This is the title of the web page
This is the title of the web page

Please assign a menu to the primary menu location under menu

State

24 ಲಕ್ಷ ರೂ ವೆಚ್ಚದ ಡಾ. ಬಿ ಆರ್ ಅಂಬೇಡ್ಕರ್ ಭವನಕ್ಕೆ ಭೂಮಿಪೂಜೆ


ಗಂಗಾವತಿ ವಿಧಾನ ಸಭಾ ಕ್ಷೇತ್ರ ಬಸಾಪಟ್ಟಣ ಮತ್ತು ವೆಂಕಟಗಿರಿ ಗ್ರಾಮದಲ್ಲಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಭೂಮಿ ಪೂಜೆ ಮಾಡಲಾಯಿತು

ನಂತರ ಮಾತನಾಡಿದ ಶಾಸಕರಾದ ಪರಣ್ಣ ಮುನವಳ್ಳಿ ಅವರು ಬಸಾಪಟ್ಟಣ ಮತ್ತು ವೆಂಕಟಗಿರಿ ಗ್ರಾಮದಲ್ಲಿ ಸುಮಾರು 24 ಲಕ್ಷ ರೂಪಾಯಿ ವೆಚ್ಚದಲ್ಲಿ ಡಾ.ಬಿ.ಆರ.ಅಂಬೇಡ್ಕರ್ ಭವನಕ್ಕೆ ಇಂದು ಭೂಮಿ ಪೂಜೆ ಮಾಡಲಾಯಿತು ಯಾವುದೇ ಗುಣಮಟ್ಟದ ಕಾಮಗಾರಿಯನ್ನು ಮಾಡಬೇಕು ಯಾವುದೇ ಕಾರಣಕ್ಕೆ ಕಳಪೆ ಕಾಮಗಾರಿಯನ್ನು ಮಾಡಬಾರದೆಂದು ಗುತ್ತಿಗೆದಾರರಿಗೆ ಸಲಹೆಯನ್ನು ನೀಡಿದರು ಬಹುದಿನದ ಕನಸು ಗ್ರಾಮದವರು ಬೇಡಿಕೆ ಇತ್ತು ಆದಕಾರಣ ಡಾ.ಬಿ‌.ಆರ್.ಅಂಬೇಡ್ಕರ್ ಭವನವನ್ನು ಆದಷ್ಟು ಬೇಗ ಮಾಡಬೇಕು ಸಾರ್ವಜನಿಕರು ಈ ಭವನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಸಲಹೆಯನ್ನು ನೀಡಿದರು ನಂತರ ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಸಾಧ್ಯವಾದಷ್ಟು ನಿಮ್ಮ ಮನೆಯ ಮುಂದೆ ಕಾಲಿ ಇರುವ ಜಾಗದಲ್ಲಿ ಒಂದು ಸಸಿಗಳನ್ನು ನೆಡಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಬಸಾಪಟ್ಟಣ ಗ್ರಾ.ಪಂ.ಅಧ್ಯಕ್ಷರಾದ ಮಂಜಮ್ಮ ಗಂಡ ಬೂನೇಶಪ್ಪ ಗ್ರಾ.ಪಂ.ಸದಸ್ಯರಾದ ಕನಕರಾಜ ನಾಯನ.ಉಪಾಧ್ಯಕ್ಷರಾದ ಶ್ರೀಕಾಂತ್. ಮಾಜಿ ಎಪಿ.ಎಮ್ಸಿ ಅಧ್ಯಕ್ಷರಾದ ಸಣ್ಣಕ್ಕಿನೀಲಪ್ಪ ಮುಖಂಡರಾದ ವಿಠಲಾಪೂರು ಯಮನಪ್ಪ.ಕೆಡಿಪಿ.ಸದಸ್ಯರಾದ ಅಮರೇಗೌಡ ವೆಂಕಟಗಿರಿ. ಬಗರ ಹುಕಂ ಸಮಿತಿಯ ಸದಸ್ಯರಾದ ಸಿದ್ದಲಿಂಗಯ್ಯ ಗಡ್ಡಿಮಠ. ಶಂಕರ್ ಬಾಳೇಕಾಯಿ.ರಾಘವೇಂದ್ರ. ಭಜೇಂತ್ರಿ.ಆರ್.ದೇವಾನಂದ್. ಮಂಜುನಾಥ. ರವಿ.ಚಂದ್ರೇಗೌಡ.ಶಿವಪ್ಪ ಮಾದಿಗ ಸೇರಿದಂತೆ ಇತರರು ಇದ್ದರು..

ವರದಿ
ಹನುಮೇಶ್ ಬಟಾರಿ


Gadi Kannadiga

Leave a Reply