ಕುಷ್ಟಗಿ. ಪೆ.೧೬.ಇಂದು ಹುಬ್ಬಳ್ಳಿಯಲ್ಲಿ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ,ಕವಿ ,ನಾಡೋಜ ಚೆನ್ನವೀರ ಕಣವಿ ಅವರ ನಿಧನರಾದರು.
ಅವರ ನಿಧನಕ್ಕೆ ಕುಷ್ಟಗಿಯ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಇಲ್ಲಿನ ಬಸವ ಭವನದಲ್ಲಿ ಸಭೆ ಸೇರಿ ನುಡಿ ನಮನ ಸಲ್ಲಿಸಿದರು.
ಆರಂಭದಲ್ಲಿ ಅವರ ಬಾವಚಿತ್ರಕ್ಕೆ ಪುಷ್ಪ ನಮನ ಮಾಡಿದರು. ನಂತರ ಸಾಹಿತಿ ಪ್ರಮೋದ್ ತುರವಿಹಾಳ ಮಾತನಾಡಿ ಚೆಂಬೆಳಕಿನ ಕವಿ ಎಂದೆ ಖ್ಯಾತಿ ಗಳಿಸಿದ ಚೆನ್ನವೀರ ಕಣವಿಯವರ ಸಾವಿನಿಂದಾಗಿ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಅವರೊಂದಿಗೆ ಕಳೆದ ಕೆಲವು ಸವಿ ನೆನಪು ಗಳನ್ನು ಮೆಲುಕು ಹಾಕುವ ಮೂಲಕ ಅವರ ಒಡನಾಟದ ಕ್ಷಣಗಳನ್ನು ಸ್ಮರಿಸಿದ ಅವರು ಯುವ ಕವಿಗಳಿಗೆ ಸದಾ ಬೆಂಬಲಿಸುವ ಮೂಲಕ ಅವರ ಸಾಹಿತ್ಯಿಕ ಕೃಷಿಗೆ ಮಾರ್ಗದರ್ಶಕರಾಗಿದ್ದು ಅವರ ದೊಡ್ಡ ಗುಣ ನಾಡಿಗೆ ಅವರು ನೀಡಿದೆ ಕೋಡುಗೆ ಅಪಾರ ಅವರ ಸಾಧನೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ,ನಾಡೋಜ ,ಮತ್ತು ಡಾಕ್ಟರೇಟ್ ,ಸೇರಿದಂತೆ ಹಲವಾರು ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕಾರ ಗಳು ದೊರೆತಿವೆ ಎಂದು ಅಭಿಪ್ರಾಯ ಪಟ್ಟರು.
ನಂತರ ಜನಪದ ಕಲಾವಿದ ಶರಣಪ್ಪ ವಡಗೇರಿ ಮಾತನಾಡಿ ಕವಿ ಚೆನ್ನವೀರ ಕಣವಿ ಅಸಾಧಾರಣ ವ್ಯಕ್ತಿತ್ವ ಉಳ್ಳ ಸರಳ ಕವಿಗಳು ಅವರ ಅಗಲಿಕೆ ನೋವಿನ ಸಂಗತಿ ಅವರ ಕುಟುಂಬಕ್ಕೆ ಸಹಿಸುವ ಶಕ್ತಿ ಭಗವಂತನು ದಯಪಾಲಿಸಲಿ ಎಂದು ನುಡಿದರು.
ಸಾಹಿತಿಗಳಾದ ತಾಜುದ್ದಿನ ದಳಪತಿ ,ಹನಮಂತಪ್ಪ ಈಟಿಯವರು ,ವೀರೇಶ ಬಂಗಾರ ಶೆಟ್ಟರ್ ,ಮಾತನಾಡಿ ನುಡಿನಮನ ಸಲ್ಲಿಸಿದರು. ಆರಂಭದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ರವಿಂದ್ರ ಬಾಕಳೆ ಅವರು ಚೆನ್ನವೀರ ಕಣವಿ ಅವರು ರಚಿಸಿದ್ದ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎನ್ನುವ ಗೀತೆಯನ್ನು ಹಾಡುವ ಮೂಲಕ ನುಡಿ ನಮನ ಸಲ್ಲಿಸಿದರು.
ವೇದಿಕೆಯ ಮೇಲೆ ಮಾಜಿ ಕ.ಸಾ.ಪ ಅಧ್ಯಕ್ಷ ಉಮೇಶ ಹಿರೇಮಠ ,ಅಲ್ತಾಫ್ ,ಚೆನ್ನಪ್ಪ ಬಾವಿಮನಿ ,ಫಕೀರಪ್ಪ ಟಕ್ಕಳಕಿ, ಮಾಧ್ಯಮದ ವಿ.ಎಸ್.ಸೊಪ್ಪಿಮಠ ,ಭೀಮಸೇನರಾವ್ ಕುಲಕರ್ಣಿ. ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಭರತ ಜೋಶಿ ಅವರು ನಿರೂಪಿಸಿ ವಂದಿಸಿದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ