ಕುಷ್ಟಗಿ:ಕುಷ್ಟಗಿ-ನರಗುಂದ ಮಾರ್ಗವಾಗಿ ಘಟಪ್ರಭಾವರೆಗೆ ರೈಲು ಮಾರ್ಗ ಸಂಪರ್ಕಕಲ್ಪಿಸುವ ನೂತನ ಯೋಜನೆ ಬೇಡಿಕೆಗೆ
ಸಂಬಂಧಪಟ್ಟಂತೆ ಹೋರಾಟದ ರೂಪರೇಷಗಳನ್ನು ಹಮ್ಮಿಕೊಳ್ಳಬೇಕು ಅಂದಾಗ ನಮ್ಮ ಬೇಡಿಕೆಗೆ ನ್ಯಾಯಸಿಗುತ್ತದೆ.ಈ ಬೇಡಿಕೆ ಬಗ್ಗೆ ರಾಜ್ಯ ರೈಲು ಸಚಿವ ವಿ.ಸೋಮಣ್ಣ ಅವರ ಬಳಿ ತೆರಳಿ ಚರ್ಚೆ ಮಾಡೋಣ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಜಾತ್ಯಾತೀತವಾಗಿ ಎಲ್ಲರೂ ಕೂಡ ಹೋರಾಡಿದ ಮಾತ್ರ ಹೊಸ ರೈಲು ಮಾರ್ಗದ ಕನಸು ನನಸಾಗಲಿದೆ. ಹೋರಾಟ ಸಮಿತಿ ರಚಿಸಿಕೊಂಡು ನಂತರ ಯಾವ ರೀತಿ ಹೋರಾಟ ಮಾಡಬೇಕೆಂಬುದರ ಬಗ್ಗೆ ರೂಪರೇಷಗಳನ್ನು ಹಾಕಿಕೊಂಡು ಹೋರಾಟದ ಮೂಲಕ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಹೋರಾಟ ಸಮಿತಿಯ ಮೂಲಕ ಖುದ್ದಾಗಿ ಭೇಟಿ ನೀಡೋಣ ಎಂದರು.
ಇಂಜಿನಿಯರ್ ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಧ್ವನಿ ಎತ್ತುವ ಮೂಲಕ ನರಗುಂದ ತಾಲೂಕಿನಲ್ಲಿ ಆರಂಭಗೊಂಡ ಹೋರಾಟಕ್ಕೆ బల ತುಂಬಬೇಕಿದೆ. ಸಾರ್ವಜನಿಕರ ಒತ್ತಡ ಇದ್ದಾಗ ಮಾತ್ರ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ.
ಆರಂಭಗೊಂಡ ಕಾಮಗಾರಿಗಳ ಗತಿಯೂ ವೇಗವಾಗುತ್ತದೆ. ಗದಗ-ವಾಡಿ ರೈಲು ಮಾರ್ಗದ ಜತೆಗೆ ಹೊಸ ನೂತನ ರೈಲು ಮಾರ್ಗದ ಬೇಡಿಕೆ ಈಗ ಮತ್ತೆ ನೂತನ ರೈಲು ಮಾರ್ಗಕ್ಕಾಗಿ ಹೋರಾಟ ಆರಂಭಗೊಂಡಿದೆ ಎಂದರು.
ಕುಷ್ಟಗಿ-ನರಗುಂದ ಘಟಪ್ರಭಾ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನಬಸವ ನಂದಿ,ಉಪಾಧ್ಯಕ್ಷ ಜ್ಯೋತಿ ಬಾ ಹಾಗೂ ಕಾರ್ಯದರ್ಶಿ ಮಾರುತಿ ಭೋಸಲೆ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ,ಕೆ.ಮಹೇಶ,ಪುರಸಭೆ ಸದಸ್ಯ ಕಲ್ಲೇಶ ತಾಳದ್,ಸಮಾಜ ಸೇವಕ ರವಿಕುಮಾರ ಹಿರೇಮಠ,ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳಲಿಮಠ,ಅಖಿಲ ಭಾರತ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ. ಬಸವರಾಜ,ಸುಬಾನಿ ಆರ್ ಟಿ, ಬಸವರಾಜ ಗಾಣಗೇರ್,ಕಿರಣ್ ಜ್ಯೋತಿ,ನಜೀರಸಾಬ ಮೂಲಿಮನಿ,ಬಸವರಾಜ ಹಳ್ಳೂರು ಸೇರಿದಂತೆ ಅನೇಕರು ಇದ್ದರು.
ಕುಷ್ಟಗಿ-ನರಗುಂದ ಮಾರ್ಗವಾಗಿ ಘಟಪ್ರಭಾವರೆಗೆ ರೈಲು ಮಾರ್ಗದ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾಗಿ ದೊಡ್ಡನಗೌಡ ಪಾಟೀಲ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.