ ಬರೆಯಲಿದೆ ಎಂದರು. 75 ನೆ ವರ್ಷದ ಸ್ವಾತಂತ್ರ್ಯತೋತ್ಸವ ಅಮೃತ ಮಹೊತ್ಸವ ದೇಶದ ಅತಿ ದೊಡ್ಡ ಹಬ್ಬವಾಗಿ ಹೊರಹಮ್ಮಲಿದೆ. ಇ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನ ಸನ್ನದ್ಧಗೊಳಿಸಿ ಪ್ರತಿ ಮನೆಯ ಮೇಲೆ ಧ್ವಜ ಸಂಹಿತೆಯ ಅಡಿಯಲ್ಲಿ ಅ13 ರಿಂದ 15ರ ವರೆಗೆ ತಿರಂಗ ಹಾರಾಡಲು ಶ್ರಮವಹಿಸಲಿದ್ದಾರೆ.

ಬೆಳಗಾವಿ ಜಿಲ್ಲೆಗೆ ಪಕ್ಷದ ವತಿಯಿಂದ ಒಂದು ಲಕ್ಷ ತಿರಂಗಾ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ತಿರಂಗಾ ಅಭಿಯಾನದಲ್ಲಿ 75ಕೀ ಮೀ ಬೈಕ್ ಗಳ ಮೂಲಕ ಜಾಗೃತಿ ಸೈಕಲ್ ಜಾತಾ, ಮತ್ತು ವಿದ್ಯಾರ್ಥಿಗಳಿಗೆ ಪ್ರಬಂಧ, ರಂಗೋಲಿ ಹಾಗೂ ಭಾಷಣ ಸ್ಪರ್ಧೆ, ಪಂಜಿನ ಮೆರವಣಿಗೆ ಹಮ್ಮಿಕೊಳ್ಳುವ ಮೂಲಕ ದೇಶದ ಜನತೆಯ ಜೋತೆ ತಿರಂಗಾದ ಭಾವನಾತ್ಮಕ ಸಂಬಂಧ ಬೆಸೆಯುವತ್ತ ಬಿಜೆಪಿ ಚಿತ್ತ ಹರಿಸಿದೆ ಎಂದರು.


Gadi Kannadiga

Leave a Reply