ಬೆಳಗಾವಿ :ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಮನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ನಿನ್ನ ಮಗನ ಭವಿಷ್ಯದ ಸಲುವಾಗಿ ಧೈರ್ಯದಿಂದ ಹೋರಾಟ ಮಾಡಬೇಕು ಎಂದು ಧೈರ್ಯ ತುಂಬಿದರು.
ಸಂತೋಷ ಅವರ ಒಂದು ವರ್ಷದ ಮುಗ್ದ ಮಗ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಮಡಿಲಲ್ಲಿ ಆಟವಾಡುವ ದೃಶ್ಯ ಮನಕಲಕುವಂತಿತ್ತು.ಸಂತೋಷ್ ಮನೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.