ಕುಷ್ಟಗಿ:- ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶ ಹಾಗೂ ಗಂಗಾವತಿ ಡಿಎಸ್ಪಿ ಸೂಚನೆಯ ಮೇರೆಗೆ ದ್ವಿಚಕ್ರ ವಾಹನಗಳು ಸರಿಯಾದ ನಾಮಫಲಕವಾಗದೆ ಹಾಗೂ ವಾಹನಗಳ ಕಾಗದ ಪತ್ರಗಳಲ್ಲದೆ ಚಲಾವಣೆ ಮಾಡುತ್ತಿದ್ದ ವಾಹನಗಳನ್ನು ಕುಷ್ಟಗಿ ಪೊಲೀಸರು ಹಿಡಿದು ಪೊಲೀಸ್ ಠಾಣೆಗೆ ತಂದಿದ್ದಾರೆ ಕೇವಲ ಒಂದರಿಂದ ಒಂದೂವರೆ ಗಂಟೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ನಂತರ ಸಿಪಿಐ ನಿಂಗಪ್ಪ ಎನ್ ಆರ್ ರವರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಆರ್ ಟಿ ಓ ಇಲಾಖೆಯ ನಿಯಮದ ಪ್ರಕಾರ ತಮ್ಮ ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅನ್ನು ಹಾಕಿಕೊಳ್ಳಬೇಕು ನಂತರ ದಾಖಲೆಗಳಿಲ್ಲದೆ ವಾಹನ ಸಂಚಾರ ಮಾಡುವ ವಾಹನಗಳನ್ನು ಮುಂದಿನ ದಿನಗಳಲ್ಲಿ ಹೀಗೆ ಮುಂದುವರಿದರೆ ಅಂತಹ ವಾಹನಗಳನ್ನು ಸೀಜ್ ಮಾಡಲಾಗುವುದು ಎಂದರು.ಸಂಚಾರ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಇದೊಂದು ಸಾರಿ ಈ ಎಲ್ಲಾ ವಾಹನಗಳಿಗೂ ದಂಡ ಹಾಕಿ ಬಿಡುಗಡೆ ಮಾಡುತ್ತೇವೆ ಮುಂದಿನ ದಿನಮಾನಗಳಲ್ಲಿ ವಾಹನ ಸವಾರರು ಇದೇ ರೀತಿ ಮುಂದುವರೆದರೆ ಅಂಥವರ ವಾಹನಗಳನ್ನು ಸೀಸ್ ಮಾಡಲಾಗುವುದು ಎಂದರು. ಪಿಎಸ್ಐ ಮೌನೇಶ್ ರಾಥೋಡ್ ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ