This is the title of the web page
This is the title of the web page

Please assign a menu to the primary menu location under menu

Local News

ನೂತನ ಖಂಡೋಬಾ ಮಂದಿರ ನಿರ್ಮಾಣ ಕಾಮಗಾರಿಗೆ ಶಾಸಕ ಅನಿಲ ಬೆನಕೆಯವರಿಂದ ಭೂಮಿಪೂಜೆ


ಬೆಳಗಾವಿ: ದಿನಾಂಕ ೧೬-೦೬-೨೦೨೨ ರಂದು ಗಣಾಚಾರಿ ಗಲ್ಲಿಯ ಬಕರಿಮಂಡಿಯಲ್ಲಿ ನೂತನ ಖಂಡೋಬಾ ಮಂದಿರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮುಖಾಂತರ ಕಾಮಗಾರಿಗೆ ಚಾಲನೆ ನೀಡಲಾಯಿತು.
ಖಂಡೋಬಾ ಖಾಟಿಕ ಸಮುದಾಯದ ಆರಾಧ್ಯ ದೈವ ಹಾಗೂ ಕುಲದೈವವಾಗಿರುವುದರಿಂದ ಖಾಟಿಕ ಸಮಾಜದವರು ಹಲವು ವರ್ಷಗಳಿಂದ ಮಂದಿರ ನಿರ್ಮಾಣ ಮಾಡುವ ನಿರೀಕ್ಷೆಯಲ್ಲಿದ್ದರು, ಎಲ್ಲ ಖಾಟಿಕ ಸಮಾಜದ ಮುಖಂಡರುಸೇರಿ ಇಂದು ಶಾಸಕ ಅನಿಲ ಬೆನಕೆ ಅವರ ಹಸ್ತದಿಂದ ಭೂಮಿಪೂಜೆ ಮಾಡಿ ಈ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಈ ದೇವಾಲಯದ ನಿರ್ಮಾಣ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು, ಸರಕಾರದಿಂದ ದೊರೆಯಬಹುದಾದ ಎಲ್ಲ ಆರ್ಥಿಕ ಸಹಾಯವನ್ನು ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಈವೇಳೆ ಖಾಟಿಕ ಸಮಾಜದ ಅಧ್ಯಕ್ಷರಾದ ಉದಯ ಗೊಡಕೆ, ದೀಪಕ ಗಾಯಕವಾಡ, ದಾಮೋದರ ಭೊರಡೆ, ಪ್ರಕಾಶ ಮಹಾಗಾಂವಕರ, ಸುಧೀರ ಗೊಡಕೆ, ಅಶೋಕ ಕಾಂಬಳೆ, ಧನಂಜಯ ಗೊಡಕೆ, ದೀಪಕ ಶೆಟಕೆ, ಚಂದ್ರಕಾಂತ ಬೆಳಗಾಂವಕರ, ಸುನಿಲ ಬೆಳಗಾಂವಕರ, ಸಿದ್ಧು ಕಾಳಗೆ, ಸತೀಶ ಗೊಡಕೆ, ಅಡಳಿತ ಮಂಡಳಿ ಮತ್ತು ಸಮಾಜ ಪ್ರಮುಖರು ಉಪಸ್ಥಿತರಿದ್ದರು.


Gadi Kannadiga

Leave a Reply