This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ತೃಪ್ತಿ ತಂದಿದೆ: ಲಕ್ಷ್ಮೀ ಹೆಬ್ಬಾಳಕರ


ಬೆಳಗಾವಿ: “ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಓರ್ವ ಶಾಸಕಿಯಾಗಿ ಕ್ಷೇತ್ರದಲ್ಲಿ ಕೈಗೊಂಡ ಎಲ್ಲ ತರಹದ ಅಭಿವೃದ್ಧಿ ಕೆಲಸಗಳು ಮನಸ್ಸಿಗೆ ತೃಪ್ತಿಯನ್ನುಂಟು ಮಾಡಿವೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
 ಕುಕಡೊಳ್ಳಿ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ನೂತನ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ  ಕೈಗೊಂಡು ಚಾಲನೆ ನೀಡಿ ಅವರು ಮಾತನಾಡಿದರು.
“ಜನರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಜತೆಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಜ್ವಲಂತ ಉದಾಹರಣೆಯಾಗಿದೆ” ಎಂದು ಅವರು ಹೇಳಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ವೀರನಗೌಡ ಪಾಟೀಲ, ಮಂಜು ಹುಬ್ಬಳ್ಳಿ, ರಮೇಶ ಮರಕಟ್ಟಿ, ಕಲ್ಲಪ್ಪ ಬಸರಿ, ತಾಯಪ್ಪ ಕಮ್ಮಾರ, ಶಿವಾನಂದ ದೇವಲತ್ತಿ, ಶಿವಾಜಿ ಭೈರೋಜಿ, ಬಸಪ್ಪ ಭೈರೋಜಿ, ಅರ್ಜುನ ಬಸರಗಿ, ಕಲ್ಲಪ್ಪ ಭೈರೋಜಿ, ನೂತನ ಬಸರಿ, ಈರಣ್ಣ ಕುರುಬರ, ನಾಗೇಶ ಮೆಟ್ಟಿನ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Leave a Reply