This is the title of the web page
This is the title of the web page

Please assign a menu to the primary menu location under menu

Local News

ಜನವಾಡ ಗ್ರಾಮದ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಕುಮಠಳ್ಳಿ


ಅಥಣಿ: ನವಾಡ ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾದ ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಇಂದು ಚಾಲನೆ ನೀಡಿದರು.

ಕಾಮಗಾರಿಗೆ ಚಾಲನೆ ನೀಡಿ ಜನವಾಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2019 ರಲ್ಲಿ ಸಂಭವಿಸಿದ ಪ್ರವಾಹದಲ್ಲಿ ಈ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಇದರಿಂದ ಜನವಾಡ ಗ್ರಾಮದ ಗ್ರಾಮಸ್ಥರಿಗೆ ಅವರು ಬೆಳೆದ ಬೆಳೆಗಳನ್ನು ಸಾಗಣೆ ಮಾಡಲು, ಹಾಗೂ ಪ್ರವಾಹದ ಸಂಧರ್ಬದಲ್ಲಿ ಜಮಖಂಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ಇದಾಗಿತ್ತು, ಈ ಮುಖ್ಯವಾದ ಸೇತುವೆಗೆ ಇವತ್ತು ಸುಮಾರು 4 ಕೋಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರವೇ ಕಾಮಗಾರಿ ಪೂರ್ಣಗೊಂಡು ಜನರಿಗೆ ಅನುಕೂಲವಾಗಲಿದೆ ಎಂದರು.

ಇದರ ಜೊತೆಗೆ ಹಿಪ್ಪರಗಿ ಬ್ಯಾರೇಜ್ ಮುಂದಗಡೆ, ಸವದಿ ದರ್ಗಾಗೆ ಇರುವ ತಡೆಗಡೆಗೂ 28 ಕೋಟಿ ರೂ. ಅನುದಾನ ಬಂದಿದೆ ಆದಷ್ಟು ಬೇಗ ಆ ಕೆಲಸವನ್ನು ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.

ಈ ವೇಳೆ ರಮೇಶಗೌಡ ಪಾಟೀಲ, ಮಲ್ಲಪ್ಪ ಹಂಚಿನಾಳ, ನೀರಾವರಿ ಇಲಾಖೆಯ ಬಿ ಆರ್ ರಾಠೋಡ, ಕೆ ಕೆ ಜಾಲಿಬೇರಿ, ಪ್ರವೀಣ ಹುಣಶಿಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Gadi Kannadiga

Leave a Reply