This is the title of the web page
This is the title of the web page

Please assign a menu to the primary menu location under menu

Local News

ಆರ್.ಎಸ್.ಎಸ್ ಕಚೇರಿ ಮೇಲೆ ತಿರಂಗ ಹಾರಾಡಿದ್ದು ನಾನು ನೋಡಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್


ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಗತಿಸಿದ್ದು ಸರಕಾರವು ಅಮೃತ ಮಹೋತ್ಸವ ಕಾ ದಿನ ಆಚರಣೆ ಮಾಡಲು ಮುಂದಾಗಿದ್ದು ಇದು ರಾಜಕೀಯವಾಗಿ ಆಚರಣೆಯಾಗದೇ ರಾಜಕೀಯೇತರವಾಗಿ ಆಚರಣೆಯಾಗಿಲಿ ಎಂದು ನಾನು ಭಯಸುತ್ತೇನೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಆರ್‌.ಎಸ್.ಎಸ್ ಕಚೇರಿಯ ಮೇಲೆ ತಿರಂಗ ಧ್ವಜ ಹಾರಾಡಿದ್ದನ್ನು ನಾನು ನೋಡಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಮಲದ ಕಾಲೆಳೆದಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸ್ವಾತಂತ್ರ್ಯ ಸಿಕ್ಕು 75ನೇ ವರ್ಷಕ್ಕೆ ನಾವೆಲ್ಲ ಕಾಲಿಡುತ್ತಿದ್ದು ಸಂಭ್ರಮವೇ ಸರಿ. ಇದೇ ಕಾರಣಕ್ಕೆ ಬಿಜೆಪಿಯು ಸ್ವಾತಂತ್ರ್ಯ ದಿನವನ್ನು ಅಮೃತ ಮಹೋತ್ಸವ ದಿನವನ್ನಾಗಿ ಆಚೆರಣೆ ಮಾಡುತ್ತಿದ್ದು ಇದು ರಾಜಕೀಯದ ಒಂದು ಭಾಗವಾಗದಿರಲಿ ಎಂದರು. ಸ್ವಾತಂತ್ರ್ಯ ಸಿಕ್ಕಾಗಿನಿಂದ ಆರ್.ಎಸ್‍ಎಸ್ ಕಚೇರಿಯ ಮೇಲೆಯೇ ರಾಷ್ಟ್ರಧ್ವಜ ಹಾರಾಡಿರಲಿಲ್ಲ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆಯನ್ನು ನಾವು ರಾಜಕೀಯವಾಗಿ ನೋಡಲು ಇಷ್ಟಪಡಲ್ಲ ಎಂದರು.

ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ ಬಿಜೆಪಿಯ ಉದ್ದೇಶ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಪ್ರತಿಯೊಂದನ್ನು ರಾಜಕೀಯವಾಗಿ ನೋಡಬಾರದು. ಒಬ್ಬ ಆದಿವಾಸಿ ಮಹಿಳೆ ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿದ್ದಾರೆ. ಬಲಿಷ್ಠ ಪ್ರಜಾಪ್ರಭುತ್ವ ದೇಶದ ರಾಷ್ಟ್ರಪತಿಗಳಾಗಿ ಅವರು ಆಯ್ಕೆಯಾಗಿದ್ದಾರೆ. ನಾನು ಅವರನ್ನು ಮನಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದರು.


Gadi Kannadiga

Leave a Reply